ಬೆಂಗಳೂರು, ಫೆಬ್ರವರಿ 19: ಕರ್ನಾಟಕ (Karnataka) ರಾಜ್ಯ ಒಂದರಲ್ಲೇ 5,059 ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳು (Public Electric Vehicle Charging Stations) ಇರುವ ಮೂಲಕ ರಾಜ್ಯ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಕೇಂದ್ರ ವಿದ್ಯುತ್ ಸಚಿವಾಲಯದ ಅಡಿಯಲ್ಲಿನ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಅಂಕಿಅಂಶಗಳ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಲ್ಲಿ 4,281ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳವೆ. ಅಂದರೆ ಶೇ 85 ರಷ್ಟು ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳು ಬೆಂಗಳೂರಿನಲ್ಲಿವೆ. ಕರ್ನಾಟಕದಲ್ಲಿ 2017 ರಲ್ಲಿ ಮೊದಲ ಎಲೆಕ್ಟ್ರಿಕ್ ವೆಹಿಕಲ್ (Electric Vehicle) ನೀತಿಯನ್ನು ಜಾರಿಯಾಯಿತು.
ಮಹಾರಾಷ್ಟ್ರ (3,079), ದೆಹಲಿ (1,886), ಕೇರಳ (958), ತಮಿಳುನಾಡು (643), ಉತ್ತರ ಪ್ರದೇಶ (583), ಮತ್ತು ರಾಜಸ್ಥಾನ (500) ಇವಿ ಚಾರ್ಜಿಂಗ್ ಸ್ಟೇಷನ್ಗಳಿವೆ. ಇನ್ನು ಹೆಚ್ಚಿಗೆ ಎಲೆಕ್ಟ್ರಿಕ್ ವೆಹಿಕಲ್ ಹೊಂದಿರುವ ರಾಜ್ಯಗಳನ್ನು ನೋಡುವುದಾರೆ, ಉತ್ತರ ಪ್ರದೇಶವು 7.45 ಲಕ್ಷದೊಂದಿಗೆ ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರ (4.15 ಲಕ್ಷ), ಮತ್ತು ಕರ್ನಾಟಕ (3.31 ಲಕ್ಷ) ನಂತರದ ಸ್ಥಾನದಲ್ಲಿದೆ.
ಇದನ್ನೂ ಓದಿ: Budget 2024: ಎಲೆಕ್ಟ್ರಿಕ್ ವಾಹನ ಹೆಚ್ಚಳಕ್ಕಾಗಿ ಕೇಂದ್ರದಿಂದ ಮಹತ್ವದ ಯೋಜನೆ
ಎಲೆಕ್ಟ್ರಿಕ್ ವಾಹನಗಳ ವ್ಯಾಪಾರ ಹೆಚ್ಚಿಸವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕಳೆದ ವರ್ಷ ಪರಿಷ್ಕೃತ ಕರಡು ಇವಿ ನೀತಿಯನ್ನು (2023-28) ಪರಿಚಯಿಸಿತು. ಇದು ಒಂದು ಲಕ್ಷ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜೊತೆಗೆ 50,000 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ಕರ್ನಾಟಕದಲ್ಲಿ, ನೋಂದಾಯಿತ ಇವಿಗಳ ಸಂಖ್ಯೆ 2020 ರಲ್ಲಿ 9,703 ರಿಂದ 2021 ರಲ್ಲಿ 33,306, 2022 ರಲ್ಲಿ 95,892 ಮತ್ತು 2023 ರಲ್ಲಿ 1.52 ಲಕ್ಷಕ್ಕೆ ಏರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ