Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ; ಫ್ಲೈ ಓವರ್​ ಮೇಲೆ ನಿಂತಿದ್ದ ಜೋಡಿಗೆ ವೇಗವಾಗಿ ಬಂದು ಗುದ್ದಿದ ಕಾರು, ಕೆಳಕ್ಕೆ ಬಿದ್ದು ಇಬ್ಬರೂ ಸಾವು

ಘಟನೆಯ ಭೀಕರತೆ ಎಷ್ಟಿತ್ತೆಂದರೆ, ಸುಮಾರು ನೂರರಿಂದ ನೂರಿಪ್ಪತ್ತು ಕಿ.ಮೀ ವೇಗದಲ್ಲಿ ಬಂದ ಬಲೇನೋ ಕಾರು ಆ ಯುವಕ ಯುವತಿಗೆ ಗುದ್ದಿದಾಗ ಅವರು ಸುಮಾರು 150ಕ್ಕೂ ಹೆಚ್ಚು ಅಡಿ ದೂರಕ್ಕೆ ಹಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ; ಫ್ಲೈ ಓವರ್​ ಮೇಲೆ ನಿಂತಿದ್ದ ಜೋಡಿಗೆ ವೇಗವಾಗಿ ಬಂದು ಗುದ್ದಿದ ಕಾರು, ಕೆಳಕ್ಕೆ ಬಿದ್ದು ಇಬ್ಬರೂ ಸಾವು
ಭೀಕರ ಅಪಘಾತದಲ್ಲಿ ಛಿದ್ರಗೊಂಡ ವಾಹನಗಳು, ಕೆಳಗೆ ಬಿದ್ದು ಮೃತಪಟ್ಟ ಜೋಡಿ (ಒಳಚಿತ್ರ)
Follow us
TV9 Web
| Updated By: Skanda

Updated on: Sep 15, 2021 | 7:13 AM

ಬೆಂಗಳೂರು: ಕೋರಮಂಗಲದಲ್ಲಿ ನಡೆದ ಕಾರು ಅಪಘಾತ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.‌ ಕಾರು ಚಾಲಕನ ಅತಿವೇಗ ಹಾಗೂ ನಿರ್ಲಕ್ಷದಿಂದಾಗಿ ಬೈಕ್ ಸವಾರರಿಬ್ಬರು ಫ್ಲೈಓವರ್ ಮೇಲಿಂದ ಕೆಳಗಡೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ‌ ಫ್ಲೈ ಓವರ್ ಮೇಲೆ‌ ಈ ದುರ್ಘಟನೆ ನಡೆದಿದ್ದು ಕಾರು ಚಾಲಕನ ಓವರ್ ಸ್ಪೀಡ್ ಅಪಘಾತಕ್ಕೆ ಮೂಲ ಕಾರಣ ಎನ್ನಲಾಗಿದೆ.

ನೂರ ಇಪ್ಪತ್ತು ಕಿಲೋ ಮೀಟರ್​ಗೂ ಹೆಚ್ಚು ವೇಗದಲ್ಲಿದ್ದ ಬಲೇನೋ ಕಾರು, ಫ್ಲೈ ಓವರ್​ ಮೇಲೆ ಲೇಬೈ ಬಳಿ ನಿಂತಿದ್ದ ಜೋಡಿಗೆ ರಭಸವಾಗಿ ಗುದ್ದಿದೆ ಎನ್ನಲಾಗಿದೆ. ಕಾರು ಗುದ್ದಿದ ರಭಸಕ್ಕೆ ಬೈಕ್​ ನಿಲ್ಲಿಸಿಕೊಂಡಿದ್ದ ಜೋಡಿ ಫ್ಲೈ ಓವರ್ ಮೇಲಿನಿಂದ ಸುಮಾರು 150 ಅಡಿಗೂ ಹೆಚ್ಚು ದೂರ ಹಾರಿ ಕೆಳಗೆ ಬಿದ್ದು ದಾರುಣವಾಗಿ ಸಾವಿಗೀಡಾಗಿದ್ದಾರೆ.

ನಿನ್ನೆ ರಾತ್ರಿ 9 ಗಂಟೆ 15 ನಿಮಿಷದ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯ ಫ್ಲೈ ಓವರ್ ಮೇಲೆ ಈ ಅಪಘಾತ ಸಂಭವಿಸಿದ್ದು, ವೇಗವಾಗಿ ಕಾರು ಗುದ್ದಿದ ಪರಿಣಾಮ ತಮಿಳುನಾಡು ಮೂಲದ ಯುವಕ ಯುವತಿ ಇಬ್ಬರೂ ಮೇಲಿನಿಂದ ಬಿದ್ದು ಕೊನೆಯುಸಿರೆಳೆದಿದ್ದಾರೆ. ಘಟನೆಯ ಭೀಕರತೆ ಎಷ್ಟಿತ್ತೆಂದರೆ, ಸುಮಾರು ನೂರರಿಂದ ನೂರಿಪ್ಪತ್ತು ಕಿ.ಮೀ ವೇಗದಲ್ಲಿ ಬಂದ ಬಲೇನೋ ಕಾರು ಆ ಯುವಕ ಯುವತಿಗೆ ಗುದ್ದಿದಾಗ ಅವರು ಸುಮಾರು 150ಕ್ಕೂ ಹೆಚ್ಚು ಅಡಿ ದೂರಕ್ಕೆ ಹಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುಮಾರು 10‌ ಕಿ.ಮೀಟರ್ ಉದ್ದವಿರುವ ಎಲಿವೇಟೆಡ್ ಪ್ಲೈ ಓವರ್ ರಸ್ತೆಯಲ್ಲಿ ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿಯತ್ತ ಬರುವ ಮಾರ್ಗದಲ್ಲಿ ಚಲಿಸುತ್ತಿದ್ದ KA-01-MR-2802 ಬಲೇನೋ‌ ಕಾರು ಹಾಗೂ ತಮಿಳು ನಾಡಿನ ನಂಬರ್ ಪ್ಲೇಟ್ ಹೊಂದಿರುವ (TN 01-BD-9218) ಬೈಕ್ ನಡುವೆ ಈ ಅಪಘಾತ ನಡೆದಿದೆ. ಸದ್ಯ ಈ ಜೋಡಿಯ ಗುರುತು ಪತ್ತೆ ಹಚ್ಚಲು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪರಿಶೀಲನೆ ಮಾಡುತ್ತಿದ್ದು, ಕಾರು ಚಾಲಕ ಹೆಬ್ಬಗೋಡಿಯ ನಿತೇಶ್ ಮೇಲೆ 279, 304 ಎ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯಲ್ಲಿ ಮೃತರಾದ ಯುವಕ ಯುವತಿ ಮೊಬೈಲ್ ಕೂಡ ಅಪಘಾತದ ರಭಸಕ್ಕೆ ಸಂಪೂರ್ಣ ಒಡೆದು ಹೋಗಿದೆ. ಅಲ್ಲದೇ ಅವರ ಬಳಿ ಯಾವುದೇ ಗುರುತಿನ ಚೀಟಿ ಇರದ ಕಾರಣ ಅವರು ಯಾರು ಎಂದು ಗುರುತಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ನೈಟ್ ಡ್ರೆಸ್ ನಲ್ಲಿ ಸುತ್ತಾಡಲು ಬಂದಿದ್ದ ಈ ಜೋಡಿ ಫ್ಲೈ ಓವರ್ ಮೇಲೆ ಧೂಮಪಾನ ಮಾಡಲು ನಿಂತಿದ್ದರು ಎಂದೂ ಹೇಳಲಾಗುತ್ತಿದೆ.‌ ಘಟನೆ ಹೇಗಾಯಿತು ಎಂಬುದನ್ನು ತಿಳಿಯಲು ಅಕ್ಕಪಕ್ಕದ ಕಟ್ಟಡಗಳಿಗೆ ಅಳವಡಿಸಲಾಗಿರುವ ಸಿಸಿಟಿವಿ ಪರಿಶೀಲನೆ ಮಾಡುತ್ತಿರುವ ಪೊಲೀಸರು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಅಪಘಾತ: ದಂಪತಿ ಸಾವು; 1 ವರ್ಷದ ಹೆಣ್ಣು ಮಗು ಪಾರು 

ಭೀಕರ ಬೈಕ್​ ಅಪಘಾತ; ನಟನ 4 ತಪ್ಪುಗಳು ಬಟಾಬಯಲು: ಸಾಯಿ ಧರಮ್​ ತೇಜ್​ ಹೀಗೆ ಮಾಡಬಾರದಿತ್ತು

ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?