ವಾಹನಗಳ ಮಾಲಿನ್ಯ ಪರೀಕ್ಷೆ ಶುಲ್ಕ ಹೆಚ್ಚಳ: ಯಾವುದಕ್ಕೆ ಎಷ್ಟು ಏರಿಕೆ?

ಕರ್ನಾಟಕದಲ್ಲಿ ವಾಹನಗಳ ಮಾಲಿನ್ಯ ಪರೀಕ್ಷಾ (PUCC) ಶುಲ್ಕ ಹೆಚ್ಚಳವಾಗಿದ್ದು, ದ್ವಿಚಕ್ರ, ಆಟೋ ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ಪರಿಷ್ಕೃತ ದರ ನಿಗದಿಯಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಕಡ್ಡಾಯ ಕ್ಯಾಲಿಬ್ರೇಷನ್ ಸೇರಿದಂತೆ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಾಹನಗಳ ಮಾಲಿನ್ಯ ಪರೀಕ್ಷೆ ಶುಲ್ಕ ಹೆಚ್ಚಳ: ಯಾವುದಕ್ಕೆ ಎಷ್ಟು ಏರಿಕೆ?
ವಾಹನಗಳ ಮಾಲಿನ್ಯ ಪರೀಕ್ಷೆ ದರ ಹೆಚ್ಚಳ

Updated on: Aug 16, 2026 | 7:30 AM

ಮುಖ್ಯಾಂಶಗಳು

  • ರಾಜ್ಯದ ವಾಹನ ಸವಾರರಿಗೆ ಮತ್ತೊಂದು ಶಾಕ್​
  • ವಾಹನಗಳ ಮಾಲಿನ್ಯ ಪರೀಕ್ಷೆ ಶುಲ್ಕ ಹೆಚ್ಚಳ
  • ಯಾವ ವಾಹನಕ್ಕೆ ಎಷ್ಟು ದರ ಏರಿಕೆ?

ಬೆಂಗಳೂರು, ಆಗಸ್ಟ್​​ 16: ಕರ್ನಾಟಕದಲ್ಲಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (Pollution Under Control Certificate – PUCC) ಪಡೆಯಲು ವಾಹನ ಮಾಲೀಕರು ಇನ್ನು ಮುಂದೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ರಾಜ್ಯ ಸರ್ಕಾರವು ಎಲ್ಲ ವಾಹನ ವರ್ಗಗಳಿಗೆ ಅನ್ವಯವಾಗುವಂತೆ ಮಾಲಿನ್ಯ ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿದೆ. ಮಾಲಿನ್ಯ ಪರೀಕ್ಷಾ ಕೇಂದ್ರಗಳ ನಿರ್ವಾಹಕರು ಕಾರ್ಯಾಚರಣೆ ವೆಚ್ಚ ಹೆಚ್ಚಿರುವುದನ್ನು ಉಲ್ಲೇಖಿಸಿ ಶುಲ್ಕ ಪರಿಷ್ಕರಣೆಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ಸಾರಿಗೆ ಇಲಾಖೆ ಆಗಸ್ಟ್ 13ರಂದು ಹೊಸ ದರಗಳ ಅಧಿಸೂಚನೆ ಹೊರಡಿಸಿದೆ. ಇದಕ್ಕೂ ಮೊದಲು ಕೊನೆಯ ಬಾರಿ ಏಪ್ರಿಲ್ 2022ರಲ್ಲಿ ಶುಲ್ಕ ಪರಿಷ್ಕರಿಸಲಾಗಿತ್ತು.

ದರ ಎಷ್ಟು ಹೆಚ್ಚಳ?

ವಾಹನ ವರ್ಗ ಹಳೆಯ ಶುಲ್ಕ ಹೆಚ್ಚಳವಾಗಿರುವ ದರ ಹೊಸ ಶುಲ್ಕ
ದ್ವಿಚಕ್ರ ವಾಹನಗಳು 65 15 80
ಆಟೋರಿಕ್ಷಾ 75 5 80
ಪೆಟ್ರೋಲ್/CNG/LPG ನಾಲ್ಕು ಚಕ್ರ ವಾಹನಗಳು 115 35 150
ಎಲ್ಲಾ ಡೀಸೆಲ್ ವಾಹನಗಳು160 160 40 200

ಇಂಧನ, ಬಾಡಿಗೆ, ಇಂಟರ್ನೆಟ್ ಸೇವೆ, ಉಪಕರಣಗಳ ನಿರ್ವಹಣೆ, ವಿದ್ಯುತ್ ಹಾಗೂ ಸಿಬ್ಬಂದಿ ವೇತನ ಸೇರಿದಂತೆ ಕಾರ್ಯಾಚರಣೆ ವೆಚ್ಚಗಳು ಗಣನೀಯವಾಗಿ ಹೆಚ್ಚಿರುವುದರಿಂದ ಶುಲ್ಕ ಪರಿಷ್ಕರಣೆ ಅಗತ್ಯವಾಗಿತ್ತು ಎಂದು ಪರೀಕ್ಷಾ ಕೇಂದ್ರಗಳ ನಿರ್ವಾಹಕರು ಇಲಾಖೆಗೆ ತಿಳಿಸಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ ಅಂಗವಾಗಿ HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ

ಮಾಲಿನ್ಯ ಪರೀಕ್ಷೆಗೆ ಕಠಿಣ ನಿಯಮ

ಶುಲ್ಕ ಪರಿಷ್ಕರಣೆಯ ಜೊತೆಗೆ ಮಾಲಿನ್ಯ ಪರೀಕ್ಷಾ ಕೇಂದ್ರಗಳು ಕಡ್ಡಾಯವಾಗಿ ಪಾಲಿಸಬೇಕಾದ ಹೊಸ ನಿರ್ದೇಶನಗಳನ್ನೂ ಸಾರಿಗೆ ಇಲಾಖೆ ಹೊರಡಿಸಿದೆ.

  • ಪರೀಕ್ಷೆಗೆ ಬಳಸುವ ಗ್ಯಾಸ್ ಅನಾಲೈಸರ್‌ಗಳನ್ನು ನಿಯಮಿತವಾಗಿ ಮರುಮಾಪನ (ಕ್ಯಾಲಿಬ್ರೇಷನ್) ಮಾಡಬೇಕು.
  • ಕೊನೆಯ ಕ್ಯಾಲಿಬ್ರೇಷನ್ ದಿನಾಂಕವನ್ನು ವಾಹನ ಮಾಲೀಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು.
  • PUCC ಪ್ರಮಾಣಪತ್ರದಲ್ಲಿ ಕೈಬರಹದ ನಮೂದುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.
  • ಕೇಂದ್ರ ಮೋಟಾರು ವಾಹನ ನಿಯಮಗಳು-1989ರ ರೂಲ್ 115ರಲ್ಲಿ ನಿಗದಿಪಡಿಸಿರುವ ಮಿತಿಯೊಳಗೆ ವಾಹನದ ಹೊರಸೂಸುವಿಕೆ ಇದ್ದರೆ ಮಾತ್ರ ಪ್ರಮಾಣಪತ್ರ ನೀಡಬೇಕು.
  • ಪ್ರಮಾಣಪತ್ರದ ಅವಧಿ, ಹೋಲೋಗ್ರಾಂ ಕಡ್ಡಾಯ
  • ಭಾರತ್ ಸ್ಟೇಜ್-IV ಮತ್ತು ಭಾರತ್ ಸ್ಟೇಜ್-VI ವಾಹನಗಳಿಗೆ ನೀಡುವ PUCC ಪ್ರಮಾಣಪತ್ರವು 12 ತಿಂಗಳುಗಳವರೆಗೆ ಮಾನ್ಯವಾಗಿರುತ್ತದೆ.
  • ಪರೀಕ್ಷಾ ಕೇಂದ್ರಗಳು ಮಾಲಿನ್ಯ ಪರೀಕ್ಷೆ ಮತ್ತು ಉಪಕರಣಗಳ ನಿರ್ವಹಣೆಗೆ ಅಗತ್ಯ ಸ್ಥಳ ಹಾಗೂ ಸೌಲಭ್ಯಗಳನ್ನು ಹೊಂದಿರಬೇಕು. ಅಲ್ಲದೆ, ಕೇಂದ್ರದ ಪರವಾನಗಿಯನ್ನು ಗ್ರಾಹಕರಿಗೆ ಸುಲಭವಾಗಿ ಕಾಣುವ ಸ್ಥಳದಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:26 am, Sun, 16 August 26

Loading...
Unable to load recommendations.
Follow Us