Bengaluru Traffic advisory: ಲಾಲ್​ಬಾಗ್ ಫಲಪುಷ್ಪ ಪ್ರದರ್ಶನ; ವಾಹನ ನಿಲುಗಡೆ, ಪಾರ್ಕಿಂಗ್ ನಿಷೇಧಿತ ಸ್ಥಳಗಳ ಮಾಹಿತಿ ಇಲ್ಲಿದೆ

|

Updated on: Aug 03, 2023 | 4:19 PM

Lalbagh Flower Show 2023; ಫಲಪುಷ್ಪ ಪ್ರದರ್ಶನಕ್ಕೆ ಬರುವವರಿಗೆ ಸಂಚಾರ ಪೊಲೀಸರು ನಿಗದಿಪಡಿಸಿರುವ ಪಾರ್ಕಿಂಗ್ ಸ್ಥಳಗಳ ಹಾಗೂ ಪಾರ್ಕಿಂಗ್ ನಿಷೇಧಿತ ಪ್ರದೇಶಗಳ ಮಾಹಿತಿ ಇಲ್ಲಿದೆ.

Bengaluru Traffic advisory: ಲಾಲ್​ಬಾಗ್ ಫಲಪುಷ್ಪ ಪ್ರದರ್ಶನ; ವಾಹನ ನಿಲುಗಡೆ, ಪಾರ್ಕಿಂಗ್ ನಿಷೇಧಿತ ಸ್ಥಳಗಳ ಮಾಹಿತಿ ಇಲ್ಲಿದೆ
ಸಂಗ್ರಹ ಚಿತ್ರ
Follow us on

ಬೆಂಗಳೂರು: ತೋಟಗಾರಿಕೆ ಇಲಾಖೆ ವತಿಯಿಂದ ಲಾಲ್‌ಬಾಗ್‌ನಲ್ಲಿ (Lalbagh) ಆಯೋಜಿಸಿರುವ ಸ್ವಾತಂತ್ರ್ಯೋತ್ಸವ ಹಾಗೂ ಫಲಪುಷ್ಪ ಪ್ರದರ್ಶನ(Flower Show) ಪೂರ್ವಭಾವಿಯಾಗಿ ನಗರ ಸಂಚಾರ ಪೊಲೀಸರು (Bangalore Traffic Police) ವಾಹನ ನಿಲುಗಡೆ ಮತ್ತು ಪಾರ್ಕಿಂಗ್ ನಿಷೇಧಿತ ಪ್ರದೇಶಗಳ ಕುರಿತು ಮಾಹಿತಿ ನೀಡಿದ್ದಾರೆ. ಫಲಪುಷ್ಪ ಪ್ರದರ್ಶನಕ್ಕೆ ಲಕ್ಷಾಂತರ ಜನರು ಭೇಟಿ ನೀಡುವ ನಿರೀಕ್ಷೆಯಿರುವುದರಿಂದ ಲಾಲ್ ಬಾಗ್ ಸುತ್ತಮುತ್ತ ದಟ್ಟಣೆ ತಡೆಯಲು ನಿರ್ದಿಷ್ಟ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಲಾಗಿದೆ.

ಸುಮಾರು 8 ರಿಂದ 10 ಲಕ್ಷ ಪ್ರವಾಸಿಗರು, ಗಣ್ಯರು, ವಿದೇಶಿ ಪ್ರೇಕ್ಷಕರು ಮತ್ತು ಶಾಲಾ ಮಕ್ಕಳು ಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಸುಗಮ ಸಂಚಾರಕ್ಕಾಗಿ ಲಾಲ್ ಬಾಗ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.


ಫಲಪುಷ್ಪ ಪ್ರದರ್ಶನಕ್ಕೆ ಬರುವವರಿಗೆ ಸಂಚಾರ ಪೊಲೀಸರು ನಿಗದಿಪಡಿಸಿರುವ ಪಾರ್ಕಿಂಗ್ ಸ್ಥಳಗಳ ವಿವರ ಇಲ್ಲಿದೆ;

  • ಡಾ ಮರಿಗೌಡ ರಸ್ತೆ, ಆಲ್‌ ಅಮೀನ್‌ ಕಾಲೇಜ್‌ ಅವರಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
  • ಕೆ.ಹೆಚ್‌.ರಸ್ತೆ, ಶಾಂತಿನಗರ ಬಿ.ಎ೦.ಟಿಿಸಿ. ಬಸ್‌ ನಿಲ್ದಾಣದ ಬಳಿ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
  • ಡಾ ಮರಿಗೌಡ ರಸ್ತೆ- ಹಾಪ್‌ ಕಾಮ್ಸ್‌ ನಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
  • ಜೆ.ಸಿ. ರಸ್ತೆ ಕಾರ್ಪೋರೇಷನ್‌ ಪಾರ್ಕಿಂಗ್‌ ಸ್ಥಳದಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.

ಪಾರ್ಕಿಂಗ್ ನಿಷೇಧಿತ ಸ್ಥಳಗಳು

  • ಡಾ: ಮರಿಗೌಡ ರಸ್ತೆ, ಲಾಲ್‌ಬಾಗ್‌ ಮುಖ್ಯ ದ್ವಾರದಿಂದ ನಿಮ್ಹಾನ್ಸ್‌ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ
  • ಕೆಹೆಚ್‌.ರಸ್ತೆ, ಕೆ.ಹೆಚ್‌.ವೃತ್ತದಿ೦ದ ಶಾಂತಿನಗರ ಜಂಕ್ಷನ್‌ ವದೆಗೆ ರಸ್ತೆಯ ಎರಡೂ ಬದಿಗಳಲ್ಲಿ
  • ಲಾಲ್‌ಬಾಗ್‌ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ಭಾಗ್‌ ಮುಖ್ಯದ್ದಾರದ ವರೆಗೆ
  • ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್‌ ಜಂಕ್ಷನ್‌ ನಿಂದ ವಿಲ್ಸನ್‌ ಗಾರ್ಡನ್‌ 12ನೇ ಕ್ರಾಸ್‌ ವರೆಗೆ
  • ಬಿ.ಎಂ.ಟಿ.ಸಿ ರಸ್ತೆಯಲ್ಲಿ, ರಸ್ತೆಯ ಎರಡೂ ಬದಿಗಳಲ್ಲಿ.
  • ಕೃಂಬಿಗಲ್‌ ರಸ್ತೆಯ ಎರಡೂ ಕಡೆಗಳಲ್ಲಿ.
  • ಲಾಲ್‌ಬಾಗ್‌ ವೆಸ್ಟ್‌ಗೇಟ್‌ನಿಂದ ಆರ್‌.ವಿ. ಟೀಚರ್ಸ್‌ ಕಾಲೇಜ್‌ವರೆಗೆ.
  • ಆರ್‌ಎ ಟೀಚರ್ಟ್‌ ಕಾಲೇಜ್‌ನಿಂದ ಅಶೋಕ ಪಿಲ್ಲರ್‌ ವರೆಗೆ
  • ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್‌ ವರೆಗೆ.

ಇದನ್ನೂ ಓದಿ: Lalbagh Botanical Garden: ಲಾಲ್​ಬಾಗ್ ವಿಶ್ವ ಪ್ರಸಿದ್ದ ಉದ್ಯಾನವನವಾಗಿದ್ದು ಹೇಗೆ? ಲಾಲ್​ಬಾಗ್​ನಲ್ಲಿ ಪ್ಲವರ್​ ಶೋ ಆರಂಭವಾಗಿದ್ದು ಯಾವಾಗ?

ಟ್ರಾಫಿಕ್ ಜಾಮ್ ತಡೆಗಟ್ಟಲು ಸಾರ್ವಜನಿಕ ಸಾರಿಗೆಯನ್ನು ಬಳಸಲು ಸಂಚಾರ ಮತ್ತು ತೋಟಗಾರಿಕೆ ಇಲಾಖೆ ಪ್ರವಾಸಿಗರನ್ನು ವಿನಂತಿಸಿದೆ. ಶುಕ್ರವಾರದಿಂದ ಫಲಪುಷ್ಪ ಪ್ರದರ್ಶನ ಆರಂಭವಾಗಲಿದ್ದು, ಆಗಸ್ಟ್ 15ರವರೆಗೆ ನಡೆಯಲಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ