ಬಾರ್​ನಲ್ಲಿ ಎಣ್ಣೆ ಹೊಡೆಯುವಾಗ ಶುರುವಾಯ್ತು ಕಿರಿಕ್; ಮಾತಿಗೆ ಮಾತು ಬೆಳೆದು ಇಬ್ಬರು ಯುವಕರ ಕಿಡ್ನಾಪ್‌

|

Updated on: Apr 13, 2023 | 12:00 PM

ಬಾರ್​ನಲ್ಲಿ ಎಣ್ಣೆ ಹೊಡೆಯುವಾಗ ಮಾತಿಗೆ ಮಾತು ಬೆಳೆದು ರೌಡಿಶೀಟರ್ ಸಹಚರರು ಹಾಗೂ ಸಿದ್ದಾಪುರ ಯುವಕರ ನಡುವೆ ಗಲಾಟೆಯಾಗಿ ಇಬ್ಬರು ಯುವಕರನ್ನ ಕಿಡ್ನಾಪ್ ಮಾಡಿದ ಘಟನೆ ನಗರದ ಸಿದ್ದಾಪುರದಲ್ಲಿ ನಡೆದಿದೆ.

ಬಾರ್​ನಲ್ಲಿ ಎಣ್ಣೆ ಹೊಡೆಯುವಾಗ ಶುರುವಾಯ್ತು ಕಿರಿಕ್; ಮಾತಿಗೆ ಮಾತು ಬೆಳೆದು ಇಬ್ಬರು ಯುವಕರ ಕಿಡ್ನಾಪ್‌
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಬಾರ್​ನಲ್ಲಿ ಎಣ್ಣೆ ಹೊಡೆಯುವಾಗ ಮಾತಿಗೆ ಮಾತು ಬೆಳೆದು ರೌಡಿಶೀಟರ್ ಸಹಚರರು ಹಾಗೂ ಸಿದ್ದಾಪುರ ಯುವಕರ ನಡುವೆ ಗಲಾಟೆಯಾಗಿ ಇಬ್ಬರು ಯುವಕರನ್ನ ಕಿಡ್ನಾಪ್(Kidnap) ಮಾಡಿದ ಘಟನೆ ನಗರದ ಸಿದ್ದಾಪುರದಲ್ಲಿ ನಡೆದಿದೆ. ಇದೇ ತಿಂಗಳ 9ರಂದು ಮನೋಜ್ ಹಾಗೂ 17 ವರ್ಷದ ಬಾಲಕ ಬಾರ್​ನಲ್ಲಿದ್ದಾಗ ಅಲ್ಲೇ ಕುಡಿಯಲು ಬಂದಿದ್ದ ಸಿದ್ಧಾಪುರ ಯುವಕರ ಜೊತೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ. ಬಳಿಕ ಮನೋಜ್ ಹಾಗೂ ಬಾಲಕನನ್ನ ಕಿಡ್ನಾಪ್ ಮಾಡಿ ಸಿದ್ಧಾಪುರಕ್ಕೆ ಕರೆದೊಯ್ದಿದ್ದರು.

ವಿಚಾರ ತಿಳಿದ ರೌಡಿಶೀಟರ್ ಹ್ಯಾಂಡ್ರೋ ಹರೀಶ್‌ ಎಂಬಾತ ತನ್ನ 15 ಸಹಚರರ ಜೊತೆ ಬೈಕ್​ನಲ್ಲಿ ಸಿನಿಮಾ ಸ್ಟೈಲ್​ನಲ್ಲಿ ಚೇಸ್ ಮಾಡಿ ಸಿದ್ದಾಪುರ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸಿದ್ಧಾಪುರ ಯುವಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಸಿದ್ದಾಪುರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆ ಸಂಬಂಧ 6 ಜನ ಯುವಕರು, 4 ಮಂದಿ ಕಾನೂನು ಸಂಘರ್ಷಕ್ಕೊಳಗಾದವರನ್ನ ಬಂಧಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ: ಓರ್ವ ಸಾವು

ಪ್ರಥಮ್ ವೈನ್ಸ್ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ; 8 ಲಕ್ಷ ಮೌಲ್ಯದ ಮದ್ಯ ವಶ

ಗದಗ: ನಗರದ ತಿಲಕ್ ಪಾರ್ಕ್ ಬಳಿಯ ಪ್ರಥಮ್ ವೈನ್ಸ್ ಮೇಲೆ ಅಬಕಾರಿ ಡಿಸಿ ಭರತೇಶ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದು, 8 ಲಕ್ಷ ಮೌಲ್ಯದ 2 ಸಾವಿರ ಲೀಟರ್ ಮದ್ಯವನ್ನ ವಶಕ್ಕೆ ಪಡೆದಿದ್ದಾರೆ. ಅಕೌಂಟ್ ಸರಿಯಲ್ಲ ಎನ್ನುವ ಕಾರಣಕ್ಕಾಗಿ ಇಂದು(ಏ.13)ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ದಾಖಲೆಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯವನ್ನು ಶೇಖರಣೆ ಮಾಡಿದ್ದು ಬೆಳಕಿಗೆ ಬಂದಿದ್ದು, ಸೀಜ್​ ಮಾಡಲಾಗಿದೆ ಎ.ಂದು ಅಬಕಾರಿ ಡಿಸಿ ಟಿವಿ9 ಗೆ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ