ಬೆಂಗಳೂರು: ಕೇಂದ್ರ ಸಚಿವರಾಗಿದ್ದ ಹರ್ಷವರ್ಧನ್, ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್ರನ್ನು ಸಂಪುಟದಿಂದ ಕೈಬಿಟ್ಟಿದ್ದಾರೆ. ಎಷ್ಟೋ ನಾಯಕರನ್ನು ಬೇರೆ ಬೇರೆ ಹಂತದಲ್ಲಿ ಕೈಬಿಟ್ಟಿದ್ದಾರೆ. ಇನ್ನು ಕೆ.ಎಸ್.ಈಶ್ವರಪ್ಪ (KS Eshwarappa) ಯಾವ ಊರಿನ ದಾಸಯ್ಯ ಅಂತ ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ನನಗೆ ಈಗಲೂ ನೂರಾರು ಜನರಿಂದ ಕರೆಗಳು ಬರುತ್ತಿವೆ. ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್, ನೀವೆಲ್ಲಾ ಪಕ್ಷವನ್ನು ಕಟ್ಟಿದವರು. ನಿಮ್ಮನ್ನು ಸಚಿವ ಸಂಪುಟದಿಂದ ಬಿಡಬಾರದು ಎನ್ನುತ್ತಿದ್ದಾರೆ. ಡಿಸಿಎಂ ಆದ್ರು ಮಾಡಬೇಕು ಅಂತ ಹೇಳುತ್ತಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಅಭಿಪ್ರಾಯಟ್ಟರು.
ನನ್ನನ್ನು ಸಚಿವ ಸಂಪುಟದಿಂದ ಬಿಡಬಹುದು ಅಥವಾ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಹುದು. ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಬಿ.ಎಸ್.ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆಗಿದ್ದರು. ದುರಂತ ಏನಂದ್ರೆ ಪೂರ್ಣ ಬಹುಮತ ಸಿಕ್ಕಿಲ್ಲ. ಮುಂದಿನ ಚುನಾವಣೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು, ಪಕ್ಷದ ನಾಯಕನ ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಜಿ ಸಚಿವರು ತಿಳಿಸಿದರು.
ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಬೇರೆ ಪಕ್ಷದವರು ಬಿಜೆಪಿಗೆ ಸೇರುತ್ತಿದ್ದಾರೆ. ಬಿಜೆಪಿ ಹಾಲು ಇದ್ದಂತೆ, ಸಿಎಂ ಬೊಮ್ಮಾಯಿ ಜೇನು. ಹಾಲು ಬದಲಾಗಲ್ಲ. ಹಾಲಿಗೆ ಸಿಹಿ ಸೇರಿಕೊಂಡಿದೆ ಎಂದು ಹೇಳಿದರು.
ಇಡೀ ರಾಜ್ಯದ ಅಧಿಕಾರಿಗಳು ಸುಮ್ಮನೆ ಕೂತಿಲ್ಲ. ಸಚಿವ ಸಂಪುಟ ಇಲ್ಲ ಎನ್ನುವ ಕಾರಣಕ್ಕೆ ಯಾವುದೇ ಕೆಲಸ ಆಗುತ್ತಿಲ್ಲ ಅಂತಲ್ಲ. ಸಿಎಂ ಇಲ್ಲ. ಮೂರು ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ಮುಗಿಯತ್ತೆ. ಎಲ್ಲ ಅಭಿವೃದ್ಧಿ ಕೆಲಸಗಳು ಶುರುವಾಗತ್ತೆ. ಸಿಎಂ ಇಲ್ಲ ಅಂತ ನಾವೆಲ್ಲ ಸುಮ್ಮನೆ ಕೂತಿಲ್ಲ. ಪ್ರವಾಹ, ಕೊವಿಡ್ ಪರಿಸ್ಥಿತಿ ಸೇರಿ ಎಲ್ಲವನ್ನು ನಿಭಾಯಿಸುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಮಾಡಿದಷ್ಟು ಎಲ್ಲೂ ಮಾಡಿಲ್ಲ. ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಮಾಡಿಲ್ಲ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇದನ್ನ ಸ್ವಾಗತಿಸಿಲ್ಲ. ಕೇಂದ್ರ ಸಂಪುಟದಲ್ಲಿ 45 ಜನ ಹಿಂದುಳಿದ ವರ್ಗದವರಿದ್ದಾರೆ. ಹಿಂದುಳಿದ ವರ್ಗ ಸಿದ್ದರಾಮಯ್ಯ ಸ್ವತ್ತು ಅಂದುಕೊಂಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ
ಕನ್ನಡ ಶಾಲೆಗಾಗಿ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್
ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡುವೆ; ಬಾಕಿ ಜಿಎಸ್ಟಿ ಬಗ್ಗೆಯೂ ಕೇಳುತ್ತೇನೆ: ಸಿಎಂ ಬೊಮ್ಮಾಯಿ
(KS Eshwarappa react to Basavaraj Bommai Cabinet in Bengaluru)
Published On - 12:30 pm, Sat, 31 July 21