ತನ್ನ ಅಕೌಂಟ್​​​ನಲ್ಲಿ ಏಕಾಏಕಿ ಲಕ್ಷಾಂತರ ರೂ. ನೋಡಿ ಫುಲ್​ ಖುಷಿಯಾದ ವ್ಯಕ್ತಿ; ಕಳ್ಳತನ ಮಾಡದೆ ಇದ್ರೂ ಜೈಲುಪಾಲು !

ದಕ್ಷಿಣ ಗ್ರಾಮೀಣ ಬ್ಯಾಂಕ್​​​ನ ಭಕ್ತಿಯಾರ್​​ಪುರ ಶಾಖೆಯ ಸಿಬ್ಬಂದಿ ಮಾಡಿದ ಪ್ರಮಾದ ಇದು. ಒಬ್ಬರ ಅಕೌಂಟ್​ನಿಂದ ಇನ್ನೊಬ್ಬರ ಅಕೌಂಟ್​ಗೆ ಹಣ ವರ್ಗಾವಣೆ ಮಾಡುವಾಗ ಅದೇನೋ ಎಡವಟ್ಟು ಮಾಡಿದ್ದರು.

ತನ್ನ ಅಕೌಂಟ್​​​ನಲ್ಲಿ ಏಕಾಏಕಿ ಲಕ್ಷಾಂತರ ರೂ. ನೋಡಿ ಫುಲ್​ ಖುಷಿಯಾದ ವ್ಯಕ್ತಿ; ಕಳ್ಳತನ ಮಾಡದೆ ಇದ್ರೂ ಜೈಲುಪಾಲು !
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Sep 16, 2021 | 9:55 AM

ಬಿಹಾರ್​: ಬ್ಯಾಂಕ್ (Bank)​​ವೊಂದರಲ್ಲಿ ಆದ ತಾಂತ್ರಿಕ ದೋಷದಿಂದಾಗಿ ವ್ಯಕ್ತಿಯೊಬ್ಬ 1.61 ಲಕ್ಷ ರೂಪಾಯಿಯನ್ನು ಪಡೆಯುವಂತಾಯಿತು. ಆದರೆ ಅದು ನಿಮ್ಮ ಹಣವಲ್ಲ. ಆಕಸ್ಮಿಕವಾಗಿ ನಿಮ್ಮ ಅಕೌಂಟ್​ಗೆ ಬಂದಿದೆ. ಅದನ್ನು ಹಿಂದಿರುಗಿಸಿ ಎಂದು ಬ್ಯಾಂಕ್​​ನವರು ಕೇಳಿದರೆ ಆ ವ್ಯಕ್ತಿಯೀಗ ಹಣ ವಾಪಸ್​ ಕೊಡಲು ಸುತಾರಾಂ ಒಪ್ಪುತ್ತಿಲ್ಲ. ಅದರ ಬದಲಿಗೆ, ನಾನು ಈ ಹಣವನ್ನು ಹಿಂದಿರುಗಿಸುವುದಿಲ್ಲ. ಇದು ನನಗೆಂದೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳಿಸಿದ ಆರ್ಥಿಕ ನೆರವು ಎನ್ನುತ್ತಿದ್ದಾರೆ. ಅಂದಹಾಗೆ ಈ ಘಟನೆ ನಡೆದದ್ದು ಬಿಹಾರದ ಖಗಾರಿಯಾ ಎಂಬಲ್ಲಿ.  

ದಕ್ಷಿಣ ಗ್ರಾಮೀಣ ಬ್ಯಾಂಕ್​​​ನ ಭಕ್ತಿಯಾರ್​​ಪುರ ಶಾಖೆಯ ಸಿಬ್ಬಂದಿ ಮಾಡಿದ ಪ್ರಮಾದ ಇದು. ಒಬ್ಬರ ಅಕೌಂಟ್​ನಿಂದ ಇನ್ನೊಬ್ಬರ ಅಕೌಂಟ್​ಗೆ ಹಣ ವರ್ಗಾವಣೆ ಮಾಡುವಾಗ ಅದೇನೋ ದೋಷ ಮಾಡಿದ್ದರಿಂದ, ಸಂಬಂಧವೇ ಇಲ್ಲ ರಂಜಿತ್​ ಕುಮಾರ್​ ದಾಸ್​ ಎಂಬುವರು ಅಕೌಂಟ್​​ಗೆ ಹೋಗಿತ್ತು. ರಂಜಿತ್​​ ಕುಮಾರ್​ ತನ್ನ ಅಕೌಂಟ್​​ನಲ್ಲಿ ಬರೋಬ್ಬರಿ 1,60,970 ರೂಪಾಯಿ ನೋಡಿದ್ದೇ ನೋಡಿದ್ದು ಸಿಕ್ಕಾಪಟೆ ಖುಷಿ ಆದರು. ಇದು ಲಕ್​ ಎಂದೇ ಭಾವಿಸಿದರು. ಅಷ್ಟು ದೊಡ್ಡ ಮಟ್ಟಣದ ಹಣವನ್ನು ಬೇಕಾಬಿಟ್ಟಿ ಖಾಲಿ ಮಾಡಬಾರದು ಎಂದು ನಿರ್ಧರಿಸಿ, ಸಣ್ಣ ಮೊತ್ತದಲ್ಲಿ ಹಣ ತೆಗೆಯಲು ಪ್ರಾರಂಭಿಸಿದರು.  ಇದು ಖಂಡಿತವಾಗಿಯೂ ಪ್ರಧಾನಿ ನರೇಂದ್ರ ಮೋದಿಯವರ ಯಾವುದೋ ಯೋಜನೆಯಿಂದ, ಕೇಂದ್ರ ಸರ್ಕಾರದಿಂದ ಬಂದ ಹಣ ಎಂದೇ ಭಾವಿಸಿದ್ದರು.

ಆದರೆ ಕೆಲವೇ ಹೊತ್ತಲ್ಲಿ ಬ್ಯಾಂಕ್​ಗೆ ತನ್ನ ತಪ್ಪಿನ ಅರಿವಾಯಿತು. ಅಧಿಕಾರಿಗಳು ರಂಜಿತ್​​ಗೆ ಕರೆ ಮಾಡಿ ಹಣ ಹಿಂದಿರುಗಿಸಲು ಹೇಳಿದರು. ಆದರೆ ಅವರು ಸುತಾರಾಂ ಒಪ್ಪಲೇ ಇಲ್ಲ. ಕಣ್ತಪ್ಪಿನಿಂದ ನಿಮ್ಮ ಖಾತೆಗೆ ಬಂದ ಹಣ ಎಂದರೂ ಅವರು ಒಪ್ಪುತ್ತಲೇ ಇಲ್ಲ. ನನ್ನ ಖಾತೆಗೆ ಪ್ರಧಾನಿ ಮೋದಿಯವರೇ ಹಣ ಕಳಿಸಿದ್ದಾರೆ. ಅದನ್ನು ನಾನು ಹಿಂದಿರುಗಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅದಾದ ಬಳಿಕ ದಕ್ಷಿಣ ಗ್ರಾಮೀಣ ಬ್ಯಾಂಕ್​​ನವರು ರಂಜಿತ್​ಗೆ ನೋಟಿಸ್​ ಕೂಡ ನೀಡಿದರು. ಆಗಲೂ ಹಣ ವಾಪಸ್​ ಮಾಡಲು ಆತ ಒಪ್ಪದೆ ಇದ್ದಾಗ ಮಾನ್ಸಿ ಠಾಣೆಯ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.  ಇದೀಗ ರಂಜಿತ್​​ರನ್ನು ಬಂಧಿಸಿರುವ ಪೊಲೀಸರು ಖಗಾರಿಯಾ ಜೈಲಿಗೆ ಕಳಿಸಿದ್ದಾರೆ.

ಇದನ್ನೂ ಓದಿ: 70ರ ವಯಸ್ಸಿನಲ್ಲೂ ಸಾಧನೆಯ ಬೆಳಕು ಚೆಲ್ಲಿದ ವ್ಯಕ್ತಿ, ವಿದ್ಯುತ್ ಬಲ್ಬ್‌ಗಳಲ್ಲಿ ‘ನಮೋಕರ್ ಮಂತ್ರ’ ಕೆತ್ತನೆ

ನಿಮಗೆ ಕಾಜು ಬರ್ಫಿ ಅಂದ್ರೆ ಇಷ್ಟಾನಾ? ತಯಾರಿಸುವ ವಿಧಾನವನ್ನು ವಿಡಿಯೋದಲ್ಲೇ ನೋಡಿ

(A man gets Rs 1.60 lakh after bank error In Bihar)

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ