ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಕಡಿಮೆ: ಕೆಎಂಎಫ್​ ಎಂಡಿ ಸ್ಪಷ್ಟನೆ

ಇಂದಿನಿಂದ ಪ್ರತಿ ಲೀಟರ್​ ನಂದಿನಿ ಹಾಲಿನ ದರ 3 ರೂಪಾಯಿ ಹೆಚ್ಚಳವಾಗಿದೆ.ಇನ್ನು ಈ ಬೆಲೆ ಏರಿಕೆ ಬಗ್ಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (ಕೆಎಂಎಫ್), ಎಂಡಿ ಜಗದೀಶ್ ಕಾರಣವನ್ನು ಕೊಟ್ಟಿದ್ದಾರೆ.

ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಕಡಿಮೆ: ಕೆಎಂಎಫ್​ ಎಂಡಿ ಸ್ಪಷ್ಟನೆ
KMF
Edited By:

Updated on: Aug 01, 2023 | 10:27 AM

ಬೆಂಗಳೂರು, (ಆಗಸ್ಟ್ 01):  ಇಂದಿನಿಂದ ಕರ್ನಾಟಕದಲ್ಲಿ ಪ್ರತಿ ಲೀಟರ್​ ನಂದಿನಿ ಹಾಲಿನ( (Nandini Milk) )ದರ 3 ರೂಪಾಯಿ ಹೆಚ್ಚಳವಾಗಿದೆ. ಜುಲೈ 21 ರಂದು ನಡೆದ ಸಭೆಯಲ್ಲಿ ಹಾಲಿನ ದರ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಗಸ್ಟ್​ 1 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಸೂಚಿಸಿದ್ದರು. ಅದರಂತೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (ಕೆಎಂಎಫ್)(KMF) , ಇಂದಿನಿಂದ ಪ್ರತಿ ಲೀಟರ್​ ನಂದಿನಿ ಹಾಲಿನ ದರವನ್ನು 3 ರೂಪಾಯಿ ಹೆಚ್ಚಳ ಮಾಡಿದೆ. ಇನ್ನು ಹಾಲಿನ ಬೆಲೆ ಏರಿಕೆ ಕೆಎಂಫ್​ ಎಂಡಿ ಕೆಎಂಎಫ್ ಎಂಡಿ ಜಗದೀಶ್ ಅವರು ಟಿವಿ9ಗೆ ಪ್ರತಿಕ್ರಿಯಿಸಿದ್ದು, ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಕಡಿಮೆ ಇದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಇಂದಿನಿಂದ ದುಬಾರಿ ದುನಿಯಾ; ಟೊಮೆಟೊ ದರ ಬರೆಯ ಮೇಲೆ ಮತ್ತೊಂದು ಬರೆ, ಹಾಲು-ಹೋಟೆಲ್ ದರ ಹೆಚ್ಚಳ

ಬೆಂಗಳೂರಿನಲ್ಲಿ ಇಂದು (ಆಗಸ್ಟ್ 01) ಟಿವಿ9 ಜೊತೆ ಮಾತನಾಡಿದ ಕೆಎಂಎಫ್​ ಎಂಡಿ ಜಗದೀಶ್, ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆ ದರವಿದೆ. 39 ರೂಪಾಯಿ ಇದ್ದ ನಂದಿನಿ ಹಾಲಿನ ದರ ಈಗ 42 ರೂ. ಆಗಿದೆ. ಆಂಧ್ರ ಪ್ರದೇಶದಲ್ಲಿ ಲೀಟರ್ ಹಾಲಿಗೆ 56 ರೂ., ಕೇರಳದಲ್ಲಿ 51 ರೂ. ಇದೆ. ಮಹಾರಾಷ್ಟ್ರದಲ್ಲಿ 54 ರೂ., ತಮಿಳುನಾಡಿನಲ್ಲಿ ಹಾಲಿಗೆ 44 ರೂ. ಇದೆ ಎಂದು ಮಾಹಿತಿ ನೀಡಿದರು.

ದರ ಕಡಿಮೆ ಹಿನ್ನೆಲೆಯಲ್ಲಿ ರೈತರು ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ರೈತರ ಆದಾಯವನ್ನು ಗಮನದಲ್ಲಿಟ್ಟುಕೊಂಡು ದರ ಹೆಚ್ಚಳ ಮಾಡಲಾಗಿದೆ. ಗ್ರಾಹಕರು ಸಹಕರಿಸಬೇಕು ಎಂದು ಕೆಎಂಎಫ್ ಎಂಡಿ ಜಗದೀಶ್ ಮನವಿ ಮಾಡಿದರು.

ಯಾವ್ಯಾವ ಪಾಕೇಟ್​ ಹಾಲು ಎಷ್ಟಿದೆ?

ಟೋನ್ಡ್​​ ಹಾಲು ನೀಲಿ ಪಾಕೆಟ್‌ನ ದರ ಪ್ರತಿ ಲೀಟರ್​ ಹಿಂದೆ 39 ರೂಪಾಯಿ ಇತ್ತು. ಪರಿಷ್ಕೃತ ದರ 42 ರೂಪಾಯಿಗೆ ಹೆಚ್ಚಳವಾಗಿದೆ. ಹಾಗೇ ಹೋಮೋಜಿನೈಸ್ಡ್ ಹಸುವಿನ ಹಾಲು ಹಿಂದೆ ಪ್ರತಿ ಲೀಟರ್‌ಗೆ 40 ರೂಪಾಯಿ ಇತ್ತು.. ಇದು ಇಂದಿನಿಂದ 43 ರೂಪಾಯಿ ಆಗಲಿದೆ. ಅದೇ ರೀತಿ ಶುಭಂ ಅಂದ್ರೆ ಕೇಸರಿ ಪಾಕೆಟ್ ಅಥವಾ ಸ್ಪೆಷಲ್ ಹಾಲಿನ ದರ ಹಿಂದೆ ಪ್ರತಿ ಲೀಟರ್‌ಗೆ 45 ರೂಪಾಯಿ ಇದ್ದು, ಪರಿಷ್ಕೃತ ದರ 48 ರೂಪಾಯಿಗೆ ಹೆಚ್ಚಳವಾಗಿದೆ. ಇನ್ನು ಮೊಸರು ಪ್ರತಿ ಲೀಟರ್‌ಗೆ ಹಿಂದೆ 47 ರೂಪಾಯಿ ಇತ್ತು. ಇಂದಿನಿಂದ ಪ್ರತಿ ಲೀಟರ್‌ ಮೊಸರಿನ ಬೆಲೆ 50 ರೂಪಾಯಿಗೆ ಹೆಚ್ಚಳವಾಗಿದೆ. ಉಳಿದಂತೆ 200 ಮಿಲಿ ಪಾಕೆಟ್‌ನ ನಂದಿನಿ ಮಜ್ಜಿಗೆ ಬೆಲೆ ಹಿಂದೆ 7 ರೂಪಾಯಿ ಇತ್ತು.. ಪರಿಷ್ಕೃತ ದರ 9 ರೂಪಾಯಿಗೆ ಹೆಚ್ಚಳವಾಗಿದೆ.

ಇನ್ನಷ್ಟು ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ