ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ (ಜ.26) 48,905 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 39 ಜನರು ಸಾವನ್ನಪ್ಪಿದ್ದಾರೆ. 41,699 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 3,57,909 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 22.51 ಇದೆ. ಸೋಂಕಿನಿಂದ ಸಾವನ್ನಪ್ಪುವವರ ಸರಾಸರಿ ಶೇ 0.07 ಇದೆ. ಈವರೆಗೆ ಒಟ್ಟು 36.54.413 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 32,57,769 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 38,705 ಜನರು ಸಾವನ್ನಪ್ಪಿದ್ದಾರೆ..
ಬೆಂಗಳೂರು ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 22,427 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 18,734 ಜನರು ಚೇತರಿಸಿಕೊಂಡಿದ್ದಾರೆ. ಎಂಟು ಮಂದಿ ಸಾವನ್ನಪ್ಪಿದ್ದಾರೆ. ನಗರದಲ್ಲಿ ಪ್ರಸ್ತುತ 2,16,145 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಒಟ್ಟು 16,534 ಜನರು ಸಾವನ್ನಪ್ಪಿದ್ದಾರೆ. ಈವರೆಗೆ ಒಟ್ಟು 16,48,758 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 14,16,078 ಜನರು ಚೇತರಿಸಿಕೊಂಡಿದ್ದಅರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 22,427, ಬಾಗಲಕೋಟೆ 610, ಬಳ್ಳಾರಿ 1141, ಬೆಳಗಾವಿ 791, ಬೆಂಗಳೂರು ಗ್ರಾಮಾಂತರ 828, ಬೀದರ್ 377, ಚಾಮರಾಜನಗರ 917, ಚಿಕ್ಕಬಳ್ಳಾಪುರ 734, ಚಿಕ್ಕಮಗಳೂರು 251, ಚಿತ್ರದುರ್ಗ 445, ದಕ್ಷಿಣ ಕನ್ನಡ 888, ದಾವಣಗೆರೆ 514, ಧಾರವಾಡ 1523, ಗದಗ 318, ಹಾಸನ 2016, ಹಾವೇರಿ 297, ಕಲಬುರ್ಗಿ 1007, ಕೊಡಗು 939, ಕೋಲಾರ 1547, ಕೊಪ್ಪಳ 279, ಮಂಡ್ಯ 2186, ಮೈಸೂರು 2797, ರಾಯಚೂರು 276, ರಾಮನಗರ 187, ಶಿವಮೊಗ್ಗ 444, ತುಮಕೂರು 2645, ಉಡುಪಿ 1392, ಉತ್ತರ ಕನ್ನಡ 747, ವಿಜಯಪುರ 212, ಯಾದಗಿರಿ 170.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ 8, ದಕ್ಷಿಣ ಕನ್ನಡ, ಹಾಸನ 4, ಮೈಸೂರು 3, ಕಲಬುರ್ಗಿ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ರಾಮನಗರ, ಮಂಡ್ಯ 2, ಬೆಳಗಾವಿ, ರಾಯಚೂರು, ಬೆಂಗಳೂರು ಗ್ರಾಮಾಂತರ, ಉಡುಪಿ, ಚಾಮರಾಜನಗರ, ರಾಯಚೂರು, ಗದಗ, ವಿಜಯಪುರ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಇಂದಿನ 26/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/u8l8FYTsTO @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/X4QZhgg1Uj
— K’taka Health Dept (@DHFWKA) January 26, 2022
ಇದನ್ನೂ ಓದಿ: ಧಾರವಾಡ: ಕೊರೊನಾ ನಂತರ ಖಾಸಗಿ ಶಾಲೆಗಳಲ್ಲಿ ಹಾಜರಾತಿ ಇಳಿಕೆ, ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳ!
ಇದನ್ನೂ ಓದಿ: President Speech: ರಾಷ್ಟ್ರಪತಿ ರಾಮನಾಥ ಕೋವಿಂದ್ ಗಣರಾಜ್ಯೋತ್ಸವ ಭಾಷಣ: ಕೊವಿಡ್ ಶಿಷ್ಟಾಚಾರ ಪಾಲನೆ ಈಗ ರಾಷ್ಟ್ರಧರ್ಮ