AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾಸ್ಟ್​ ಕಾರ್ಡ್​​ನಲ್ಲಿ ಹಣ ಇಲ್ಲದೇ ಮಾರಸಂದ್ರ ಟೋಲ್ ಬಳಿ ನಿಂತ ಬರೋಬ್ಬರಿ 15 ಬಿಎಂಟಿಸಿ ಇವಿ ಬಸ್​ಗಳು

ಬಿಎಂಟಿಸಿಯ ಇವಿ ಬಸ್​​ಗಳು ಟೋಲ್ ಹಣ ಕಟ್ಟಲು, ಫಾಸ್ಟ್​​ ಟ್ಯಾಗ್​ನಲ್ಲಿ ಚಾರ್ಜ್​​​​ ಇಲ್ಲದೆ ಟೋಲ್‌ ​ಬಳಿಯೆ ನಿಂತ ಘಟನೆ ದೊಡ್ಡಬಳ್ಳಾಪುರದ ಬಳಿ ಇರುವ ಮಾರಸಂದ್ರ ಟೋಲ್ ಗೇಟ್​ ಬಳಿ ನಡೆದಿದೆ. ಇದರಿಂದ ಪ್ರಯಾಣಿಕರು ಪರಾದಾಡುವಂತಾಯಿತು.

ಫಾಸ್ಟ್​ ಕಾರ್ಡ್​​ನಲ್ಲಿ ಹಣ ಇಲ್ಲದೇ ಮಾರಸಂದ್ರ ಟೋಲ್ ಬಳಿ ನಿಂತ ಬರೋಬ್ಬರಿ 15 ಬಿಎಂಟಿಸಿ ಇವಿ ಬಸ್​ಗಳು
ಬಿಎಂಟಿಸಿ ಬಸ್​ (ಎಡಚಿತ್ರ) ಟೋಲ್​ (ಬಲಚಿತ್ರ)
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on: Mar 08, 2023 | 4:59 PM

Share

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಿಲಿಕಾನ್​ ಸಿಟಿ (Silicon City) ಜನರ ಪಾಲಿಗೆ ಜೀವನಾಡಿಯಾಗಿದೆ. ನಗರದ ಯಾವುದೇ ಭಾಗಗಕ್ಕು ಸಂಪರ್ಕ ಕಲ್ಪಿಸತ್ತಿದ್ದು, ಸಾಕಷ್ಟು ಅನುಕೂಲಕಾರಿಯಾಗಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಪರಿಸರ ಸ್ನೇಹಿ ಬಸ್​ಗಳು (ಎಲೆಕ್ಟ್ರಿಕ್​ ಬಸ್)ಗಳು ಸಂಚರಿಸುತ್ತಿವೆ.  ಬಿಎಂಟಿಸಿಯ ಇವಿ ಬಸ್​​ಗಳು (Electric Bus) ಟೋಲ್ (Toll) ಹಣ ಕಟ್ಟಲು, ಫಾಸ್ಟ್​​ ಟ್ಯಾಗ್​ನಲ್ಲಿ ಚಾರ್ಜ್​​​​ ಇಲ್ಲದೆ ಟೋಲ್‌ ​ಬಳಿಯೇ ನಿಂತ ಘಟನೆ ದೊಡ್ಡಬಳ್ಳಾಪುರದ ಬಳಿ ಇರುವ ಮಾರಸಂದ್ರ ಟೋಲ್ ಗೇಟ್​ ಬಳಿ ನಡೆದಿದೆ. ಇದರಿಂದ ಪ್ರಯಾಣಿಕರು ಪರಾದಾಡುವಂತಾಯಿತು.

ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ

ಖಾಸಗಿಯವರ ಸಹಭಾಗಿತ್ವದಲ್ಲಿ ರಸ್ತೆಗೆ ಇಳಿದಿರುವ ಪರಿಸರ ಸ್ನೇಹಿ ಎಲೆಕ್ಟ್ರಿಕ್​ ಬಸ್​ಗಳು (EV Bus​) ನಿನ್ನೆ (ಮಾ.7) ರಂದು ಸಂಜೆ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬರುತ್ತಿದ್ದವು. ಮಾರಸಂದ್ರ ಟೋಲ್​ ಬಳಿ ಬರುತ್ತಿದ್ದಂತೆ ಬಸ್​ ನಿಂತುಹೋಗಿವೆ. ಬಸ್​ನ ಎಲ್ಲ ಭಾಗಗಳು ಮತ್ತು ಬ್ಯಾಟರಿ ಚಾರ್ಜ್​​ ಸರಿಯಾಗಯೇ ಇತ್ತು. ಆದರೆ ಟೋಲ್​​ಗೆ ಹಣ ತುಂಬಲು ಫಾಸ್ಟ್​​ ಟ್ಯಾಗ್​ನಲ್ಲಿ ಹಣ ಖಾಲಿಯಾಗಿತ್ತು. ಈ ರೀತಿ ಒಂದೆರಡು ಬಸ್​ಗಳಲ್ಲ ಸರಿ ಸುಮಾರು 15ಕ್ಕೂ ಹೆಚ್ಚು ಬಸ್​ಗಳು ಟೋಲ್​​ ಪಾಸ್​ ಆಗಲು ಫಾಸ್ಟ್​​ ಟ್ಯಾಗ್​ನಲ್ಲಿ ಹಣವಿಲ್ಲದೆ ಟೋಲ್​ ಬಳಿಯೇ ನಿಂತಿವೆ.

ಬಸ್​ಗಳು ಹೀಗೆ ಟೋಲ್​ ಬಳಿ ನಿಂತುಕೊಳ್ಳುತ್ತಿದ್ದಂತೆ, ಪ್ರಯಾಣಿಕರು ಕೆಲ ಕಾಲ ಕಾದು ವಿಧಿಯಿಲ್ಲದೆ ಬೇರೆ ಬಸ್​​ಗೆ ಹತ್ತಿಕೊಂಡು ತಮ್ಮ ಮುಂದಿನ ಪ್ರಯಾಣ ಬೆಳಸಿದ್ದಾರೆ. ಬಿಎಂಟಿಸಿಯ ಈ ಎಡವಟ್ಟಿಗೆ ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ?
ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ?
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ