ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ನ ಸರಕು ಮತ್ತು ಸೇವಾ ತೆರಿಗೆ (GST) ವ್ಯಾಪ್ತಿಗೆ ತರುವ ಕುರಿತು ಈಗಾಗಲೇ ಹಲವು ಚರ್ಚೆಗಳು ನಡೆದಿವೆ. ಹಲವು ವರ್ಷಗಳಿಂದ ಇದಕ್ಕೆ ಪರ ವಿರೋಧಗಳು ವ್ಯಕ್ತವಾಗಿವೆ. ಪೆಟ್ರೋಲ್ ಮತ್ತು ಡೀಸೆಲ್ನ ಜಿಎಸ್ಟಿ ವ್ಯಾಪ್ತಿಗೆ ತರುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ದೇಶದ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಈ ರಾಜ್ಯಗಳ ಪಟ್ಟಿಗೆ ಕರ್ನಾಟಕವೂ ಸೇರಿದೆ. ಕಾರಣ ಇಂತಹ ಬದಲಾವಣೆಯಿಂದ ಆದಾಯವನ್ನು ಕಡಿಮೆ ಮಾಡಬಹುದು. ಈ ಬಗ್ಗೆ ನಾಳೆ ( ಸೆ.16)ಕ್ಕೆ ಲಕ್ನೋದಲ್ಲಿ ಜಿಎಸ್ಟಿ ಸಭೆ ನಡೆಯಲಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಪೆಟ್ರೋಲ್ ಮತ್ತು ಡೀಸೆಲ್ನ ಜಿಎಸ್ಟಿ ವ್ಯಾಪ್ತಿಗೆ ತರುವ ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ. ಕರ್ನಾಟಕದಿಂದ ವಾಣಿಜ್ಯ ತೆರಿಗೆ ಆಯುಕ್ತ ಸಿ ಶಿಖಾ ಅವರು ಸಭೆಯಲ್ಲಿ ಭಾಗವಹಿಸುತ್ತಾರೆ. ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗುವುದರಿಂದ ಶುಕ್ರವಾರ ನಡೆಯುವ ಸಭೆಯಲ್ಲಿ ಬೊಮ್ಮಾಯಿ ಪರವಾಗಿ ವಾಣಿಜ್ಯ ತೆರಿಗೆ ಆಯುಕ್ತ ಸಿ ಶಿಖಾ ಅವರು ಭಾಗವಹಿಸಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಖಾತೆ ಹೊಂದಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೊರೊನಾದಿಂದ ಉಂಟಾದ ಆರ್ಥಿಕ ಪರಿಸ್ಥಿತಿಯನ್ನು ಚೇತರಿಸಿಕೊಳ್ಳಲು ನಮಗೆ ಸಮಯ ಬೇಕಾಗಿರುವುದರಿಂದ ಪರಿಹಾರವನ್ನು ಮುಂದುವರಿಸುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಬೊಮ್ಮಾಯಿ ಶಿಖಾಗೆ ಎರಡು ಪತ್ರಗಳನ್ನು ನೀಡಿದ್ದಾರೆ. ಒಂದು ದೀರ್ಘಾವಧಿಯವರೆಗೆ ಪರಿಹಾರ ನೀಡುವ ಮನವಿ ಪತ್ರವಾಗಿದೆ. ಇನ್ನೊಂದು ಜಿಎಸ್ಟಿ ಪ್ರಸ್ತಾಪದ ಬಗ್ಗೆ ಕರ್ನಾಟಕದ ಅಭಿಪ್ರಾಯ ಹೊಂದಿರುವ ಪತ್ರವಾಗಿದೆ.
ಇನ್ನು ಕೇಂದ್ರ ಸರ್ಕಾರದ ಪ್ರಸ್ತಾವನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ಜಿಎಸ್ಟಿ ಸಲಹಾ ಮಂಡಳಿಯ ಸದಸ್ಯ ಬಿ.ಟಿ.ಮನೋಹರ್, ಕರ್ನಾಟಕ ಮಾತ್ರವಲ್ಲ, ಹಲವು ರಾಜ್ಯಗಳು ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಈ ಪ್ರಸ್ತಾಪವನ್ನು ವಿರೋಧಿಸುತ್ತಿವೆ. ಆದರೆ ಇದು ಅಗತ್ಯವಾದ ಸುಧಾರಣೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ
ನರೇಂದ್ರ ಮೋದಿ, ಅಕ್ಷಯ್, ರಜನಿಕಾಂತ್ ಸಾಲಿನಲ್ಲಿ ಅಜಯ್ ದೇವಗನ್, ವಿಕ್ಕಿ ಕೌಶಲ್; ಏನಿದು ಸಮಾಚಾರ?
(Karnataka Government Plans to opposes central proposal to bring in petrol and diesel GST)
Published On - 12:10 pm, Thu, 16 September 21