ಭ್ರಷ್ಟಾಚಾರ ವಿವಾದದಲ್ಲಿ ಸಿಲುಕಿರುವ ಐಪಿಎಸ್ ರವಿ ಚನ್ನಣ್ಣವರ್ ವರ್ಗಾವಣೆ ಆದೇಶಕ್ಕೆ ಸರ್ಕಾರದಿಂದ ತಡೆ
Ravi D Channannavar: ಭ್ರಷ್ಟಾಚಾರ ವಿವಾದದಲ್ಲಿ ಸಿಲುಕಿರುವ ಐಪಿಎಸ್ ರವಿ ಚನ್ನಣ್ಣವರ್ ವರ್ಗಾವಣೆ ಆದೇಶಕ್ಕೆ ಸರ್ಕಾರದಿಂದ ತಡೆ ನೀಡಲಾಗಿದೆ.
Govt Stops IPS Officer Ravi D Channannavar Transfer Order | ವರ್ಗಾವಣೆ ಆದೇಶಕ್ಕೆ ಸರ್ಕಾರದಿಂದ ತಡೆ
ಭ್ರಷ್ಟಾಚಾರ ವಿವಾದದಲ್ಲಿ ಸಿಲುಕಿರುವ ಐಪಿಎಸ್ ರವಿ ಚನ್ನಣ್ಣವರ್ ವರ್ಗಾವಣೆ ಆದೇಶಕ್ಕೆ ಸರ್ಕಾರದಿಂದ ತಡೆ ನೀಡಲಾಗಿದೆ. ರವಿ ಚನ್ನಣ್ಣವರ್ ವರ್ಗಾವಣೆ ಆದೇಶಕ್ಕೆ ಸರ್ಕಾರದಿಂದ ತಡೆ – ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ MDಯಾಗಿ ವರ್ಗಾವಣೆ – ನಿನ್ನೆ ಹೊರಡಿಸಿದ್ದ ಆದೇಶಕ್ಕೆ ಇಂದು ತಡೆ ನೀಡಿದ ಸರ್ಕಾರ – ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿಗೆ ಹೆಚ್ಚುವರಿ ಹೊಣೆಗಾರಿಕೆ – ಮೈಸೂರು ಪೇಪರ್ ಮಿಲ್ ಎಂಡಿ ಹುದ್ದೆ ಹೆಚ್ಚುವರಿ ಹೊಣೆ
ಹಿಂದಿನ ವರ್ಗಾವಣೆ ಆದೇಶ ವಿವರ: ಕರ್ನಾಟಕದಲ್ಲಿ ರವಿ ಡಿ. ಚನ್ನಣ್ಣನವರ್ (Ravi D Channannavar) ಸೇರಿದಂತೆ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರದಿಂದ (Karnataka Government) ಆದೇಶ ಹೊರಡಿಸಲಾಗಿದೆ. ಸಿಐಡಿ ಎಸ್‌ಪಿ ಆಗಿದ್ದ ರವಿ ಡಿ. ಚನ್ನಣ್ಣನವರ್ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾವಣೆಗೊಂಡಿದ್ದಾರೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ರವಿ ಚನ್ನಣ್ಣನವರ್ ನೇಮಕವಾಗಿದ್ದಾರೆ. 2 ದಿನಗಳ ಹಿಂದಷ್ಟೇ 19 ಉನ್ನತ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಬಸವರಾಜ ಬೊಮ್ಮಾಯಿ ಸರ್ಕಾರ ಇದೀಗ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಆದೇಶ ಹೊರಡಿಸಿದೆ.
ಉಳಿದಂತೆ ಭೀಮಾಶಂಕರ ಗುಳೇದ್- ಡಿಸಿಪಿ, ಬೆಂಗಳೂರು ಪೂರ್ವ, ಡಿ. ಕಿಶೋರ್ ಬಾಬು- ಬೀದರ್ ಪೊಲೀಸ್ ವರಿಷ್ಠಾಧಿಕಾರಿ, ಅರುಣಾಂಗ್ಶು ಗಿರಿ- ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ, ಡಿ.ಎಲ್. ನಾಗೇಶ್- ಸಿಐಡಿ ಎಸ್‌ಪಿ, ಅಬ್ದುಲ್ ಅಹಾದ್- ಕೆಎಸ್‌ಆರ್‌ಟಿಸಿ ನಿರ್ದೇಶಕ, ಟಿ. ಶ್ರೀಧರ್- ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್‌ಪಿ, ಟಿ.ಪಿ. ಶಿವಕುಮಾರ್- ಚಾಮರಾಜನಗರ ಎಸ್‌ಪಿ ಹಾಗೂ ದಿವ್ಯಸಾರ ಥಾಮಸ್- ಪೊಲೀಸ್ ಅಕಾಡೆಮಿ ಉಪ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ.
ಸಿನಿಮಾ ಬ್ಲಾಕ್ ಟಿಕೆಟ್ ಮಾರುತ್ತಿದ್ದ ರವಿ ಡಿ. ಚನ್ನಣ್ಣನವರ್: ‘ದಿಲ್ ಪಸಂದ್’ ವೇದಿಕೆಯಲ್ಲಿ ಅಚ್ಚರಿ ವಿಚಾರ ಬಹಿರಂಗ
ಕರ್ನಾಟಕ ಕಂಡ ಧಕ್ಷ ಅಧಿಕಾರಿಗಳಲ್ಲಿ ರವಿ ಡಿ. ಚನ್ನಣ್ಣನವರ್ ಕೂಡ ಒಬ್ಬರು. ಅವರು ಮಾಡಿದ ಕೆಲಸಗಳಿಗೆ ಜನರು ಫಿದಾ ಆಗಿದ್ದಾರೆ. ಅವರ ಭಾಷಣಗಳನ್ನು ಕೇಳಿ ಅಪಾರ ಸಂಖ್ಯೆಯ ಜನರು ಸ್ಫೂರ್ತಿ ಪಡೆದುಕೊಂಡಿದ್ದಾರೆ. ಅನೇಕರಿಗೆ ರವಿ ಡಿ. ಚನ್ನಣ್ಣನವರ್ ಮಾದರಿ ವ್ಯಕ್ತಿ. ಪೊಲೀಸ್ ಇಲಾಖೆಗೆ ಸೇರಬೇಕು ಎಂಬ ಎಷ್ಟೋ ಯುವಕರಿಗೆ ಅವರೇ ಪ್ರೇರಣೆ. ಇಷ್ಟೆಲ್ಲ ಜನರ ಪ್ರೀತಿ ಗಳಿಸಿರುವ ರವಿ ಡಿ. ಚನ್ನಣ್ಣನವರ್ ಒಂದು ಕಾಲದಲ್ಲಿ ಸಿನಿಮಾದ ಬ್ಲಾಕ್ ಟಿಕೆಟ್ ಮಾರುತ್ತಿದ್ದರು ಎಂಬುದು ಅಚ್ಚರಿಯ ವಿಚಾರ. ಈ ಬಗ್ಗೆ ಸ್ವತಃ ರವಿ ಚನ್ನಣ್ಣನವರ್ ಹೇಳಿಕೊಂಡಿದ್ದಾರೆ!
ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ಕಾಯ್ಡು ಮತ್ತು ಮೇಘಾ ಶೆಟ್ಟಿ ನಟಿಸಲಿರುವ ‘ದಿಲ್ ಪಸಂದ್’ ಸಿನಿಮಾದ ಸುದ್ದಿಗೋಷ್ಠಿ ಸೋಮವಾರ (ಸೆ.27) ನಡೆಯಿತು. ಅದಕ್ಕೆ ಮುಖ್ಯ ಅತಿಥಿಯಾಗಿ ರವಿ ಡಿ. ಚನ್ನಣ್ಣನವರ್ ಆಗಮಿಸಿದ್ದರು. ಅವರ 13 ವರ್ಷಗಳ ಸರ್ವೀಸ್ನಲ್ಲಿ ಒಂದು ಸಿನಿಮಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದು ಇದೇ ಮೊದಲು. ಆ ವೇದಿಕೆಯಲ್ಲಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡರು. ಯಾರಿಗೂ ಗೊತ್ತಿಲ್ಲದ ಬ್ಲಾಕ್ ಟಿಕೆಟ್ ಕಹಾನಿಯನ್ನೂ ಅವರು ತೆರೆದಿಟ್ಟರು.
ರವಿ ಡಿ. ಚನ್ನಣ್ಣನವರ್ ಅವರಿಗೆ ನಟನೆ, ಬರವಣಿಗೆ, ಸಿನಿಮಾ ಬಗ್ಗೆ ಅಪಾರ ಆಸಕ್ತಿ ಇದೆ. ಹಲವು ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಾಲೇಜು ದಿನಗಳಿಂದಲೂ ಅವರ ಮೇಲೆ ಸಿನಿಮಾಗಳು ಬಹಳ ಪ್ರಭಾವ ಬೀರಿವೆ. ಡಾ. ರಾಜ್ಕುಮಾರ್ ಅವರ ‘ಮಯೂರ’ ಸಿನಿಮಾ ನೋಡಿ ಅವರು ಸ್ವಾಭಿಮಾನದ ಪಾಠ ಕಲಿತರು. ಈ ಎಲ್ಲ ಘಟನೆಗಳನ್ನು ಅವರು ಮೆಲುಕು ಹಾಕಿದರು.
‘ಎಲ್ಲೂ ಹೇಳಲಾರದ ಒಂದು ಸತ್ಯವನ್ನು ನಾನು ಇಂದು ಹೇಳುತ್ತಿದ್ದೇನೆ. ನಾನು ಗದಗದಲ್ಲಿ ಬ್ಲಾಕ್ ಟಿಕೆಟ್ ಮಾರುತ್ತಿದ್ದೆ. ಮಹಾಲಕ್ಷ್ಮೀ, ಶಾಂತಿ ಚಿತ್ರಮಂದಿಗಳಲ್ಲಿ ಬ್ಲಾಕ್ ಟಿಕೆಟ್ ಮಾರಿದ್ದೆ. ‘ಅಸುರ’ ಸಿನಿಮಾ ರಿಲೀಸ್ ಆದಾಗ ನಾನು ಪ್ರಥಮ ಪಿಯುಸಿ ಹುಡುಗ. ಯಜಮಾನ, ದಿಲ್ ಕಾ ರಿಶ್ತಾ, ಅಂಜಲಿ ಗೀತಾಂಜಲಿ ಸಿನಿಮಾಗಳು ಬಂದಾಗ ಹುಬ್ಬಳ್ಳಿಯಿಂದ ತೆಗೆದುಕೊಂಡು ಬರುತ್ತಿದ್ದೆ’ ಎಂದು ಅವರು ಹೇಳಿದರು.
ಮೊದಲಿನಿಂದಲೂ ನಾಟಕಗಳ ಜೊತೆ ನಂಟು ಹೊಂದಿರುವ ರವಿ ಡಿ. ಚನ್ನಣ್ಣನವರ್ ಇತ್ತೀಚೆಗೆ ಬರಹಗಳನ್ನು ಕೂಡ ಆರಂಭಿಸಿದ್ದಾರೆ. ಅನೇಕ ಕಥೆಗಳನ್ನು ಅವರು ಬರೆದಿದ್ದಾರೆ. ಅವು ಇನ್ನೂ ಪ್ರಕಟಗೊಂಡಿಲ್ಲ. ‘ಬರೆದ ಪುಸ್ತಕವನ್ನು ಜನರು ಓದುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ’ ಎನ್ನುವ ಮೂಲಕ ಈ ಮಾಧ್ಯಮದ ಪ್ರಭಾವವನ್ನು ಅವರು ಶ್ಲಾಘಿಸಿದರು.