ಲಾಲ್ ಬಾಗ್ ಪ್ರವೇಶಕ್ಕೂ ತೆರಬೇಕಾ ದುಬಾರಿ ಶುಲ್ಕ.. ಎಂಟ್ರಿ ಶುಲ್ಕ ಸೇರಿ ಪಾರ್ಕಿಂಗ್ ದರ ಹೆಚ್ಚಳಕ್ಕೆ ಪ್ರಸ್ತಾಪ

|

Updated on: Feb 02, 2021 | 11:30 AM

ನಗರದ ಲಾಲ್‌ಬಾಗ್​ನ ಪ್ರವೇಶ ಶುಲ್ಕ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ತೋಟಗಾರಿಕಾ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಸಸ್ಯಕಾಶಿ ಲಾಲ್‌ಬಾಗ್​ಗೆ ಭೇಟಿ ನೀಡುವವರು ಹೆಚ್ಚಿನ ಶುಲ್ಕ ನೀಡಬೇಕಾಗುತ್ತೆ.

ಲಾಲ್ ಬಾಗ್ ಪ್ರವೇಶಕ್ಕೂ ತೆರಬೇಕಾ ದುಬಾರಿ ಶುಲ್ಕ.. ಎಂಟ್ರಿ ಶುಲ್ಕ ಸೇರಿ ಪಾರ್ಕಿಂಗ್ ದರ ಹೆಚ್ಚಳಕ್ಕೆ ಪ್ರಸ್ತಾಪ
ಲಾಲ್‌ಬಾಗ್
Follow us on

ಬೆಂಗಳೂರು: ನಗರದ ಲಾಲ್‌ಬಾಗ್​ನ ಪ್ರವೇಶ ಶುಲ್ಕ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ತೋಟಗಾರಿಕಾ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಸಸ್ಯಕಾಶಿ ಲಾಲ್‌ಬಾಗ್​ಗೆ ಭೇಟಿ ನೀಡುವವರು ಹೆಚ್ಚಿನ ಶುಲ್ಕ ನೀಡಬೇಕಾಗುತ್ತೆ. ಹಿಂದೆ ಪಾವತಿಸುತ್ತಿದ್ದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ಇನ್ನುಮುಂದೆ ಪಾವತಿಸಬೇಕಾಗುತ್ತೆ. ಅಲ್ಲದೆ ಪಾರ್ಕಿಂಗ್ ಫೀಸ್​ನಲ್ಲೂ ಹೆಚ್ಚಳವಾಗಲಿದೆ.

ವಯಸ್ಕರಿಗಿದ್ದ ₹25 ಶುಲ್ಕ 30 ರೂ.ಗೆ ಏರಿಸಲು ಪ್ರಸ್ತಾಪಿಸಿದೆ. ಮಕ್ಕಳಿಗೆ ಈ ಮೊದಲು ಪ್ರವೇಶ ಶುಲ್ಕ ಇರಲಿಲ್ಲ. ಆದ್ರೆ ಈಗ 6-12 ವರ್ಷದ ಮಕ್ಕಳಿಗೆ ₹10 ರೂ ಶುಲ್ಕ ನಿಗದಿಗೆ ಪ್ರಸ್ತಾವನೆ ಸಲ್ಲಿಸಿದೆ. ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸಲೂ ಪ್ರಸ್ತಾಪಿಸಿದ್ದು ದ್ವಿಚಕ್ರ ವಾಹನಗಳ ಪಾರ್ಕಿಂಗ್ ದರ ಗಂಟೆಗೆ 5 ರೂ. ಇತ್ತು. ಆದ್ರೀಗ ಆ ದರವನ್ನ 10 ರೂಪಾಯಿಗೆ ಹೆಚ್ಚಿಸಲು ತಯಾರಿ ನಡೆಸಲಾಗುತ್ತಿದೆ.

ರಜಾ ದಿನಗಳಲ್ಲಿ 3 ಗಂಟೆಗೆ ₹35 ರೂ ದರ ನಿಗದಿ ಮಾಡಲು ಚಿಂತಿಸಲಾಗುತ್ತಿದೆ. ಕಾರಿಗೆ ಈ ಹಿಂದೆ 3 ಗಂಟೆಗೆ 40 ರೂ ಇತ್ತು. ಈಗ 50 ರೂಪಾಯಿ. ಟೆಂಪೋ ಟ್ರಾವೆಲ್ಸ್​ಗೆ 3 ಗಂಟೆಗೆ 70 ರೂ ಇತ್ತು. ಈಗ 80 ರೂ ಏರಿಕೆ. ಬಸ್​ಗೆ 3 ಗಂಟೆಗೆ 110 ರೂಪಾಯಿ ಇತ್ತು, ಈಗ 130 ರೂ. ಏರಿಕೆ ಸೇರಿದಂತೆ ಸಾರ್ವಜನಿಕ ಪ್ರವೇಶಕ್ಕೆ ಜಿಎಸ್​ಟಿ ಒಳಗೊಂಡಂತೆ ಶುಲ್ಕ ಪರಿಷ್ಕರಿಸಿ ನಿಗದಿಪಡಿಸಿಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಲಾಲ್‌ಬಾಗ್‌ನಲ್ಲಿ ಅಕಾಡೆಮಿ ಉದ್ಘಾಟಿಸಿ, MTR ‌ನಲ್ಲಿ ಬೊಂಬಾಟ್ ಬ್ರೇಕ್​ಫಾಸ್ಟ್ ಮಾಡಿದ BSY

Published On - 11:27 am, Tue, 2 February 21