ಮತ್ತೆ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮುಂದಾದ ಸಾರಿಗೆ ನೌಕರರು: ಏ 8ರಂದು ಬಸ್ ಸಂಚಾರ ಡೌಟ್

ಕರ್ನಾಟಕ ಸಾರಿಗೆ ನೌಕರರು 38 ತಿಂಗಳ ವೇತನ ಹಿಂಬಾಕಿ ಹಾಗೂ 2024ರ ಜನವರಿಯಿಂದ ವೇತನ ಪರಿಷ್ಕರಣೆಗೆ ಆಗ್ರಹಿಸಿ ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಸರ್ಕಾರವು 26 ತಿಂಗಳ ಹಿಂಬಾಕಿ ಮತ್ತು 2025 ಏಪ್ರಿಲ್‌ನಿಂದ ಪರಿಷ್ಕರಣೆಗೆ ಒಪ್ಪಿದ್ದರೂ, ನೌಕರರು ಇದನ್ನು ತಿರಸ್ಕರಿಸಿದ್ದಾರೆ. ಏಪ್ರಿಲ್ 8ರಿಂದ ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ನಡೆಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಮತ್ತೆ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮುಂದಾದ ಸಾರಿಗೆ ನೌಕರರು: ಏ 8ರಂದು ಬಸ್ ಸಂಚಾರ ಡೌಟ್
ಕೆಸ್​ಆರ್​ಟಿಸಿ ಬಸ್ (ಸಂಗ್ರಹ ಚಿತ್ರ)
Image Credit source: newsclick
Edited By:

Updated on: Apr 06, 2026 | 9:59 PM

ಬೆಂಗಳೂರು, ಏಪ್ರಿಲ್ 06: 38 ತಿಂಗಳ ವೇತನ ಹಿಂಬಾಕಿ ‌ಮತ್ತು ಹೊಸ ವೇತನ (Salary Arrears) ಪರಿಷ್ಕರಣೆಗಾಗಿ ಆಗ್ರಹಿಸಿ ಈಗಾಗಲೇ ಸಾರಿಗೆ ನೌಕರರು ಹೋರಾಟಕ್ಕೆ ಮುಂದಾಗಿದ್ದರು. ಆದರೆ ‌ಸರ್ಕಾರ 26 ತಿಂಗಳ ವೇತನ ಹಿಂಬಾಕಿ 2025 ಏಪ್ರಿಲ್​ನಿಂದ ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿತ್ತು. ಸದ್ಯ ಇದಕ್ಕೆ ಒಪ್ಪದ ಸಾರಿಗೆ ನೌಕರರ ಕೂಟ ಮತ್ತೆ ಹೋರಾಟಕ್ಕೆ ಮುಂದಾಗಿದೆ.

ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​ವರೆಗೆ ಪಾದಯಾತ್ರೆ

ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ನೀಡಬೇಕಿದ್ದ 38 ವೇತನ ಹಿಂಬಾಕಿ 2024ರಿಂದ ಆಗಬೇಕಿದ್ದ, ಹೊಸ ವೇತನ ಒಪ್ಪಂದಕ್ಕಾಗಿ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದರು. ಆದರೆ ‌ರಾಜ್ಯ ಸರ್ಕಾರ 38 ತಿಂಗಳು ವೇತನ ಹಿಂಬಾಕಿ ಬದಲಿಗೆ 26 ತಿಂಗಳು ವೇತನ ಹಿಂಬಾಕಿ, 2024 ಜನವರಿ ಬದಲಿಗೆ 2025ರ ಏಪ್ರಿಲ್​ನಿಂದ ಹೊಸ ವೇತನ ಒಪ್ಪಂದ ಮಾಡುವುದಾಗಿ ಈಗಾಗಲೇ ಆದೇಶ ಮಾಡಿದೆ. ಆದರೆ ಇದಕ್ಕೆ ಒಪ್ಪದ ಸಾರಿಗೆ ನೌಕರರ ಒಕ್ಕೂಟ ಇಂದು ಸುದ್ದಿಗೋಷ್ಠಿ ನಡೆಸಿ ಯಾವುದೇ ‌ಕಾರಣಕ್ಕೂ ಸರ್ಕಾರದ ಆದೇಶವನ್ನು ನಾವು ಒಪ್ಪುವುದಿಲ್ಲ. ಏಪ್ರಿಲ್​ 8ರಿಂದ ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​ವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಸಾರಿಗೆ ನೌಕರರ ಒಕ್ಕೂಟ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ.

ಇದನ್ನೂ ಓದಿ: ವೇತನ ಹಿಂಬಾಕಿಗೆ ಡಿಮ್ಯಾಂಡ್​​: ಜ.29ರಂದು ಸಾರಿಗೆ ನೌಕರರ ಪ್ರತಿಭಟನೆ

ಇನ್ನು ಸಾರಿಗೆ ನೌಕರರ ಒಕ್ಕೂಟ 38 ತಿಂಗಳ ವೇತನ ಹಿಂಬಾಕಿ ಮತ್ತು 2024 ಜನವರಿಯಿಂದಲೇ ವೇತನ ಹೆಚ್ಚಳ ಮಾಡಬೇಕೆಂದು ಪಟ್ಟುಹಿಡಿದಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ 38 ತಿಂಗಳ ವೇತನ ಹಿಂಬಾಕಿಯಲ್ಲಿ 26 ತಿಂಗಳ ವೇತನ ಹಿ‌ಂಬಾಕಿ 1272 ಕೋಟಿ ರೂ ನೀಡುತ್ತಿದೆ. 2024 ಜನವರಿಯಿಂದ ಆಗಬೇಕಿದ್ದ ಹೊಸ ವೇತನ ಒಪ್ಪಂದವನ್ನು 2025 ಏಪ್ರಿಲ್​ನಿಂದ ಮಾಡಲು ಮುಂದಾಗಿದೆ.

1970 ಕೋಟಿ ರೂ ಹಿಂಬಾಕಿ ಬಿಡುಗಡೆಗೆ ಪಟ್ಟು

ಸರ್ಕಾರದ ಈ ನಿರ್ಧಾರಕ್ಕೆ ಒಪ್ಪದ ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ನೌಕರರು 38 ತಿಂಗಳ ವೇತನ ಹಿಂಬಾಕಿ 1970 ಕೋಟಿ ರೂ ಬಿಡುಗಡೆ ಮಾಡಲೇಬೇಕು ಮತ್ತು 2024 ಜನವರಿಯಿಂದಲೇ ಹೊಸ ವೇತನ ಒಪ್ಪಂದ ಮಾಡಬೇಕೆಂದು ಪಟ್ಟುಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಫ್ರೀಡಂ ಪಾರ್ಕ್​ಗೆ ಬಂದು, ಅಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಂತರ ಮುಷ್ಕರಕ್ಕೆ ಹೋಗಬೇಕೆಂದು ಸಾರಿಗೆ ನೌಕರರ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ. ಅಂದು ಬಸ್​​ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದೂಡುವುದು ಉತ್ತಮ.

ಇದನ್ನೂ ಓದಿ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರ ಹೋರಾಟ: ನಾಳೆಯಿಂದಲೇ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತ?

ಒಟ್ಟಿನಲ್ಲಿ ರಾಜ್ಯ ಸರ್ಕಾರ ನೀಡಬೇಕಿದ್ದ 38 ತಿಂಗಳ ಬದಲಿಗೆ 26 ತಿಂಗಳಿನ ವೇತನ ಮತ್ತು 2024 ಜನವರಿ ಬದಲಿಗೆ ‌25 ಏಪ್ರಿಲ್​ನಿಂದ ಹೊಸ ವೇತನ ಪರಿಷ್ಕರಣೆ ಮಾಡುತ್ತೇವೆ ಅಂತಿದ್ದಾರೆ. ಆದರೆ ಇದಕ್ಕೆ ಸಾರಿಗೆ ನೌಕರರು ಒಪ್ಪದೆ ಮತ್ತೆ ಹೋರಾಟಕ್ಕೆ ಮುಂದಾಗಿದ್ದು, ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ‌ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us