ಪರಿಷತ್​​ ಚುನಾವಣೆ: ಕೊನೇ ಕ್ಷಣದಲ್ಲಿ ಕೈ ಹಿಡಿದ BJP ರಾಜ್ಯ ನಾಯಕರ ಕಾರ್ಯತಂತ್ರ; ತಪ್ಪಿದ ಭಾರೀ ಮುಖಭಂಗ

ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ವಿಪಕ್ಷ ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಜಯಗಳಿಸಿದ್ದು, ಕೊನೆಯ ಕ್ಷಣದಲ್ಲಿ ರಾಜ್ಯ ನಾಯಕರು ನಡೆಸಿದ ಚಾಣಾಕ್ಷ ಕಾರ್ಯತಂತ್ರದಿಂದಾಗಿ ಪಕ್ಷಕ್ಕೆ ಉಂಟಾಗಬಹುದಾಗಿದ್ದ ದೊಡ್ಡ ಮುಖಭಂಗ ತಪ್ಪಿದೆ. ಇನ್ನು ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್​​. ಅಶೋಕ್​​, . ಯಾವ ಶಾಸಕರು ಕ್ರಾಸ್ ವೋಟಿಂಗ್ ಮಾಡಿದ್ದಾರೆಂದು ಗೊತ್ತಾಗುತ್ತೆ. ಕ್ಷಕ್ಕೆ ದ್ರೋಹ ಬಗೆದವರು ಸಿಕ್ಕಿಹಾಕಿಕೊಳ್ಳುತ್ತಾರೆ ಎಂದಿದ್ದಾರೆ.

ಪರಿಷತ್​​ ಚುನಾವಣೆ: ಕೊನೇ ಕ್ಷಣದಲ್ಲಿ ಕೈ ಹಿಡಿದ BJP ರಾಜ್ಯ ನಾಯಕರ ಕಾರ್ಯತಂತ್ರ; ತಪ್ಪಿದ ಭಾರೀ ಮುಖಭಂಗ
ವಿಪಕ್ಷ ನಾಯಕ ಆರ್​​. ಅಶೋಕ್​​
Image Credit source: Tv9 Kannada
Edited By:

Updated on: Jun 18, 2026 | 8:21 PM

ಬೆಂಗಳೂರು, ಜೂನ್​​ 18: ವಿಧಾನ ಪರಿಷತ್​​ನ 7 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ 5 ​​ಮತ್ತು 2 ಸ್ಥಾನಗಳಲ್ಲಿ ವಿಪಕ್ಷ ಬಿಜೆಪಿ ಗೆಲುವು ದಾಖಲಿಸಿದೆ. ಜೆಡಿಎಸ್​​ ಅಭ್ಯರ್ಥಿಗೆ ಸೋಲಾಗಿದೆ. ಭಾರಿ ಕ್ರಾಸ್​​ ವೋಟಿಂಗ್​​ಗೆ ಎಲೆಕ್ಷನ್​​ ಸಾಕ್ಷಿಯಾಗಿದ್ದು 11 ಮತಗಳನ್ನು ಕಾಂಗ್ರೆಸ್​​ ಹೆಚ್ಚುವರಿಯಾಗಿ ಪಡೆದುಕೊಂಡಿದೆ. ಆ ಮೂಲಕ ವಿಪಕ್ಷಗಳಿಗೆ ಭರ್ಜರಿ ಚೆಕ್​​ಮೇಟ್​​ ಕೊಟ್ಟಿದೆ.

ಬಿಜೆಪಿ ಕೈ ಹಿಡಿದ ರಾಜ್ಯ ನಾಯಕರ ಕಾರ್ಯತಂತ್ರ

ಹೌದು, ಚುನಾವಣಾ ಅಖಾಡದಲ್ಲಿದ್ದ ಬಿಜೆಪಿ ಅಭ್ಯರ್ಥಿ ಆರ್.ರಘುಗೆ 29 ಮತಗಳು ಸಿಕ್ಕಿದ್ದರೆ, ಲಿಂಗರಾಜು ಪಾಟೀಲ್​ಗೆ 27 ಮತಗಳು ಬಿದ್ದಿವೆ. ಈ ಪೈಕಿ ಆರ್.ರಘುಗೆ ಚಲಾವಣೆಯಾಗಿದ್ದ ಒಂದು ಮತ ಅಸಿಂಧುಗೊಂಡಿದೆ. ಪ್ರತಿ ಅಭ್ಯರ್ಥಿ ಗೆಲ್ಲಲು 27.63 ಮತ ಪಡೆಯಬೇಕು. ಆದರೆ ಲಿಂಗರಾಜ ಪಾಟೀಲ್​ಗೆ ಕೇವಲ 27 ಮತಗಳು ಸಿಕ್ಕಿದ್ದವು. ಆದರೆ ಜೆಡಿಎಸ್​ನ ಗೋವಿಂದರಾಜು 14 ಮತ ಪಡೆದಿದ್ದ ಹಿನ್ನೆಲೆ ಎಲಿಮಿನೇಷನ್ ರೌಂಡ್​ನಲ್ಲಿ ಲಿಂಗರಾಜ್ ಪಾಟೀಲ್​ಗೆ ಜಯ ಸಿಕ್ಕಿದೆ. ಇಬ್ಬರೂ ಅಭ್ಯರ್ಥಿಗಳ ಗೆಲುವಿಗೆ ಕೊನೆಯ ಕ್ಷಣದಲ್ಲಿ ಬಿಜೆಪಿ ರಾಜ್ಯ ನಾಯಕರ ಕಾರ್ಯತಂತ್ರ ಕೈ ಹಿಡಿದಿದೆ ಎನ್ನಲಾಗಿದೆ.

ಇದನ್ನೂ ಓದಿ: ಪರಿಷತ್​​ ಚುನಾವಣೆ ಫಲಿತಾಂಶ; ಕಾಂಗ್ರೆಸ್​​ನ​​ ಐವರು, ಬಿಜೆಪಿಯ ಇಬ್ಬರ ಗೆಲುವು, ಸೋಲುಂಡ ಜೆಡಿಎಸ್​​ನ ಗೋವಿಂದರಾಜು

ಬಿಜೆಪಿ ಅಭ್ಯರ್ಥಿಗಳಿಗೆ ತಲಾ 28 ಮತಗಳನ್ನು ಹಾಕಿಸುವಂತೆ ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ ಇಂದು ಬೆಳಗ್ಗೆ 30 ಮತಗಳನ್ನು ಹಾಕಿಸಲೇಬೇಕು ಎಂದು ವಿಪಕ್ಷ ನಾಯಕ ಅಶೋಕ್ ಪಟ್ಟುಹಿಡಿದಿದ್ದರು. ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯಗೆ ತಲಾ 2 ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಹಾಕಿಸಲಾಗಿದ್ದು, ಹೀಗಾಗಿ ಕೊನೆಯ ಕ್ಷಣದಲ್ಲಿ ಬಿಜೆಪಿಗೆ ದೊಡ್ಡ ಮುಖಭಂಗ ತಪ್ಪಿದೆ.

‘ಪಕ್ಷಕ್ಕೆ ದ್ರೋಹ ಬಗೆದವರು ಸಿಕ್ಕಿಹಾಕಿಕೊಳ್ಳುತ್ತಾರೆ’

ಇನ್ನು ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್​​. ಅಶೋಕ್​​, ನಮ್ಮ ಮೂರು ಮತಗಳು ಕ್ರಾಸ್​ ಆಗಿದೆ ಅಂತಾ ಮಾಹಿತಿ ಬಂದಿದೆ. ಯಾವ ಶಾಸಕರು ಕ್ರಾಸ್ ವೋಟಿಂಗ್ ಮಾಡಿದ್ದಾರೆಂದು ಗೊತ್ತಾಗುತ್ತೆ. ಮುಂದೆ ಅದರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಆರ್​.ರಘು ಅವರಿಗೆ ಕೊಟ್ಟಿದ್ದ ಒಂದು ಮತ ಅಸಿಂಧು ಆಗಿದೆ. ಲಿಂಗರಾಜ್​ ಪಾಟೀಲ್​ಗೆ ನಿಗದಿ ಮಾಡಿದ 3 ಮತಗಳು ಮಿಸ್ ಆಗಿದೆ. ನಾಲ್ಕು ಮತಗಳನ್ನು ಜೆಡಿಎಸ್​ಗೆ ಕೊಟ್ಟಿದ್ದೆವು. ಪಕ್ಷಕ್ಕೆ ದ್ರೋಹ ಬಗೆದವರು ಸಿಕ್ಕಿಹಾಕಿಕೊಳ್ಳುತ್ತಾರೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:02 pm, Thu, 18 June 26

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us