
ಬೆಂಗಳೂರು, ಅ.22: ಬೆಂಗಳೂರಿನ ಮೂಲಸೌಕರ್ಯಗಳ ಬಗ್ಗೆ ಧ್ವನಿ ಎತ್ತಿ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕಾರಣವಾಗಿದ್ದ ಕಿರಣ್ ಮಜುಂದಾರ್-ಶಾ, ಇದೀಗ ಮತ್ತೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ. ಈ ಹಿಂದೆ ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಎಕ್ಸ್ನಲ್ಲಿ ಹಂಚಿಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ಕಿರಣ್ ಮಜುಂದಾರ್-ಶಾ, (Kiran Mazumdar-Shaw) ಇದೀಗ ನಾನು ಕನ್ನಡತಿ ಎಂದು ಹೇಳಿಕೊಂಡ ಎಕ್ಸ್ನಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. ಗುಂಡಿಗಳ ಬಗ್ಗೆ ಪೋಸ್ಟ್ ಹಾಕಿ ಟೀಕೆಗೆ ಗುರಿಯಾಗಿದ್ದ ಕಿರಣ್ ಮಜುಂದಾರ್-ಶಾ ನೆನ್ನೆ (ಅ.21) ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರೂ. ಇದೀಗ ಇದರ ಬೆನ್ನಲೇ ಎಕ್ಸ್ನಲ್ಲಿ ನಾನು ಗುಜರಾತಿ ಅಲ್ಲ, ಕನ್ನಡತಿ ಎಂದು ಪೋಸ್ಟ್ ಹಾಕಿಕೊಂಡು, ಹೊಸ ಚರ್ಚೆಗೆ ಕಾರಣರಾಗಿದ್ದಾರೆ.
ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ, ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಮೇಲಿನ ನಿಷ್ಠೆಯ ಬಗ್ಗೆ ಪ್ರಶ್ನೆ ಮಾಡಿದವರಿಗೆ ಸರಿಯಾಗಿ ಉತ್ತರಿಸಿದ್ದಾರೆ. ಎಕ್ಸ್ನಲ್ಲಿ ಕನ್ನಡದ ಬಗ್ಗೆ ಕಿರಣ್ ಮಜುಂದಾರ್-ಶಾ ಹೀಗೆ ಹಂಚಿಕೊಂಡಿದ್ದಾರೆ. “ನಾನು ಬೆಂಗಳೂರಿನಲ್ಲಿ ಜನಿಸಿದ್ದು, ನನ್ನ ನಗರ, ನನ್ನ ಕನ್ನಡ ಸಂಸ್ಕೃತಿಯನ್ನು ಪ್ರೀತಿಸುತ್ತಾ ಏಳು ದಶಕಗಳನ್ನು ಇಲ್ಲಿ ಕಳೆದಿದ್ದೇನೆ. ಕನ್ನಡ ಅದ್ಭುತ ಭಾಷೆ, ಅದನ್ನು ಬರೆಯಲು ಹಾಗೂ ಮಾತನಾಡಲು ಬರುತ್ತದೆ. ನನ್ನ ನಿಷ್ಠೆಯನ್ನು ಪ್ರಶ್ನಿಸುವ ಯಾರಿಗೂ ನಾನು ಉತ್ತರಿಸುವ ಅಗತ್ಯ ಇಲ್ಲ, ನಾನು ಹೆಮ್ಮೆಯ ಕನ್ನಡತಿ” ಎಂದು ಬರೆದುಕೊಂಡಿದ್ದಾರೆ.
I was born in this city and have spent seven decades of loving my city, my Kannada culture and can read write n speak this wonderful language. I don’t think I am answerable to anyone who questions my loyalty to Karnataka. I am a proud Kannadiga. https://t.co/qan79ioepZ
— Kiran Mazumdar-Shaw (@kiranshaw) October 22, 2025
ನನ್ನನ್ನು ಕೆಲವರು ಹೊರಗಿನವರು ಎಂದು ಭಾವಿಸಿದ್ದಾರೆ. ಉತ್ತರ ಭಾರತೀಯ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಇನ್ನು ಕೆಲವರು ನಾನು ಗುಜರಾತಿ ಎಂದು ಕಮೆಂಟ್ ಮಾಡಿದ್ದಾರೆ. ನಗರದ ಮೂಲಸೌಕರ್ಯ ಸಮಸ್ಯೆಗಳ ಕುರಿತು ಬಹಿರಂಗವಾಗಿ ಮಾತನಾಡಿದಾಗ ಈ ಎಲ್ಲ ಆರೋಪ, ಪ್ರಶ್ನೆಗಳು ಬಂದಿದೆ. ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದಾಗ ಕೆಲವರು ಗೌರವಿಸಿದ್ರು, ಇನ್ನು ಕೆಲವರು ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ನಾನು ನೀವು ಭಾವಿಸಿದಂತೆ ಇಲ್ಲ, ನಾನು ಕನ್ನಡತಿ ಎಂದು ಹೇಳಿದ್ದಾರೆ. ನಾನು ಈ ಮಣ್ಣಿನ ಹೆಮ್ಮೆಯ ಮಗಳು, ನಾನು ಬೆಂಗಳೂರಿನಲ್ಲಿ ಜನಿಸಿದ್ದೇನೆ ಮತ್ತು ನನ್ನ ನಗರದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಪ್ರಶ್ನೆ ಮಾಡಿದವರಿಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ಸ್ವಂತ ಖರ್ಚಿನಲ್ಲಿ ಗುಂಡಿ ಮುಚ್ಚಿದ ವ್ಯಕ್ತಿ, ಒಂದು ಗಂಟೆಯಲ್ಲಿ ಎಲ್ಲವನ್ನು ಹಾಳು ಮಾಡಿದ ನೀರಿನ ಟ್ಯಾಂಕರ್
ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಎಕ್ಸ್ನಲ್ಲಿ ಸರ್ಕಾರವನ್ನು ಹಾಗೂ ಉತ್ತಮ ಆಡಳಿತದ ಅವಶ್ಯಕತೆ ಇದೆ ಎಂದು ಹೇಳುವ ಮೂಲಕ ಟೀಕೆಗೆ ಹಾಗೂ ಬೆಂಬಲಕ್ಕೆ ಒಳಗಾಗಿದ್ದರು. ದೀರ್ಘಕಾಲದ ಮೂಲಸೌಕರ್ಯ ನಿರ್ಲಕ್ಷ್ಯದಿಂದ ಬೆಂಗಳೂರು ಬಳಲುತ್ತಿದೆ ಎಂಬ ಪೋಸ್ಟ್ ಹಾಕಿದ್ದಕ್ಕೆ ರಾಜಕೀಯ ವ್ಯಕ್ತಿಗಳು ಅವರನ್ನು ಟೀಕೆ ಮಾಡಲು ಶುರು ಮಾಡಿದ್ರು, ಆದರೆ ಕಿರಣ್ ಮಜುಂದಾರ್-ಶಾ ಇದಕ್ಕೆಲ್ಲ ಉತ್ತರ ನೀಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ