ನರ್ಸರಿ ಮಕ್ಕಳಿಗೆ ರೈಮ್ಸ್ ಹೇಳಿಕೊಡುವ ಮೂಲಕ ಭವ್ಯ ಕಟ್ಟಡ ಉದ್ಘಾಟಿಸಿದ ಶಿವಾಚಾರ್ಯ ಮಹಾಸ್ವಾಮಿಗಳು
ವಿದ್ಯಾಸಂಸ್ಥೆಯ ಅಧ್ಯಕ್ಷರೂ ಆಗಿರುವ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಇಲ್ಲಿ ವಿದ್ಯಾಸಂಸ್ಥೆಗೆ ಸಂಬಂಧಿಸಿದ ಭವ್ಯ ಕಟ್ಟಡದಲ್ಲಿ ಶಾಲೆಗೆ ಚಾಲನೆ ನೀಡಿದ್ರು. ನೂತನ ಕಟ್ಟಡದಲ್ಲಿ ನರ್ಸರಿ ತರಗತಿಯ ಮಕ್ಕಳಿಗೆ ರೈಮ್ಸ್ ಹೇಳಿಕೊಡುವುದರ ಮೂಲಕ ಭವ್ಯ ಕಟ್ಟಡವನ್ನು ಉದ್ಘಾಟಿಸಿದ್ದು ವಿನೂತನ ಮತ್ತು ವಿಭಿನ್ನವಾಗಿತ್ತು.
ಚಿತ್ರದುರ್ಗ: ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಿನೂತನವಾಗಿ ವಿದ್ಯಾಸಂಸ್ಥೆಯನ್ನು ಉದ್ಘಾಟಿಸಿದ್ದಾರೆ. ನೂತನ ಕಟ್ಟಡದಲ್ಲಿ ನರ್ಸರಿ ತರಗತಿಯ ಮಕ್ಕಳಿಗೆ ರೈಮ್ಸ್ ಹೇಳಿಕೊಡುವುದರ ಮೂಲಕ ಶ್ರೀಗಳು ವಿನೂತನವಾಗಿ ಮತ್ತು ವಿಭಿನ್ನವಾಗಿ ಭವ್ಯ ಕಟ್ಟಡವನ್ನು ಉದ್ಘಾಟಿಸಿದ್ದಾರೆ.
ಅದೊಂದು ಅಪೂರ್ವ ಕ್ಷಣ. ನೂತನ ಬೃಹತ್ ಮತ್ತು ಭವ್ಯ ಕಟ್ಟಡದ ಉದ್ಘಾಟನೆ. ಅಲ್ಲಿ ಶಾಮಿಯಾನ, ವೇದಿಕೆ, ಅತಿಥಿ ಗಣ್ಯರ ದಂಡು, ದೀಪ, ಓಲಗ, ಮೈಕಾಸುರ ಯಾವುದು ಇರಲಿಲ್ಲ. ಆದರೆ ಉದ್ಘಾಟನೆ ಕಾರ್ಯಕ್ರಮ ನಡೆದ ರೀತಿ ಮಾತ್ರ ತುಂಬಾ ವಿಭಿನ್ನ ಮತ್ತು ವಿನೂತನವಾಗಿತ್ತು. 150ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು ನಡೆಸುತ್ತಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕೇಂದ್ರ ಸಿರಿಗೆರೆ.
ವಿದ್ಯಾಸಂಸ್ಥೆಯ ಅಧ್ಯಕ್ಷರೂ ಆಗಿರುವ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಇಲ್ಲಿ ವಿದ್ಯಾಸಂಸ್ಥೆಗೆ ಸಂಬಂಧಿಸಿದ ಭವ್ಯ ಕಟ್ಟಡದಲ್ಲಿ ಶಾಲೆಗೆ ಚಾಲನೆ ನೀಡಿದ್ರು. ನೂತನ ಕಟ್ಟಡದಲ್ಲಿ ನರ್ಸರಿ ತರಗತಿಯ ಮಕ್ಕಳಿಗೆ ರೈಮ್ಸ್ ಹೇಳಿಕೊಡುವುದರ ಮೂಲಕ ಭವ್ಯ ಕಟ್ಟಡವನ್ನು ಉದ್ಘಾಟಿಸಿದ್ದು ವಿನೂತನ ಮತ್ತು ವಿಭಿನ್ನವಾಗಿತ್ತು.
ರಾಜ್ಯ ಸರ್ಕಾರದ ಸಂಯಮ ಪ್ರಶಸ್ತಿ ಪಡೆದ ಇಳಕಲ್ಲ ಶ್ರೀ ಗುರುಮಹಾಂತ ಸ್ವಾಮಿಗಳಿಗೆ ಸನ್ಮಾನ
Published On - 12:40 pm, Tue, 2 February 21