ಬೆಂಗಳೂರು, ಆ.28: ರಾಜ್ಯದಲ್ಲಿ ಶಕ್ತಿ ಯೋಜನೆ(Shakti Scheme) ಜಾರಿಯಾದ ಬಳಿಕ ಯಾವ ದೇವಸ್ಥಾನಕ್ಕೆ ಕಾಲಿಟ್ಟರು ತುಂಬಿ ತುಳುಕುತ್ತಿವೆ. ಅದರಲ್ಲೂ ಮುಜರಾಯಿ ವ್ಯಾಪ್ತಿಯ ಪ್ರಮುಖ ದೇವಾಲಯಗಳಲ್ಲಿ(Temples) ಜನರು ಹರಕೆ, ಪೂಜೆ ಸಲ್ಲಿಸಲು ಪರದಾಡುವಂತಾಗುತ್ತಿದೆ. ಇನ್ನೊಂದೆಡೆ ವಸತಿ, ಲಾಡ್ಜ್ ಸಿಗದೆ ಭಾರೀ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಈ ಎಲ್ಲಾ ಪರದಾಟ ತಪ್ಪಿಸಲು ಮುಜರಾಯಿ ಇಲಾಖೆ ಹೊಸ ಪ್ಲಾನ್ಗೆ ಮುಂದಾಗಿದೆ. ಭಕ್ತರಿಗೆ ಮತಷ್ಟು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಆನ್ಲೈನ್ ಯೋಜನೆ ಜಾರಿಗೆ ಮುಂದಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ(Ramalinga Reddy)ತಿಳಿಸಿದ್ದಾರೆ .
ಮುಜರಾಯಿ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಹಾಗೂ ದರ್ಶನಕ್ಕೆ ಇನ್ನು ಹೆಚ್ಚು ಪ್ರಯಾಸ ಪಡಬೇಕಾಗಿಲ್ಲ. ಹೌದು ಜನರ ಪರದಾಟ ತಪ್ಪಿಸಲು ಕೋಟ್ಯಾಂತರ ಭಕ್ತರ ಅನುಕೂಲದ ದೃಷ್ಟಿಯಿಂದ ಹಿಂದೂ ಧಾರ್ಮಿಕ ಹಾಗೂ ಧರ್ಮದಾಯಿ ದತ್ತಿ ಇಲಾಖೆ ಮಹತ್ವದ ಹೆಜ್ಜೆಗೆ ಮುಂದಾಗಿದೆ. ಮುಜರಾಯಿ ಇಲಾಖೆ ಅಡಿಯಲ್ಲಿ ಹಾಗೂ ಸೇವಾ ಸೌಲಭ್ಯ ಇರುವ ದೇವಸ್ಥಾನಗಳಲ್ಲಿ ಆನ್ಲೈನ್ ಸೇವೆ ನೀಡಲು ಮುಂದಾಗಿದೆ. ಮುಜರಾಯಿ ಇಲಾಖೆಯ ವಸತಿ ಗೃಹ ಇರುವ ದೇವಸ್ಥಾನಗಳಲ್ಲಿಯೂ ಈ ಅವಕಾಶ ನೀಡಲು ಮುಂದಾಗಿದೆ.
ತಿರುಪತಿ ಸೇರಿದಂತೆ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ಚಾಮುಂಡೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ಸೇರಿದಂತೆ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಎಲ್ಲವನ್ನು ಮುಗಂಡ ಬುಕ್ಕಿಂಗ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲು ಮುಂದಾಗಿದೆ. ಯಾವುದೇ ಹರಕೆ ಪೂಜೆ, ವಿಶೇಷ ಸೇವೆ, ವಸತಿ ಗೃಹಗಳ ಬುಕ್ಕಿಂಗ್, ಮದುವೆ ಅಥವಾ ಯಾವುದೇ ಶುಭ ಸಮಾರಂಭಗಳಿಗೆ ಮೊದಲೆ ನೀವು ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದರಿಂದ ನೀವು ದೇವಸ್ಥಾಗಳಲ್ಲಿ ತುರ್ತು ಸೇವೆ ಹಾಗೂ ವಸತಿ ಸೌಲಭ್ಯ ಪಡೆಯಬಹುದಾಗಿದೆ.
ಇದನ್ನೂ ಓದಿ: ಬೆಂಗಳೂರು ಟು ಕಾಶಿಗೆ ಹೊರಟ ನಾಲ್ಕನೇ ರೈಲಿಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಸಿರು ನಿಶಾನೆ
ಗೃಹ ಶಕ್ತಿ ಯೋಜನೆಯ ಎಫೆಕ್ಟ್ ಎಲ್ಲ ದೇವಸ್ಥಾನಗಳು ಪುಲ್ ರಶ್ ಹಿನ್ನಲೆ ಜನರು ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವಸತಿ, ಹಾಗೂ ಹರಕೆ ಮತ್ತಿತರ ಸೇವೆಗೆ ಪರದಾಡಬೇಕಿದೆ. ಇದನ್ನ ತಪ್ಪಿಸಲು ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಆನ್ಲೈನ್ ಸೇವೆ ನೀಡಲು ಮುಂದಾಗಿದೆ. ಇದಕ್ಕಾಗಿ ಆನ್ಲೈನ್ ಕಂಪ್ಲೀಟ್ ಸೇವೆ ನೀಡಲು ಬೆಂಗಳೂರಿನಲ್ಲಿ ಬುಕ್ಕಿಂಗ್ ಹಾಗೂ ಕಮಾಡಿಂಗ್ ಸೆಂಟರ್ ತೆರದು ನಿರ್ವಹಣೆಗೆ ಮುಂದಾಗಿದೆ. ಈ ಮೂಲಕ ಖಾಸಗಿ ವಸತಿ ಗೃಹಗಳಿಗೆ ಸೋರಿಕೆಯಾಗುತ್ತಿದ್ದ ಹಣ ಮತ್ತು ಹೆಚ್ಚು ತುರ್ತು ಸೇವಯಿಂದ ಭಕ್ತರಿಗೆ ಹೆಚ್ಚಿನ ಅವಕಾಶ ಹಿನ್ನಲೆ ಭಕ್ತರಿಗೆ ವಿಶೇಷ ಅನಕೂಲದ ಜೊತೆ ಹುಂಡಿ ಹಣ ಡಬಲ್ ಮಾಡುವ ಯೋಜನೆಗೆ ಮುಜರಾಯಿ ಇಲಾಖೆ ಕೈಹಾಕಿದೆ.
ಒಟ್ನಲ್ಲಿ ಮುಜರಾಯಿ ಇಲಾಖೆ ಭಕ್ತರಿಗೆ ಇ-ಸೌಲಭ್ಯದ ಜೊತೆ ಜನರ ಪರದಾಟ ದೂರು ಮಾಡುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ಸುಲಭ ಸೇವೆ ನೀಡುವುದರ ಮೂಲಕ ದೇವಸ್ಥಾನದ ಹುಂಡಿ ಹಣ ಡಬಲ್ ಮಾಡಿಕೊಳ್ಳುವ ತಂತ್ರಕ್ಕೆ ಸರ್ಕಾರ ಮುಂದಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ