ವಿದೇಶದಲ್ಲಿ ರೆಡಿಯಾಗ್ತಿದ್ದ ಡ್ರಗ್ಸ್ ಬೆಂಗಳೂರಿನಲ್ಲೇ ತಯಾರು! ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಕೇಸ್, ಆರೋಪಿ ಅರೆಸ್ಟ್
ವಿದೇಶಿ ಪ್ರಜೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಮನೆಯಲ್ಲಿ ಡ್ರಗ್ಸ್ ತಯಾರಿಸುತ್ತಿದ್ದ. ಡ್ರಗ್ಸ್ ತಯಾರಿಸಿ ಬೆಂಗಳೂರು ನಗರದ ವಿವಿಧೆಡೆಗೆ ರವಾನೆ ಮಾಡುತ್ತಿದ್ದ. ಬೇರೆ ಬೇರೆ ರಾಜ್ಯ, ಇತರೆ ದೇಶಗಳಿಗೂ ಡ್ರಗ್ಸ್ ರವಾನೆ ಮಾಡುತ್ತಿದ್ದ.
ಬೆಂಗಳೂರು: ವಿದೇಶದಲ್ಲಿ ತಯಾರಾಗುತ್ತಿದ್ದ ಡ್ರಗ್ಸ್ (Drug) ಇದೀಗ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ರೆಡಿಯಾಗುತ್ತಿರುವ ಮಾಹಿತಿ ಬಯಲಾಗಿದೆ. ಇದು ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಕೇಸ್ ಆಗಿದೆ. ಈವರೆಗೆ ಡ್ರಗ್ ಪೆಡ್ಲರ್, ಡೀಲರ್ಗಳನ್ನು ಮಾತ್ರ ಬಂಧಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿದೆ. ಬೆಂಗಳೂರಿನ ಮನೆಯೊಂದರಲ್ಲಿ ವಿದೇಶಿ ಪ್ರಜೆ ಸಿಂಥೆಟಿಕ್ ಡ್ರಗ್ಸ್ ತಯಾರು ಮಾಡುತ್ತಿದ್ದ. ಆರೋಪಿ 5 ವಿವಿಧ ಮಾದರಿಯ ಕೆಮಿಕಲ್ ಬಳಸಿ ಡ್ರಗ್ಸ್ ತಯಾರಿಸುತ್ತಿರುವುದು ಪೊಲೀಸರ ದಾಳಿ ವೇಳೆ ತಿಳಿದುಬಂದಿದೆ.
ವಿದೇಶಿ ಪ್ರಜೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಮನೆಯಲ್ಲಿ ಡ್ರಗ್ಸ್ ತಯಾರಿಸುತ್ತಿದ್ದ. ಡ್ರಗ್ಸ್ ತಯಾರಿಸಿ ಬೆಂಗಳೂರು ನಗರದ ವಿವಿಧೆಡೆಗೆ ರವಾನೆ ಮಾಡುತ್ತಿದ್ದ. ಬೇರೆ ಬೇರೆ ರಾಜ್ಯ, ಇತರೆ ದೇಶಗಳಿಗೂ ಡ್ರಗ್ಸ್ ರವಾನೆ ಮಾಡುತ್ತಿದ್ದ.
ಸಿಸಿಬಿ ಆಂಟಿ ನಾರ್ಕೊಟಿಕ್ಸ್ ವಿಭಾಗದ ಎಸಿಪಿ ಹಾಗು ಪೊಲೀಸರು ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಎಂಡಿಎಂಎ( MDMA) ಕ್ರಿಸ್ಟಲ್ ಎಂಬ ಉತ್ತಮ ಕ್ವಾಲಿಟಿ ಡ್ರಗ್ಸ್ ತಯಾರಿಸುತ್ತಿದ್ದ ಎಂಬುದು ತಿಳಿದುಬಂದಿದ್ದು, ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಜಾನ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆಗೆ ಮನೆ ಪಡೆದಿದ್ದ. ವೃದ್ಧ ದಂಪತಿ ಬಳಿ ಬಾಡಿಗೆಗೆ ಮನೆ ಪಡೆದಿದ್ದ. ಬಾಡಿಗೆ ಮನೆಯನ್ನೇ ಡ್ರಗ್ಸ್ ಫ್ಯಾಕ್ಟರಿ ಮಾಡಿಕೊಂಡಿದ್ದ.
ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ, ಬಂಧಿತನಿಂದ ಸುಮಾರು 5 ಕೋಟಿ ರೂ. ಮೌಲ್ಯದ ಎಂಡಿಎಂಎ, ಕ್ರಿಸ್ಟಲ್ ಮೆಥ್ನ ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ತಯಾರಿಸಲು ಬಳಸುತ್ತಿದ್ದ ಌಸಿಡ್ ಮತ್ತು ಕೋಟ್ಯಂತರ ಮೌಲ್ಯದ ಕೆಮಿಕಲ್ ಜಪ್ತಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸಿಸಿಬಿ ಇಂದ ಒಳ್ಳೆಯ ಕಾರ್ಯಚರಣೆ ಅಗಿದೆ. ಈ ಹಿಂದೆ ಒಂದು ಡ್ರಗ್ಸ್ ಕೇಸ್ನಲ್ಲಿ ತನಿಖೆ ಮಾಡುವಾಗ ವಿದೇಶಿ ಪ್ರಜೆ ಅರೆಸ್ಟ್ ಮಾಡಲಾಗಿತ್ತು. ಆತನ ಮೊಬೈಲ್ ಹಾಗು ಆತನನ್ನು ಪರಿಶೀಲನೆ ಮಾಡಲಾಗಿತ್ತು. ಆಗ ಆತ ಬೇರೊಬ್ಬ ಪೆಡ್ಲರ್ ಬಳಿ ಸಂಪರ್ಕದಲ್ಲಿ ಇರುವುದು ಗೊತ್ತಾಗಿತ್ತು ಎಂದು ತಿಳಿಸಿದ್ದಾರೆ.
ಆರೋಪಿ ಬಾಡಿಗೆ ಮನೆಯಲ್ಲಿ ಲ್ಯಾಬ್ ಇಟ್ಕೊಂಡು ಡ್ರಗ್ ತಯಾರಿಸ್ತಿದ್ದ. ತಾನಿದ್ದ ಮನೆಯ ಒಂದು ರೂಂನ ಡ್ರಗ್ ತಯಾರಿಕೆಗೆಂದು ಬಳಕೆ ಮಾಡುತ್ತಿದ್ದ. ಆರೋಪಿ ಜಾನ್ ಡ್ರಗ್ ತಯಾರಿಸಲು ಕೆಲ ವಿಶೇಷ ಮಷಿನ್ಗಳನ್ನ ಬಳಸುತ್ತಿದ್ದ. ಪ್ರತಿ ತಿಂಗಳು ಕೋಟಿ ಕೋಟಿಗಟ್ಟಲೇ ಹಣ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತನ್ನ ಮೂಲ ಸಿಗದಂತೆ ನಕಲಿ ಪಾಸ್ ಪೋರ್ಟ್ ಬಳಕೆ ಮಾಡುತ್ತಿದ್ದನಂತೆ. ತಾನು ಮೂಲತಃ ನೈಜಿರೀಯಾದವನು ಎನ್ನುವದನ್ನು ಆರೋಪಿ ಮುಚ್ಚಿಟ್ಟಿದ್ದನಂತೆ.
ಇದನ್ನೂ ಓದಿ
ಕರ್ನಾಟಕದಲ್ಲಿ ಹೆಚ್ಚಾಯ್ತು ಕೊರೊನಾ ಮೂರನೇ ಅಲೆ ಭೀತಿ! ಗೌರಿ ಗಣೇಶ ಹಬ್ಬದ ಬಳಿಕ ಹೆಚ್ಚಾದ ಸೋಂಕಿತರ ಸಂಖ್ಯೆ
ಜೂಜು ಅಡ್ಡೆಯಾಗಿರುವ ಮಲೆ ಮಹದೇಶ್ವರ ಬೆಟ್ಟ! ಅಕ್ರಮಕ್ಕೆ ಪೊಲೀಸರೇ ಸಾಥ್ ಕೊಟ್ಟಿರುವ ಶಂಕೆ
(Police arrested a foreign Citizen who was preparing drugs in Bangalore)
Published On - 11:02 am, Thu, 16 September 21