ಖಾಸಗಿ ಶಾಲೆಗಳಿಗೆ ಟ್ಯೂಷನ್ ಶುಲ್ಕ ನಿಗದಿ; ಶೇ. 15 ಶುಲ್ಕ ರಿಯಾಯಿತಿಗೆ ಹೈಕೋರ್ಟ್ ಆದೇಶ
ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಈಗ ಹೈಕೋರ್ಟ್ ಮತ್ತೊಂದು ಆದೇಶ ಹೊರಡಿಸಿದೆ. 2020-21 ರ ಸಾಲಿಗೆ ಶೇ.15 ರಷ್ಟು ಶುಲ್ಕ ರಿಯಾಯಿತಿಗೆ ಆದೇಶಿಸಿದೆ. ಹೈಕೋರ್ಟ್ ಆದೇಶದಿಂದಾಗಿ ಶಿಕ್ಷಣ ಸಂಸ್ಥೆಗಳಿಗೂ ರಿಲೀಫ್ ಸಿಕ್ಕಿದೆ.
ಬೆಂಗಳೂರು: ಖಾಸಗಿ ಶಾಲೆಗಳಿಗೆ ಬೋಧನಾ ಶುಲ್ಕ ನಿಗದಿ ವಿಚಾರಕ್ಕೆ ಸಂಬಂಧಿಸಿ ಶೇ. 15 ಶುಲ್ಕ ರಿಯಾಯಿತಿಗೆ ಹೈಕೋರ್ಟ್ ಆದೇಶ ಹೊರಡಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2020-2021 ನೇ ಸಾಲಿನಲ್ಲಿ ಭೋದನಾ ಶುಲ್ಕವನ್ನ ಕಡಿತ ಮಾಡಿತ್ತು. ಶೇ 30 ರಷ್ಟು ಭೋದನಾ ಶುಲ್ಕ ಕಡಿತ ಮಾಡಿ ಆದೇಶ ಮಾಡಿತ್ತು.
ಸರ್ಕಾರದ ಆದೇಶ ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೊರೆ ಹೋಗಿದ್ವು. ಸರ್ಕಾರದ ಅವೈಜ್ಞಾನಿಕ ಆದೇಶ ಅಂತಾ ಕೋರ್ಟ್ ಮೆಟ್ಟಿಲು ಹತ್ತಿದ್ವು. ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಈಗ ಹೈಕೋರ್ಟ್ ಮತ್ತೊಂದು ಆದೇಶ ಹೊರಡಿಸಿದೆ. 2020-21 ರ ಸಾಲಿಗೆ ಶೇ.15 ರಷ್ಟು ಶುಲ್ಕ ರಿಯಾಯಿತಿಗೆ ಆದೇಶಿಸಿದೆ. ಹೈಕೋರ್ಟ್ ಆದೇಶದಿಂದಾಗಿ ಶಿಕ್ಷಣ ಸಂಸ್ಥೆಗಳಿಗೂ ರಿಲೀಫ್ ಸಿಕ್ಕಿದೆ.
ಇದನ್ನೂ ಓದಿ: ಹತ್ತನೇ ತರಗತಿ ಪರೀಕ್ಷೆ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ; ಆಗಲೇ ಪಿಯು ಫೀಸ್ ಕಟ್ಟಿಸಿಕೊಳ್ಳುತ್ತಿವೆ ಕೆಲ ಖಾಸಗಿ ಕಾಲೇಜುಗಳು