ಬಿಜೆಪಿ ಶಾಸಕ ಉದಯ್ ಗರುಡಾಚಾರ್​ಗೆ ಬಿಗ್​ ರಿಲೀಫ್ ನೀಡಿದ ಹೈಕೋರ್ಟ್, ಏನಿದು ಕೇಸ್?

| Updated By: ರಮೇಶ್ ಬಿ. ಜವಳಗೇರಾ

Updated on: Apr 24, 2024 | 5:53 PM

ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ಉದಯ್ ಗರುಡಾಚಾರ್​ಗೆ ಕರ್ನಾಟಕ ಹೈಕೋರ್ಟ್​ ಬಿಗ್ ರಿಲೀಫ್ ನೀಡಿದೆ. ಅಲ್ಲದೇ ದಂಡದ ಹಣವನ್ನು ಶಾಸಕರಿಗೆ ಹಿಂದಿರುಗಿಸುವಂತೆ ಹೈಕೋರ್ಟ್​ ಆದೇಶದಲ್ಲಿ ಸೂಚಿಸಿದೆ.

ಬಿಜೆಪಿ ಶಾಸಕ ಉದಯ್ ಗರುಡಾಚಾರ್​ಗೆ ಬಿಗ್​ ರಿಲೀಫ್ ನೀಡಿದ ಹೈಕೋರ್ಟ್, ಏನಿದು ಕೇಸ್?
ಉದಯ್ ಗರುಡಾಚಾರ್​ ,ಬಿಜೆಪಿ ಶಾಸಕ
Follow us on

ಬೆಂಗಳೂರು, (ಏಪ್ರಿಲ್ 24): ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎನ್ನುವ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ವಿರುದ್ಧದ ಪ್ರಕರಣವನ್ನು (BJP MLA uday garudachar)  ಕರ್ನಾಟಕ ಹೈಕೋರ್ಟ್(Karnataka High Court) ರದ್ದುಗೊಳಿಸಿದೆ. ಪ್ರಕರಣ ರದ್ದುಪಡಿಸಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್​ರಿದ್ದ ಹೈಕೋರ್ಟ್ ಪೀಠ ಇಂದು (ಏಪ್ರಿಲ್ 24) ಆದೇಶ ಹೊರಡಿಸಿದೆ. ಅಲ್ಲದೇ ದಂಡದ ಹಣವನ್ನು ಶಾಸಕರಿಗೆ ಹಿಂದಿರುಗಿಸಲು ಆದೇಶದಲ್ಲಿ ಸೂಚಿಸಿದೆ. ಇದರಿಂದ ಶಾಸಕ ಉದಯ್ ಗರುಡಾಚಾರ್​ಗೆ ಬಿಗ್ ರಿಲಿಫ್ ಸಿಕ್ಕಂತಾಗಿದೆ.

2018 ರಲ್ಲಿ ಚಿಕ್ಕಪೇಟೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಪ್ರಮಾಣಪತ್ರದಲ್ಲಿ ಕ್ರಿಮಿನಲ್ ಕೇಸ್ ಗಳ ಮಾಹಿತಿ ನೀಡಿರಲಿಲ್ಲ ಎಂದು ಪ್ರಕಾಶ್ ಎಂ ಶೆಟ್ಟಿ ಎಂಬುವರು ಉದಯ್ ಗರುಡಾಚಾರ್​ ವಿರುದ್ಧ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರ್‌ಒಸಿಯಿಂದ ಉದಯ್ ಗರುಡಾಚಾರ್ ಹಾಗೂ ಪತ್ನಿ ಅನರ್ಹಗೊಂಡಿದ್ದರು. ಈ ಮಾಹಿತಿಯನ್ನು ಪ್ರಮಾಣಪತ್ರದಿಂದ ಮುಚ್ಚಿಟ್ಟಿದ್ದರು. ಮೆವರಿಕ್ ಹೋಲ್ಡಿಂಗ್ಸ್ ನಲ್ಲಿ ಎಂಡಿ ಆಗಿದ್ದರೂ ಹೂಡಿಕೆದಾರ ಎಂದು ನಮೂದು. ಪತ್ನಿ ನಿರ್ದೇಶಕರಾಗಿರುವುದನ್ನು ನಮೂದಿಸಿಲ್ಲ. ಪತ್ನಿಯ ಬ್ಯಾಂಕ್ ವಿವರ ನೀಡದೇ ಮುಚ್ಚಿಟ್ಟ ಆರೋಪ. ಈ ಎಲ್ಲದರ ಬಗ್ಗೆ ಹೆಚ್.ಜಿ.ಪ್ರಶಾಂತ್ ಅವರು ದೂರು ದಾಖಲಿಸಿದ್ದರು.

ಇದನ್ನೂ ಓದಿ: ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ಆರೋಪ: ಶಾಸಕ ಉದಯ್ ಗರುಡಾಚಾರ್​ಗೆ ಜಾಮೀನು

ಈ ಎಲ್ಲಾ ಆರೋಪಗಳು ಸಾಬೀತಾಗಿರುವುದರಿಂದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಉದಯ್ ಗರುಡಾಚಾರ್ ಗೆ 2 ತಿಂಗಳು ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು. ಬಳಿಕ ಜಾಮೀನು ಸಹ ನೀಡಿತ್ತು. ಬಳಿಕ ಉದಯ್ ಗರುಡಾಚಾರ್ ಅವರು ತಮ್ಮ ವಿರುದ್ಧ ಈ ಪ್ರಕರಣವನ್ನು ರದ್ದುಕೋರಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಉದಯ್ ಗರುಡಾಚಾರ್ ವಿರುದ್ಧ ಪ್ರಕರಣವನ್ನು ರದ್ದುಗೊಳಿಸಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ