ಆನೇಕಲ್​ನಲ್ಲಿ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ದುರ್ಮರಣ, ಮೃತರು ಮಹಾರಾಷ್ಟ್ರದವರು

ಈ ಘಟನೆಯಿಂದ ಹೊರ ಬರುವ ಮುನ್ನವೇ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ನೆರಳೂರು ಭೀಕರ ಅಪಘಾತ ನಡೆದಿದೆ.

ಆನೇಕಲ್​ನಲ್ಲಿ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ದುರ್ಮರಣ, ಮೃತರು ಮಹಾರಾಷ್ಟ್ರದವರು
ಲಾರಿ ಮತ್ತು ಆ್ಯಂಬುಲೆನ್ಸ್ ನಡುವೆ ಅಪಘಾತ ನಡೆದಿದೆ


ಆನೇಕಲ್: ಇತ್ತೀಚೆಗೆ ಬೆಂಗಳೂರಿನಲ್ಲಿ ಅಪಘಾತಗಳ (Accident) ಸಂಖ್ಯೆ ಹೆಚ್ಚಾಗುತ್ತಿದೆ. ಕೋರಮಂಗಲದಲ್ಲಿ ನಡೆದ ಅಪಘಾತ ಮಾಸುವ ಮುನ್ನವೇ ಸೆ. 14ರ ರಾತ್ರಿ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಭೀಕರ ಅಪಘಾತ ನಡೆದಿತ್ತು. ಫ್ಲೈ ಓವರ್ ಮೇಲಿಂದ ಯುವಕ- ಯುವತಿ ಬಿದ್ದಿರುವ ದೃಶ್ಯ ಎದೆ ಜಲ್ಲ್ ಅನ್ನುವಂತಿತ್ತು. ಈ ಘಟನೆಯಿಂದ ಹೊರ ಬರುವ ಮುನ್ನವೇ ಇಂದು (ಸೆ.16) ಬೆಳ್ಳಂಬೆಳಗ್ಗೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನೆರಳೂರು ಬಳಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ನೆರಳೂರು ಗೇಟ್ ಬಳಿ ಲಾರಿ ಮತ್ತು ಆ್ಯಂಬುಲೆನ್ಸ್ ಮಧ್ಯೆ ಡಿಕ್ಕಿಯಾಗಿದೆ. ಆ್ಯಂಬುಲೆನ್ಸ್​​ನಲ್ಲಿದ್ದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಗೆ ಹಿಂಬದಿಯಿಂದ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆ್ಯಂಬುಲೆನ್ಸ್ ನಜ್ಜುಗುಜ್ಜಾಗಿದೆ. ಆ್ಯಂಬುಲೆನ್ಸ್ ಮಹಾರಾಷ್ಟ್ರದಾಗಿದ್ದು, ಹೊಸೂರಿನತ್ತ ಹೋಗುತ್ತಿತ್ತು. ಸ್ಥಳಕ್ಕೆ ಅತ್ತಿಬೆಲೆ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಆ್ಯಂಬುಲೆನ್ಸ್​ನಲ್ಲಿದ್ದ ಮೂವರು ಪುರುಷರು ಮೃತಪಟ್ಟಿದ್ದಾರೆ. ನಾಲ್ವರು ಪುರುಷರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದ ಡಾ.ಜಾಧವ್ ಅಶೋಕ್, ಚಾಲಕ ಬಬೀಯ, ಚೆನ್ನೈನ ಪೇಷಂಟ್ ಅನ್ವರ್ ಖಾನ್ ಮೃತ ದುರ್ದೈವಿಗಳು. ಅಹಮ್ಮದ್ ರಾಜ್​​ಶೇಖ್, ಡಾ.ಜಿತೇಂದ್ರ ಬಿರಾದರ್, ರೋಗಿಯ ಸಹೋದರ ಯೂಸೂಫ್ ಖಾನ್, ಆ್ಯಂಬುಲೆನ್ಸ್‌ ಚಾಲಕ ಅಸ್ಕಾನ್ ಮೆನಾನ್‌ಗೆ ಗಾಯ ಗಂಭೀರ ಗಾಯವಾಗಿದೆ.

ಮುಂಜಾನೆ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ನಿಧಾನವಾಗಿ ಚಲಿಸುತ್ತಿದ್ದ ಲಾರಿಗೆ ಆ್ಯಂಬುಲೆನ್ಸ್ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ; ಫ್ಲೈ ಓವರ್​ ಮೇಲೆ ನಿಂತಿದ್ದ ಜೋಡಿಗೆ ವೇಗವಾಗಿ ಬಂದು ಗುದ್ದಿದ ಕಾರು, ಕೆಳಕ್ಕೆ ಬಿದ್ದು ಇಬ್ಬರೂ ಸಾವು

ವಿದ್ಯುತ್ ಸ್ಪರ್ಶಿಸಿ ಹುಟ್ಟುಹಬ್ಬದ ದಿನವೇ ಮೂರು ವರ್ಷದ ಬಾಲಕಿ ಸಾವು

(Accident between lorry and ambulance three members death in anekal)

Read Full Article

Click on your DTH Provider to Add TV9 Kannada