ಜ್ಯೋತಿಷಿ ಆನಂದ್ ಗುರೂಜಿಗೆ ಸ್ನೇಹಿತರಿಂದಲೇ ಬ್ಲ್ಯಾಕ್‌ಮೇಲ್, ರೂ. 50 ಲಕ್ಷಕ್ಕೆ ಡಿಮ್ಯಾಂಡ್

ಖ್ಯಾತ ಜ್ಯೋತಿಷಿ ಆನಂದ್ ಗುರೂಜಿಗೆ ಬ್ಲ್ಯಾಕ್‌ಮೇಲ್ ಮಾಡದ ಆರೋಪ ಕೇಳಿ ಬಂದಿದ್ದು ಬ್ಲ್ಯಾಕ್‌ಮೇಲ್ ಮಾಡಿದ್ದ ಸ್ನೇಹಿತರ ವಿರುದ್ಧ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.

ಜ್ಯೋತಿಷಿ ಆನಂದ್ ಗುರೂಜಿಗೆ ಸ್ನೇಹಿತರಿಂದಲೇ ಬ್ಲ್ಯಾಕ್‌ಮೇಲ್, ರೂ. 50 ಲಕ್ಷಕ್ಕೆ ಡಿಮ್ಯಾಂಡ್
ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ
Follow us
ಆಯೇಷಾ ಬಾನು
|

Updated on:Feb 02, 2021 | 1:39 PM

ಬೆಂಗಳೂರು: ಖ್ಯಾತ ಜ್ಯೋತಿಷಿ ಆನಂದ್ ಗುರೂಜಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಕೇಳಿ ಬಂದಿದ್ದು ಬ್ಲ್ಯಾಕ್‌ಮೇಲ್ ಮಾಡಿದ್ದ ಸ್ನೇಹಿತರ ವಿರುದ್ಧ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ. ಸ್ನೇಹಿತ ವಿರುದ್ಧ ಆನಂದ್ ಗುರೂಜಿ ಆಪ್ತ ಗಿರಿನಗರ ಠಾಣೆಗೆ ದೂರು ನೀಡಿದ್ದು ಆರೋಪಿಗಳು ಸದ್ಯ ಜಾಮೀನಿನ ಮೇಲೆ ಹೊರಬಂದಿದ್ದಾರೆ.

ವೈಯಕ್ತಿಕ ವಿಚಾರಗಳನ್ನ ಇಟ್ಟುಕೊಂಡು 50 ಲಕ್ಷಕ್ಕೆ ಡಿಮ್ಯಾಂಡ್ ಆನಂದ್ ಗುರೂಜಿಗೆ ಸ್ನೇಹಿತರೇ ಬ್ಲಾಕ್ ಮೇಲ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆರೋಪಿಗಳು ವೈಯಕ್ತಿಕ ವಿಚಾರಗಳನ್ನ ಇಟ್ಟುಕೊಂಡು 50 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರಂತೆ. ಜೊತೆಗೆ ಆನಂದ್ ಗುರೂಜಿ ಹಾಗೂ ಅವರ ಸ್ನೇಹಿತ ಸುಧೀಂದ್ರ ಎಂಬುವವರಿಗೆ ಕೊಲೆ ಬೆದರಿಕೆ ಹಾಕಿದ್ದರಂತೆ. ಈ ಹಿನ್ನೆಲೆಯಲ್ಲಿ ಜನವರಿ 28ರಂದು ಗುರೂಜಿ ಆಪ್ತ ನಾಗರಾಜ್ ಬಿ.ಆರ್ ಎಂಬುವವರು ಕೃಷ್ಣಮೂರ್ತಿ, ವೆಂಕಟೇಶ್, ವೇಲು ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನಲ್ಲಿ 50 ಲಕ್ಷ ಹಣ ಕೊಟ್ಟರೆ ಸುಮ್ಮನಾಗುತ್ತೇವೆ, ಇಲ್ಲದೆ ಹೋದ್ರೆ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ವೈರಲ್ ಮಾಡುವುದಾಗಿ ಆನಂದ್ ಗುರೂಜಿಗೆ ಸ್ನೇಹಿತರು ಎಚ್ಚರಿಕೆ ನೀಡಿದ್ದರು. ಜೊತೆಗೆ ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಉಲ್ಲೇಖಿಸಲಾಗಿದೆ.

ತಮ್ಮ ವಿರುದ್ಧ ದೂರು ನೀಡಿದ್ದರಿಂದ ಸಿಟ್ಟಿಗೆದ್ದ ಆರೋಪಿಗಳು ವಾಟ್ಸ್ ಗ್ರೂಪ್​ನಲ್ಲಿ ಗುರೂಜಿ ಹಾಗೂ ಸುಧೀಂದ್ರ ಕುರಿತು ಮಾನಹಾನಿ ಸಂದೇಶ ರವಾನಿಸಿ ಈಗಲಾದ್ರೂ ಕನಿಷ್ಠ 26ಲಕ್ಷ ಹಣ ಕೊಡಿ, ಇಲ್ಲವಾದ್ರೆ ಬೇರೆ ವೈಯಕ್ತಿಕ ವಿಷಯಗಳನ್ನ ಹಂತ ಹಂತವಾಗಿ ವೈರಲ್ ಮಾಡುವುದಾಗಿ ಹೇಳಿದ್ದರೂ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ದೂರು ದಾಖಲಾದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈಗ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ದಿನಭವಿಷ್ಯ : 01-02-2021 ಖ್ಯಾತ ಜ್ಯೋತಿಷಿ ಡಾ ಬಸವರಾಜ ಗುರೂಜಿ ದ್ವಾದಶ ರಾಶಿಗಳ ಫಲಾಫಲ ಮಾಹಿತಿ

Published On - 1:34 pm, Tue, 2 February 21

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM