AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3-4 ತಿಂಗಳಲ್ಲಿ BDA ಸುಧಾರಣೆ ಮಾಡಿಯೇ ತೀರುತ್ತೇನೆ -ಅಸೆಂಬ್ಲಿಯಲ್ಲಿ ಗುಡುಗಿದ ಮುಖ್ಯಮಂತ್ರಿ ಯಡಿಯೂರಪ್ಪ

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆ ವೇಳೆ ಬಿಡಿಎನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸ್ವಪಕ್ಷೀಯ ಶಾಸಕ ಆರಗ ಜ್ಞಾನೇಂದ್ರ ಪ್ರಸ್ತಾಪಿಸಿದ್ರು. ಈ ವೇಳೆ ಉತ್ತರ ನೀಡಿದ ಸಿಎಂ ಯಡಿಯೂರಪ್ಪ ಬಿಡಿಎನಲ್ಲಿ ನಡೆದಿರುವ ಅಕ್ರಮಗಳಿಗೆ ಬ್ರೇಕ್ ಹಾಕಲು ಸಿದ್ಧ...

3-4 ತಿಂಗಳಲ್ಲಿ BDA ಸುಧಾರಣೆ ಮಾಡಿಯೇ ತೀರುತ್ತೇನೆ -ಅಸೆಂಬ್ಲಿಯಲ್ಲಿ ಗುಡುಗಿದ ಮುಖ್ಯಮಂತ್ರಿ ಯಡಿಯೂರಪ್ಪ
ಸಿಎಂ ಬಿ.ಎಸ್.ಯಡಿಯೂರಪ್ಪ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Feb 02, 2021 | 3:11 PM

ಬೆಂಗಳೂರು: ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆ ವೇಳೆ ಬಿಡಿಎ ನಲ್ಲಿ ನಡೆದಿರುವ ಅಕ್ರಮಗಳಿಗೆ ಬ್ರೇಕ್ ಹಾಕಲು ಸಿದ್ಧ, ಮೂರ್ನಾಲ್ಕು ತಿಂಗಳಲ್ಲಿ ಬಿಡಿಎ ಸುಧಾರಣೆ ಮಾಡಿಯೇ ತೀರುತ್ತೇನೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆ ವೇಳೆ BDA ಬಿಡಿಎನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸ್ವಪಕ್ಷೀಯ ಶಾಸಕ ಆರಗ ಜ್ಞಾನೇಂದ್ರ ಪ್ರಸ್ತಾಪಿಸಿದ್ರು. ಬಿಡಿಎನಲ್ಲಿ ಅಧಿಕಾರಿಗಳ ತಪ್ಪಿನಿಂದ ಅಕ್ರಮ ನಡೆದಿದೆ ಎಂದು ಆರೋಪಿಸಿದ್ರು ಈ ವೇಳೆ ಉತ್ತರ ನೀಡಿದ ಸಿಎಂ ಯಡಿಯೂರಪ್ಪ ಬಿಡಿಎನಲ್ಲಿ ನಡೆದಿರುವ ಅಕ್ರಮಗಳಿಗೆ ಬ್ರೇಕ್ ಹಾಕಲು ಸಿದ್ಧ. 3-4 ತಿಂಗಳಲ್ಲಿ ಬಿಡಿಎ ಸುಧಾರಣೆ ಮಾಡಿಯೇ ತೀರುತ್ತೇನೆ ಎಂದು ಘೋಷಿಸಿದ್ರು.

ಮುಂದಿನ ಮೂರು ತಿಂಗಳಲ್ಲಿ ಬಿಡಿಎ ನಲ್ಲಿ ಸಮಗ್ರ ಬದಲಾವಣೆ ಮಾಡ್ತೇನೆ ನನಗೆ ಕೊಟ್ಟ ಜಿ ಕೆಟಗರಿ ಸೈಟ್​ನಲ್ಲಿ ಮನೆ ಕಟ್ಟಲು ಆಗಿಲ್ಲ. ನನ್ನ ಸೈಟ್​ಗೆ ಯಾರೋ ನಕಲಿ ದಾಖಲೆ ನೀಡಿ ವ್ಯಾಜ್ಯ ಶುರು ಮಾಡಿದ್ದಾರೆ. ಹೀಗಾಗಿ ನನಗೆ ಇನ್ನೂ ಸೈಟ್ ಸಿಕ್ಕಿಲ್ಲ ಅಂತ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಹೆಚ್​.ಕೆ.ಪಾಟೀಲ್, ಸುಮ್ಮನೆ ಯಾಕೆ ನೀವು ಆರೋಪ ಮಾಡುತ್ತೀರಿ? ನಿಮ್ಮ ಭಾಷಣ ಕೇವಲ ಭಾಷಣ ಆಗಬಾರದು. ನಿಮ್ಮ ಮಾತು ಕೇಳಿ ಸಿಎಂ ಕ್ರಮ ತಗೋಬೇಕಲ್ಲವೇ? ಎಂದು ಸದನದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಎಚ್.ಕೆ. ಪಾಟೀಲ್ ಕೆಣಕಿದ್ರು.

ಆಗ ಉತ್ತರಿಸಿದ ಬಿಎಸ್​ವೈ ನಾನು ಬಿಡಿಎ ನಲ್ಲಿ ಸುಧಾರಣೆ ತರಲು ಈಗಾಗಲೇ ಪ್ರಯತ್ನ ಮಾಡ್ತಾ ಇದ್ದೇನೆ. ಸೈಟ್​ಗಳಿಗೆ ದಾಖಲೆ ಇಲ್ಲದಂತಹ ಪರಿಸ್ಥಿತಿ ಇರೋದು ಗೊತ್ತಿದೆ. ಅಧಿಕಾರಿಗಳ ಸಾಮೂಹಿಕ ವರ್ಗಾವಣೆಗೆ ಸಹ ಕ್ರಮ ಕೈಗೊಳ್ಳಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಈಗಾಗಲೇ ತೀರ್ಮಾನ ಮಾಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಬಿಡಿಎ ನಲ್ಲಿ ಸಮಗ್ರ ಬದಲಾವಣೆ ಮಾಡ್ತೇನೆ. ನೀವೇ ನೋಡ್ತಾ ಇರಿ ಪಾಟೀಲರೇ, ಸಮಗ್ರ ಬದಲಾವಣೆ ತರುತ್ತೇನೆ. ಅಕ್ರಮಗಳಿಗೆ ಕಡಿವಾಣ ಹಾಕ್ತೇನೆ ಎಂದು ಘೋಷಿಸಿದ್ರು.

ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಗಡುವು ನೀಡಿದ ಕೋಡಿಹಳ್ಳಿ ಚಂದ್ರಶೇಖರ್