ಪೋಷಕರ ರೋಷಾಗ್ನಿ: ನೀವೇನು ಗೆಣಸು ತೆರೆಯೋಕೆ ಇದ್ದೀರಾ..? ಶಿಕ್ಷಣ ಸಚಿವ ಸುರೇಶ್​​ ಕುಮಾರ್​ಗೆ ಪೋಷಕರ ನೇರ ಪ್ರಶ್ನೆ

| Updated By: ಸಾಧು ಶ್ರೀನಾಥ್​

Updated on: Jun 24, 2021 | 4:21 PM

S Suresh Kumar: ಶಿಕ್ಷಣ ಸಚಿವರ ಕಿವಿ ಸತ್ತೋಗಿದ್ಯಾ..? ಸುರೇಶ್ ಕುಮಾರ್ ಜವಾಬ್ದಾರಿಯುತ ನಿರ್ಧಾರ ಕೈಗೊಂಡಿದ್ದರೆ ನಿಮ್ಗೆ ಇಂತಹ ಪರಿಸ್ಥಿತಿ ಬರ್ತಾ ಇರಲಿಲ್ಲ. ಪೋಷಕರ ಸಮಸ್ಯೆ ಬಗೆಹರಿಸಲು ಶಿಕ್ಷಣ ಸಚಿವರು ವಿಫಲರಾಗಿದ್ದಾರೆ ಎಂದು ಶಿಕ್ಷಣ ಸಚಿವರ ವಿರುದ್ಧ ನಾರಾಯಣ ಇ-ಟೆಕ್ನೊ (Narayana e Techno School) ಶಾಲಾ ಮಕ್ಕಳ ಪೋಷಕರು ರೋಷಾಗ್ನಿ ಸುರಿಸಿದರು.

ಪೋಷಕರ ರೋಷಾಗ್ನಿ: ನೀವೇನು ಗೆಣಸು ತೆರೆಯೋಕೆ ಇದ್ದೀರಾ..? ಶಿಕ್ಷಣ ಸಚಿವ ಸುರೇಶ್​​ ಕುಮಾರ್​ಗೆ ಪೋಷಕರ ನೇರ ಪ್ರಶ್ನೆ
ನಾರಾಯಣ ಇ-ಟೆಕ್ನೊ ಶಾಲೆಗೆ ಬೆಂಗಳೂರು ಉತ್ತರ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ರಮೇಶ್ (ಕೆಂಪು ಮಾಸ್ಕ್​ಧಾರಿ ) ಭೇಟಿ
Follow us on

ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್​ ಅವರನ್ನು ನಾರಾಯಣ ಇ-ಟೆಕ್ನೊ ಶಾಲಾ ಮಕ್ಕಳ ಪೋಷಕರು ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಶಿಕ್ಷಣ ಸಚಿವರ ಪಂಚೇಂದ್ರಿಗಳೇ ಸತ್ತು ಹೋಗಿದೆ. ಅವರ ತೆವಲನ್ನ ತೀರಿಸಿಕೊಳ್ಳಲು ಹೀಗೆಲ್ಲ ನಡೆದುಕೊಳ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಗಳ ಗುಲಾಮರಾಗಿದ್ದಾರೆ. ಶುಲ್ಕ ಸಮಸ್ಯೆ ಬಗೆಹರಿಸೊಲ್ಲ ಅಂದ್ರೆ ಸಚಿವ ಸ್ಥಾನದಲ್ಲಿ ಯಾಕಿದ್ದೀರಿ? ಸಚಿವ ಸ್ಥಾನ ನಿಭಾಯಿಸೋಕೆ ಆಗೊಲ್ಲ ಅಂತೇಳಿ‌ ಕೆಳಗಿಳಿಯಿರಿ ಎಂದು ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಮಸ್ಯೆಯನ್ನ ಪೋಷಕರು ಮತ್ತು ಖಾಸಗಿ ಶಾಲೆಗಳೇ ಬಗೆಹರಿಸಿಕೊಳ್ಳಬೇಕು ಅಂತೀರಾ. ನೀವೇನು ಗೆಣಸು ಕೀಳೋಕೆ ಇದ್ದೀರಾ..? ಎಂದು ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ಗೆ ಪೋಷಕರು ನೇರವಾಗಿ ಪ್ರಶ್ನೆ ಮಾಡಿದರು. ನಿಮ್ಮ ಕೈಲಿ ನಿಭಾಯಿಸೋಕೆ ಆಗೊಲ್ಲ ಅಂದ್ರೆ ಶಿಕ್ಷಣ ಇಲಾಖೆಯನ್ನ ಮುಚ್ಚಿಬಿಡಿ. ಸುರೇಶ್ ಕುಮಾರ್ (S Suresh Kumar)ಗೆ ನಾಚಿಕೆ ಆಗ್ಬೇಕು ಎಂದೆಲ್ಲಾ ಪೋಷಕರು ಬೈಗುಳಗಳ ಸುರಿಮಳೆಗೆರೆದರು.

ಶಿಕ್ಷಣ ಸಚಿವರ ಕಿವಿ ಸತ್ತೋಗಿದ್ಯಾ..? ಸುರೇಶ್ ಕುಮಾರ್ ಜವಾಬ್ದಾರಿಯುತ ನಿರ್ಧಾರ ಕೈಗೊಂಡಿದ್ದರೆ ನಿಮ್ಗೆ ಇಂತಹ ಪರಿಸ್ಥಿತಿ ಬರ್ತಾ ಇರಲಿಲ್ಲ. ಪೋಷಕರ ಸಮಸ್ಯೆ ಬಗೆಹರಿಸಲು ಶಿಕ್ಷಣ ಸಚಿವರು ವಿಫಲರಾಗಿದ್ದಾರೆ ಎಂದು ಶಿಕ್ಷಣ ಸಚಿವರ ವಿರುದ್ಧ ನಾರಾಯಣ ಇ-ಟೆಕ್ನೊ (Narayana e Techno School) ಶಾಲಾ ಮಕ್ಕಳ ಪೋಷಕರು ರೋಷಾಗ್ನಿ ಸುರಿಸಿದರು.

ಸಂದರ್ಭ ಏನು? ಸ್ಥಳ ಎಲ್ಲಿ? ಪೋಷಕರ ಸಿಟ್ಟು ಯಾವುದಕ್ಕೆ?

ಕೂಡಲೇ ಆನ್​ಲೈನ್ ಕ್ಲಾಸ್​ ವ್ಯವಸ್ಥೆ ಮಾಡಿಸಬೇಕು. ಪೂರ್ಣ ಶುಲ್ಕ ಕಟ್ಟುವುದಕ್ಕೆ ಒತ್ತಾಯಿಸದಂತೆ ಶಾಲೆಗೆ ಸೂಚನೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಆಗ್ರಹಿಸಿ ಬೆಂಗಳೂರಿನ ಲಗ್ಗೆರೆಯಲ್ಲಿರುವ ನಾರಾಯಣ ಇ-ಟೆಕ್ನೊ ಶಾಲೆ ಎದುರು ಪೋಷಕರು ಇಂದು ಬೆಳಗ್ಗೆ 10.30ರಿಂದ ಕಾಯುತ್ತಾ ಕುಳಿತಿದ್ದಾರೆ.

ಬಿಇಒ ಬಂದು ಸಮಸ್ಯೆ ಬಗೆಹರಿಸುವವರೆಗೆ ಸ್ಥಳದಿಂದ ತೆರಳಲ್ಲ ಎಂದು ನಾರಾಯಣ ಇ-ಟೆಕ್ನೊ ಶಾಲೆ ಮುಂದೆ ಪೋಷಕರು ಆಕ್ರೋಶಭರಿತರಾಗಿದ್ದಾರೆ. ಊಟದ ಸಮಯವೂ ಮೀರಿ ಮಧ್ಯಾಹ್ನವಾದರೂ ಸ್ಥಳಕ್ಕೆ ಅಧಿಕಾರಿಗಳು ಬಂದು, ಸಮಸ್ಯೆ ಇತ್ಯರ್ಥ ಮಾಡದಿರುವುದರಿಂದ ಶಾಲೆಯ ಮುಂಭಾಗವೇ ಕುಳಿತು ಪೋಷಕರು ಊಟ ಮಾಡಿದ್ದಾರೆ. ಹೋಟೆಲ್‌ನಿಂದ ಪಲಾವ್‌ ಪಾರ್ಸೆಲ್​ ತರಿಸಿ ತಿಂದ ಪೋಷಕರು.

ಈ ಮಧ್ಯೆ, ನಾರಾಯಣ ಇ-ಟೆಕ್ನೊ ಶಾಲೆಗೆ ಬೆಂಗಳೂರು ಉತ್ತರ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ರಮೇಶ್ ಒಮ್ಮೆ ಭೇಟಿ ಕೊಟ್ಟು, ಪೋಷಕರ ಜತೆ ಕೆಲಕಾಲ ಚರ್ಚೆ ನಡೆಸಿದ ಶಾಸ್ತ್ರ ಮಾಡಿದರು. ಆಗ ಪೋಷಕರು ಕಣ್ಣೊರೆಸುವ ರೀತಿ ಮಾತುಗಳನ್ನಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಆನ್​ಲೈನ್ ಕ್ಲಾಸ್​ ವ್ಯವಸ್ಥೆ ಮಾಡಿಸಿ. ಜೊತೆಗೆ ಪೂರ್ಣ ಶುಲ್ಕ ಕಟ್ಟುವಂತೆ ಒತ್ತಾಯಿಸದಂತೆ ಶಾಲೆಗೆ ಸೂಚನೆ ನೀಡಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಂತೆ ಬಿಇಒ ರಮೇಶ್ ಸ್ಥಳದಿಂದ ಕಾಲ್ಕಿತ್ತರು.

ಮಧ್ಯಾಹ್ನ 2.30ಕ್ಕೆ ಸಭೆ ಇದೆ, ಊಟ ಮಾಡಿ ಬರುತ್ತೇನೆಂದು ಬಿಇಒ ರಮೇಶ್ ತೆರಳಿದ್ದರು. ಆದರೆ ಇನ್ನೂ ವಾಪಸಾಗಿಲ್ಲ. ಈ ಮಧ್ಯೆ ಬಿಇಒ ಬಂದು ಸಮಸ್ಯೆ ಬಗೆಹರಿಸುವವರೆಗೂ ನಾವು ಶಾನೆಯ ಎದುರಿಗೇ ಕುಳಿತಿರುತ್ತೇವೆ ಎಂದು ನಾರಾಯಣ ಇ-ಟೆಕ್ನೊ ಶಾಲೆ ಎದುರು ಪೋಷಕರು ಪಟ್ಟುಹಿಡಿದು ಕುಳಿತರು. ಆ ವೇಳೆ ಮೇಲಿನಂತೆ ಶಿಕ್ಷಣ ಸಚಿವ ಸುರೇಶ್​​ ಕುಮಾರ್​ ಅವರನ್ನು ತರಾಟೆಗೆ ತೆಗೆದುಕೊಂಡರು.

ನಾರಾಯಣ ಇ-ಟೆಕ್ನೊ ಶಾಲೆಗೆ ಬೆಂಗಳೂರು ಉತ್ತರ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ರಮೇಶ್ (ಕೆಂಪು ಮಾಸ್ಕ್​ಧಾರಿ ) ಭೇಟಿ

(Laggere Narayana e-Techno School students parents criticize education minister s suresh kumar)

Published On - 4:15 pm, Thu, 24 June 21