ಕರ್ನಾಟಕದಲ್ಲಿ ಹೆಚ್ಚಾಯ್ತು ಕೊರೊನಾ ಮೂರನೇ ಅಲೆ ಭೀತಿ! ಗೌರಿ ಗಣೇಶ ಹಬ್ಬದ ಬಳಿಕ ಹೆಚ್ಚಾದ ಸೋಂಕಿತರ ಸಂಖ್ಯೆ

TV9 Digital Desk

| Edited By: sandhya thejappa

Updated on: Sep 16, 2021 | 10:28 AM

ಕಳೆದ 24 ಗಂಟೆಗಳ ಹೆಲ್ತ್ ಬುಲೆಟಿನ್ನಲ್ಲಿ 1,116 ಹೊಸ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 10ರಂದು ರಾಜ್ಯದಲ್ಲಿ 559 ಪ್ರಕರಣಗಳು ಪತ್ತೆಯಾಗಿದ್ದರೆ, ಸೆ.15ರಂದು 1,116 ಹೊಸ ಪ್ರಕರಣ ದಾಖಲಾಗಿದೆ.

ಕರ್ನಾಟಕದಲ್ಲಿ ಹೆಚ್ಚಾಯ್ತು ಕೊರೊನಾ ಮೂರನೇ ಅಲೆ ಭೀತಿ! ಗೌರಿ ಗಣೇಶ ಹಬ್ಬದ ಬಳಿಕ ಹೆಚ್ಚಾದ ಸೋಂಕಿತರ ಸಂಖ್ಯೆ
ಸಾಂದರ್ಭಿಕ ಚಿತ್ರ

Follow us on

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಹೊತ್ತಿಗೆ ಕೊರೊನಾ ಮೂರನೇ ಅಲೆ (Corona 3rd Wave) ಬರುವ ಸಾಧ್ಯತೆ ಹೆಚ್ಚಿದೆ ಅಂತ ತಜ್ಞರು ಈಗಾಗಲೇ ಹೇಳಿದ್ದಾರೆ. ಅದರಂತೆ ಇದೀಗ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಭೀತಿ ಶುರುವಾಗಿದ್ದು, ಗೌರಿ ಗಣೇಶ ಹಬ್ಬದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಸೆ.10ರ ಬಳಿಕ ಸೋಂಕಿನ ಪ್ರಮಾಣ ಹೆಚ್ಚಳವಾಗಿದೆ. ರಾಜ್ಯದಲ್ಲಿ ನಿನ್ನೆ (ಸೆ. 15) 1,116 ಹೊಸ ಪ್ರಕರಣ ದಾಖಲಾಗಿದ್ದು, ಬೆಂಗಳೂರಿನಲ್ಲಿ ಏಕಾಏಕಿ ಎರಡು ಪಟ್ಟು ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.

ಕಳೆದ 24 ಗಂಟೆಗಳ ಹೆಲ್ತ್ ಬುಲೆಟಿನ್​ನಲ್ಲಿ 1,116 ಹೊಸ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 10ರಂದು ರಾಜ್ಯದಲ್ಲಿ 559 ಪ್ರಕರಣಗಳು ಪತ್ತೆಯಾಗಿದ್ದರೆ, ಸೆ.15ರಂದು 1,116 ಹೊಸ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ ಸೆ.10ರಂದು 231 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ಸೆ.15ಕ್ಕೆ 462 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀಳುತ್ತದೆ ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ. ಅಲ್ಲದೇ ಐಐಎಸ್​​ಸಿ (IISC) ತಜ್ಞರ ಅಧ್ಯಯನ ವರದಿಯಲ್ಲಿ ಶಾಕಿಂಗ್ ಅಂಶ ಬಯಲಾಗಿದೆ. 3ನೇ ಅಲೆ ಬಂದರೆ ಮಕ್ಕಳಲ್ಲಿ 7 ಪಟ್ಟು ಸೋಂಕು ಹೆಚ್ಚಳವಾಗುವ ಸಾಧ್ಯತೆಯಿದೆ. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಮಕ್ಕಳಲ್ಲಿ ಎರಡೂವರೆ ಪಟ್ಟು ಕೊರೊನಾ ಹೆಚ್ಚಾಗಿತ್ತು.

0-9 ವರ್ಷದೊಳಗಿನ ಮಕ್ಕಳಿಗೆ ಕೊರೊನಾ 1ನೇ ಅಲೆಯಲ್ಲಿ 27,674 ಮಕ್ಕಳಿಗೆ ಸೋಂಕು ತಗುಲಿದ್ದರೆ, ಕೊರೊನಾ 2ನೇ ಅಲೆಯಲ್ಲಿ 64,637 ಮಕ್ಕಳಿಗೆ ಸೋಂಕು ದೃಢಪಟ್ಟಿತ್ತು. 10ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಕೊರೊನಾ 1ನೇ ಅಲೆಯಲ್ಲಿ 64,806, ಕೊರೊನಾ 2ನೇ ಅಲೆಯಲ್ಲಿ 1,63,566 ಸೋಂಕು ಇರುವುದು ತಿಳಿದುಬಂದಿತ್ತು.

ಇದನ್ನೂ ಓದಿ

ತನ್ನ ಅಕೌಂಟ್​​​ನಲ್ಲಿ ಏಕಾಏಕಿ ಲಕ್ಷಾಂತರ ರೂ. ನೋಡಿ ಫುಲ್​ ಖುಷಿಯಾದ ವ್ಯಕ್ತಿ; ಕಳ್ಳತನ ಮಾಡದೆ ಇದ್ರೂ ಜೈಲುಪಾಲು !

ಆನೇಕಲ್​ನಲ್ಲಿ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ದುರ್ಮರಣ, ಮೃತರು ಮಹಾರಾಷ್ಟ್ರದವರು

(Corona third wave of fear has increased in Karnataka and number of infected people has increased after festival)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada