AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯರಿಗಿಂತ ನಾಯಿಗಳ ಬರ್ತ್‌ಡೇಗೇ ಭಾರಿ ಡಿಮ್ಯಾಂಡ್: ಬೊಮ್ಮನಹಳ್ಳಿಯಿಂದ ಮುಂಬೈವರೆಗೆ ವೈಭವದ ‘ಪೆಟ್ ಪಾರ್ಟಿ’ ಕ್ರೇಜ್

ಭಾರತದಲ್ಲಿ ಸಾಕುಪ್ರಾಣಿಗಳ ಮೇಲಿನ ಪ್ರೀತಿ ಹೆಚ್ಚುತ್ತಿದ್ದು, ಪೆಟ್ ಬರ್ತ್‌ಡೇ ಆಚರಣೆಗಳು ಸರಳತೆಯಿಂದ ಐಷಾರಾಮಿ ಪಾರ್ಟಿಗಳಾಗಿ ರೂಪುಗೊಂಡಿವೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ, ಮಾಲೀಕರು ನಾಯಿಗಳ ಹುಟ್ಟುಹಬ್ಬ, ಸೀಮಂತ, ಮತ್ತು ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಪೆಟ್ ಕೆಫೆಗಳು ಮತ್ತು ವೃತ್ತಿಪರ ಆಯೋಜಕರು ಈ ಹೊಸ ಟ್ರೆಂಡ್‌ಗೆ ಸಹಕಾರಿಯಾಗಿದ್ದಾರೆ, ಪೆಟ್‌ಗಳಿಗೆ ಮನುಷ್ಯರಿಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.

ಮನುಷ್ಯರಿಗಿಂತ ನಾಯಿಗಳ ಬರ್ತ್‌ಡೇಗೇ ಭಾರಿ ಡಿಮ್ಯಾಂಡ್: ಬೊಮ್ಮನಹಳ್ಳಿಯಿಂದ ಮುಂಬೈವರೆಗೆ ವೈಭವದ 'ಪೆಟ್ ಪಾರ್ಟಿ' ಕ್ರೇಜ್
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jul 31, 2026 | 12:31 PM

Share

ಬೆಂಗಳೂರು, ಜು.31 : ಸಾಕುಪ್ರಾಣಿಗಳನ್ನು (Pets) ಕುಟುಂಬದ ಪ್ರಮುಖ ಸದಸ್ಯರಂತೆಯೇ ನೋಡಿಕೊಳ್ಳುವ ಧೋರಣೆ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಭಾರಿ ವೇಗವಾಗಿ ಹೆಚ್ಚುತ್ತಿದೆ. ಮೊದಲೆಲ್ಲಾ ಕೇವಲ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸುತ್ತಿದ್ದ ‘ಪೆಟ್ ಬರ್ತ್‌ಡೇ’ಗಳು (Pet Birthdays) ಈಗ ಅಲ್ಟ್ರಾ-ಪ್ರೀಮಿಯಂ ಹಾಗೂ ವೈಭವೋಪೇತ ಪಾರ್ಟಿಗಳಾಗಿ ರೂಪಾಂತರಗೊಂಡಿವೆ ಎಂದು ಪೆಟ್ ಕೆಫೆ ಹಾಗೂ ರೆಸಾರ್ಟ್ ಮಾಲೀಕರು ತಿಳಿಸಿದ್ದಾರೆ.

ಸಾಕು ನಾಯಿಗಳ ಪ್ರೀತಿಗಾಗಿ ಮಾಲೀಕರು ಕೇವಲ ಹುಟ್ಟುಹಬ್ಬ ಮಾತ್ರವಲ್ಲದೆ, ನಾಯಿಗಳ ಸೀಮಂತ ಹಾಗೂ ಬೀದಿ ನಾಯಿಗಳಿಗೆ ಆಹಾರ ನೀಡಿ ಹುಟ್ಟುಹಬ್ಬ ಆಚರಿಸುವ ಟ್ರೆಂಡ್ ಕೂಡ ಸೃಷ್ಟಿಸಿದ್ದಾರೆ. ‘ಸ್ನೂಪಿ ಪೆಟ್ ಕೆಫೆ’ಯ ಸಂಸ್ಥಾಪಕ ಲಾರೆನ್ಸ್ ಅವರ ಪ್ರಕಾರ, ಅವರ ಕೆಫೆಯಲ್ಲಿ ಪ್ರತಿ ವಾರ ಕನಿಷ್ಠ 3 ರಿಂದ 4 ಪೆಟ್ ಬರ್ತ್‌ಡೇ ಪಾರ್ಟಿಗಳು ನಡೆಯುತ್ತಿವೆ.

ಸಾಮಾನ್ಯ ಬರ್ತ್‌ಡೇ ಆಚರಣೆ ₹3,000 ದಿಂದ ಆರಂಭವಾದರೆ, ಕೆಲವು ಶ್ರೀಮಂತ ಮಾಲೀಕರು 1 ಲಕ್ಷದಿಂದ 2 ಲಕ್ಷ ರೂಪಾಯಿಯವರೆಗೆ ಖರ್ಚು ಮಾಡುತ್ತಿದ್ದಾರೆ. ಇದಕ್ಕಾಗಿ ದೀಪಾಲಂಕಾರ , ವಿಶೇಷ ಉಡುಪುಗಳು, ಪೆಟ್‌ಗಳಿಗಾಗಿಯೇ ತಯಾರಿಸಿದ ವಿಶೇಷ ಮೆನು ಹಾಗೂ 10 ರಿಂದ 20 ನಾಯಿಗಳ ಸಮಾಗಮ ಆಯೋಜಿಸಲಾಗುತ್ತಿದೆ.

‘ಪೆಟ್ ಕಾರ್ಟ್ ನೆಸ್ಟ್’ ಸಂಸ್ಥಾಪಕ ಶೇಖರ್ ಗಾಂವ್ಕರ್ ಮಾತನಾಡಿ, “ಜನರು ಈಗ ಮನುಷ್ಯರ ಬರ್ತ್‌ಡೇಗಿಂತ ನಾಯಿಗಳ ಹುಟ್ಟುಹಬ್ಬವನ್ನು ತಿಂಗಳುಗಳ ಮುಂಚಿತವಾಗಿಯೇ ಅತ್ಯಂತ ಯೋಜನಾಬದ್ಧವಾಗಿ ಪ್ಲಾನ್ ಮಾಡುತ್ತಿದ್ದಾರೆ. ಪಾರ್ಟಿಗಳಲ್ಲಿ ವಿಶೇಷ ಸ್ವಿಮ್ಮಿಂಗ್ ಪೂಲ್ ಸೆಷನ್‌ಗಳು, ವೃತ್ತಿಪರ ಛಾಯಾಗ್ರಾಹಕರು ಹಾಗೂ ನಾಯಿಯ ಬಟ್ಟೆಗೆ ಮ್ಯಾಚ್ ಆಗುವಂತಹ ಅಲಂಕಾರಗಳನ್ನು ಮಾಡಿಸಲಾಗುತ್ತಿದೆ” ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಹೋಟೆಲ್ ಮಾಲೀಕರಿಂದ ‘ಸ್ವಿಗ್ಗಿ’ಗೆ ಶಾಕ್: ಆ.15 ರ ನಂತರ ಫುಡ್ ಡೆಲಿವರಿ ಸ್ಥಗಿತಗೊಳಿಸಲು ನಿರ್ಧಾರ

‘ವೇಣೂಸ್ ಪೆಟ್ ಕೇರ್’ನ ವೇಣು ಅವರ ಪ್ರಕಾರ, ಪೆಟ್ ಪೋಷಕರು ನಾಯಿ ಗರ್ಭಿಣಿಯಾದಾಗ ‘ಕ್ಯಾನೈನ್ ಬೇಬಿ ಶವರ್’ (ಸೀಮಂತ) ಮಾಡುವುದು ಹಾಗೂ 6,000 ರೂ. ದಿಂದ 20,000 ರೂ. ಖರ್ಚು ಮಾಡಿ ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕವೂ ಸಂಭ್ರಮಿಸುತ್ತಿದ್ದಾರೆ. ಈ ರೀತಿಯ ವೈಭವದ ಪಾರ್ಟಿ ಸಂಸ್ಕೃತಿ ನಾಯಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಬೆಕ್ಕುಗಳ ಪಾರ್ಟಿ ಇಂದಿಗೂ ಅಪರೂಪವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!