ಬೆಂಗಳೂರು, ಸೆಪ್ಟೆಂಬರ್ 30: ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿರುವ ಲೈಫ್ಸ್ಟೈಲ್ ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ಬೆಂಗಳೂರಿನಲ್ಲಿ ಮತ್ತೆ ಆಯೋಜನೆ ಆಗುತ್ತಿದೆ. ಟಿವಿ9 ಕನ್ನಡ ವತಿಯಿಂದ ಆಯೋಜಿತವಾಗುತ್ತಿರುವ ಈ ಲೈಫ್ಸ್ಟೈಲ್ ಎಕ್ಸ್ಪೋದಲ್ಲಿ ಆಕರ್ಷಕ ಕೊಡುಗೆಗಳು, ರಿಯಾಯಿತಿಗಳನ್ನು ನಿರೀಕ್ಷಿಸಬಹುದು. ಅರಮನೆ ಮೈದಾನದದಲ್ಲಿ 2024ರ ಅಕ್ಟೋಬರ್ 4ರಿಂದ 6ರವರೆಗೆ ಈ ಲೈಫ್ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಮೇಳ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಆಟೊಮೊಬೈಲ್, ಪೀಠೋಪಕರಣ, ಎಲೆಕ್ಟ್ರಾನಿಕ್ಸ್, ರೀಟೇಲ್ ಬ್ರ್ಯಾಂಡ್ ಮತ್ತಿತರ ಪ್ರಮುಖ ವಿಭಾಗಗಳಿಂದ ಸಾಕಷ್ಟು ಉತ್ಪನ್ನಗಳನ್ನು ಪ್ರದರ್ಶನಕ್ಕಿಡಲಾಗುತ್ತಿದೆ. ಕಳೆದ ವರ್ಷ 2023ರ ಅಕ್ಟೋಬರ್ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಲೈಫ್ಸ್ಟೈಲ್ ಎಕ್ಸ್ಪೋಗೆ ಭರ್ಜರಿ ಸ್ಪಂದನೆ ಸಿಕ್ಕಿತ್ತು. 25,000 ಜನರು ಈ ಮೇಳಕ್ಕೆ ಭೇಟಿ ಕೊಟ್ಟಿದ್ದರು.
ಆಂತೆಯೇ ಈ ಬಾರಿಯ ಎಕ್ಸ್ಪೋ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಪ್ರಮುಖ ಬ್ರ್ಯಾಂಡ್ಗಳು ಇಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ. ಮಾರಾಟಗಾರರು ಮತ್ತು ಖರೀದಿದಾರರಿಗೆ ಅಪೂರ್ವವಾದ ವೇದಿಕೆ ಮತ್ತು ಅವಕಾಶ ಇದಾಗಿದೆ. ಹಬ್ಬದ ಕಾಲವಾದ್ದರಿಂದ ಗ್ರಾಹಕರಿಗೆ ಹೇಳಿಮಾಡಿಸಿದ ಅವಕಾಶ ಇದಾಗಿದೆ.
ಟಿವಿ9 ಕನ್ನಡ ಆಯೋಜಿಸಿರುವ ಈ ಮಹಾ ಮೇಳದಲ್ಲಿ ಬೇರೆ ಬೇರೆ ಬಜೆಟ್, ಅಭಿರುಚಿಗಳಿಗೆ ತಕ್ಕಂತೆ ವೈವಿಧ್ಯಮಯವಾದ ಉತ್ಪನ್ನ ಆಯ್ಕೆಗಳನ್ನು ಕಾಣಬಹುದು. ದುಬಾರಿಯಲ್ಲದ ಆಯ್ಕೆಗಳು ಸಿಗುತ್ತವೆ. ಲಕ್ಸುರಿ ವಸ್ತುಗಳೂ ಲಭ್ಯ ಇವೆ.
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಲೈಫ್ಸ್ಟೈಲ್ ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ನಡೆಯಲಿರುವ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಾಕಷ್ಟು ಪಾರ್ಕಿಂಗ್ ಸ್ಥಳಾವಕಾಶ ಇದೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ಕಳೆದ ವರ್ಷದ ನಡೆದ ಎಕ್ಸ್ಪೋ ನಿರೀಕ್ಷೆಮೀರಿದ ಯಶಸ್ಸು ಗಳಿಸಿತ್ತು. ಸ್ಟಾಲ್ ಇಟ್ಟಿದ್ದ ಬ್ರ್ಯಾಂಡ್ಗಳು, ಮತ್ತು ಗ್ರಾಹಕರು ಎಲ್ಲರೂ ತೃಪ್ತರಾಗಿದ್ದರು. ಈ ಬಾರಿಯೂ ಲೈಫ್ಸ್ಟೈಲ್ ಎಕ್ಸ್ಪೋ ಅಷ್ಟೇ ಉತ್ಕೃಷ್ಟವಾಗಿ ಆಯೋಜನೆಯಾಗುತ್ತಿದೆ. ಬೆಂಗಳೂರಿಗರೇ, ತಪ್ಪದೇ ಈ ಅವಕಾಶದಿಂದ ವಂಚಿತರಾಗಬೇಡಿ.
ಲೈಫ್ಸ್ಟೈಲ್ ಆಟೊಮೊಬೈಲ್ ಫರ್ನಿಚರ್ ಎಕ್ಸ್ಪೋ 2024
ಕಾರ್ಯಕ್ರಮ ದಿನಾಂಕ: ಅಕ್ಟೋಬರ್ 4, 5 ಮತ್ತು 6
ಕಾರ್ಯಕ್ರಮ ಸ್ಥಳ: ತ್ರಿಪುರವಾಸಿನಿ, ಪ್ಯಾಲೇಸ್ ಗ್ರೌಂಡ್, ಬೆಂಗಳೂರು.