ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಗಡುವು ನೀಡಿದ ಕೋಡಿಹಳ್ಳಿ ಚಂದ್ರಶೇಖರ್
ಸಾರಿಗೆ ನೌಕರರಿಂದ ಸರ್ಕಾರಕ್ಕೆ ಒಂದೂವರೆ ತಿಂಗಳ ಗಡುವು ನೀಡಲಾಗಿದೆ. ಒಂದೂವರೆ ತಿಂಗಳೊಳಗೆ 9 ಬೇಡಿಕೆಯನ್ನು ಈಡೇರಿಸದಿದ್ದರೆ ಮತ್ತೆ ಮುಷ್ಕರ ಕೈಗೊಳ್ಳುತ್ತೇವೆ ಎಂದು ರೈತ ಹೋರಾಟ ಮತ್ತು ಸಾರಿಗೆ ನೌಕರರ ಬೇಡಿಕೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಸಾರಿಗೆ ನೌಕರರಿಂದ ಸರ್ಕಾರಕ್ಕೆ ಒಂದೂವರೆ ತಿಂಗಳ ಗಡುವು ನೀಡಲಾಗಿದೆ. ಒಂದೂವರೆ ತಿಂಗಳೊಳಗೆ 9 ಬೇಡಿಕೆಯನ್ನು ಈಡೇರಿಸದಿದ್ದರೆ ಮತ್ತೆ ಮುಷ್ಕರ ಕೈಗೊಳ್ಳುತ್ತೇವೆ ಎಂದು ರೈತ ಹೋರಾಟ ಮತ್ತು ಸಾರಿಗೆ ನೌಕರರ ಬೇಡಿಕೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.
ಸಾರಿಗೆ ನೌಕರರ 3 ಬೇಡಿಕೆ ಈಡೇರಿಸಿದ್ದೇವೆ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಆದರೆ ಯಾವುದೇ ರೀತಿಯ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ನೀವು 3 ಬೇಡಿಕೆ ಈಡೇರಿಸಿದ್ದೇವೆ ಎಂದು ಹೇಳುವುದಾದರೆ, ಇನ್ನೂ 6 ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಿ. ಇಲ್ಲವಾದರೆ ಬಸ್ ನಿಲ್ಲಿಸಿ ಮುಷ್ಕರ ನಡೆಸುತ್ತೇವೆ ಎಂದು ಸಾರಿಗೆ ನೌಕರರ ಪರ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಸಾರಿಗೆ ಮುಷ್ಕರ ನಡೆಸಿದ್ದೆವು. ಮುಷ್ಕರದಲ್ಲಿ ಡಿ.13 ನೇ ತಾರೀಖು ಸರ್ಕಾರ ಸಾರಿಗೆ ನೌಕರರ ಜೊತೆ ಮಾತುಕತೆ ನಡೆಸಿತ್ತು. ಸಾರಿಗೆ ನೌಕರರು 10 ಬೇಡಿಕೆಗಳನ್ನ ಸರ್ಕಾರದ ಮುಂದೆ ಇರಿಸಿದ್ದರು. ಸರ್ಕಾರ 9 ಬೇಡಿಕೆಗಳನ್ನ ಈಡೇರಿಸುವುದಾಗಿ ಲಿಖಿತ ರೂಪದಲ್ಲಿ ತಿಳಿಸಿತ್ತು. ಆದರೆ ಸ್ವಲ್ಪ ಕಾಲಾವಕಾಶ ಬೇಕೆಂದು ಮನವಿ ಮಾಡಿತ್ತು. ಈ ಹಿನ್ನಲೆಯಲ್ಲಿ ನಾವು ಸರ್ಕಾರಕ್ಕೆ ಮೂರು ತಿಂಗಳ ಗಡುವು ನೀಡಿದ್ದೆವು ಎಂದು ಅವರು ಮಾತನಾಡಿದರು.
ಒಂದುವರೆ ತಿಂಗಳಾದರೂ 9 ರಲ್ಲಿ ಒಂದು ಬೇಡಿಕೆಯನ್ನು ಈಡೇರಿಸುವ ಕುರಿತಾಗಿಯೂ ಸರ್ಕಾರ ಪ್ರಕಟಣೆ ಮಾಡಿಲ್ಲ. ಸರ್ಕಾರ 9 ಬೇಡಿಕೆಗಳನ್ನ ಈಡೇರುವ ಘೋಷಣೆಯನ್ನ ಸರ್ಕಾರ ಮಾಡಬೇಕು. ಸರ್ಕಾರ ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡುತ್ತಿದೆಯೇ ಎಂಬುದನ್ನು ಸಾರ್ವಜನಿಕರು ಗಮನಿಸಬೇಕು. ಅರ್ಧ ಸಮಯ ಈಗಾಗಲೇ ಮುಗಿದು ಹೋಗಿದೆ. ಇನ್ನು, ಒಂದುವರೆ ತಿಂಗಳ ಒಳಗೆ ಎಲ್ಲ ಬೇಡಿಕೆಗಳನ್ನ ಈಡೇರಿಸಬೇಕು.
ಸಾರಿಗೆ ನಿಗಮಕ್ಕೆ 4 ಸಾವಿರ ಕೋಟಿ ರೂ. ನಷ್ಟವಾಗಿದೆ: ನೌಕರರ ಪ್ರತಿಭಟನೆ ನೆನೆದು ಲಕ್ಷ್ಮಣ ಸವದಿ ಬೇಸರ
Published On - 2:57 pm, Tue, 2 February 21