ಕುಟುಂಬವೇ ಮಣ್ಣಾದ್ರೂ ಸಂಪಾದಕ ಶಂಕರ್​ಗೆ ಹಣ-ಚಿನ್ನಾಭರಣದ ಆಸೆ? ಹೆಚ್ಚಾಯ್ತು ಅನುಮಾನ

ಪತ್ನಿ, ಮಕ್ಕಳು, ಮೊಮ್ಮಗು ಸಾವಿನ ನಂತರವೂ ಶಂಕರ್ ಹಣ, ಅಂತಸ್ಥಿನ ಆಸೆ ತೋರಿಸುತ್ತಿದ್ದಾರಂತೆ. ಸ್ಥಳ ಮಹಜರಿಗೆ ನನ್ನ ಮತ್ತು ನನ್ನ ಆಪ್ತರನ್ನ ಕರೆದೊಯ್ಯಬೇಕು ಅಂತಾ ಶಂಕರ್ ಕಂಡೀಷನ್ ಹಾಕುತ್ತಿದ್ದಾರಂತೆ.

ಕುಟುಂಬವೇ ಮಣ್ಣಾದ್ರೂ ಸಂಪಾದಕ ಶಂಕರ್​ಗೆ ಹಣ-ಚಿನ್ನಾಭರಣದ ಆಸೆ? ಹೆಚ್ಚಾಯ್ತು ಅನುಮಾನ
ಆತ್ಮಹತ್ಯಗೆ ಶರಣಾಗಿರುವ ಶಂಕರ್ ಕುಟುಂಬ
Edited By:

Updated on: Sep 19, 2021 | 11:24 AM

ಬೆಂಗಳೂರು: ನಗರದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಇಂದು ಪಂಚನಾಮೆ ಪ್ರಕ್ರಿಯೆ ನಡೆಯುತ್ತದೆ. ವಿಜಯನಗರ ಎಸಿಪಿ ನಂಜುಂಡೇಗೌಡ, ಬ್ಯಾಡರಹಳ್ಳಿ ಇನ್ಸ್​​ಪೆಕ್ಟರ್​ ರಾಜೀವ್ ಹಾಗೂ ಮನೆ ಮಾಲೀಕ ಶಂಕರ್ ಸಮ್ಮುಖದಲ್ಲಿ ಪರಿಶೀಲನೆ ನಡೆಯುತ್ತದೆ. ಪಂಚನಾಮೆ ವೇಳೆ ಅತ್ಮಹತ್ಯೆ ಕೇಸ್​ಗೆ ಟ್ವಿಸ್ಟ್ ಸಿಗಲಿದೆಯಾ ಅಂತ ಕಾದು ನೋಡಬೇಕಿದೆ. ಇಡೀ ಕುಟುಂಬವೇ ಮಣ್ಣಾದರೂ ಶಂಕರ್ ಹಣ ಮತ್ತು ಅಂತಸ್ಥಿನ ಆಸೆ ತೋರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಪತ್ನಿ, ಮಕ್ಕಳು, ಮೊಮ್ಮಗು ಸಾವಿನ ನಂತರವೂ ಶಂಕರ್ ಹಣ, ಅಂತಸ್ಥಿನ ಆಸೆ ತೋರಿಸುತ್ತಿದ್ದಾರಂತೆ. ಸ್ಥಳ ಮಹಜರಿಗೆ ನನ್ನ ಮತ್ತು ನನ್ನ ಆಪ್ತರನ್ನ ಕರೆದೊಯ್ಯಬೇಕು ಅಂತಾ ಶಂಕರ್ ಕಂಡೀಷನ್ ಹಾಕುತ್ತಿದ್ದಾರಂತೆ. ಅಲ್ಲದೇ ಈ ಬಗ್ಗೆ ಡಿಸಿಪಿ ಸಂಜೀವ್ ಪಾಟೀಲ್​ಗೆ ಮನವಿ ಮಾಡಿದ್ದಾರೆ. ಜೊತೆಗೆ ನಿನ್ನೆ ಕಮಿಷನರ್​ನ ಶಂಕರ್ ಭೇಟಿಯಾಗಿದ್ದಾರೆ.

ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮತ್ತು ವಿಡಿಯೋ ರೆಕಾರ್ಡ್ ಮಾಡುವ ಮೂಲಕ ಸ್ಥಳ ಮಹಜರು ಮಾಡಿ ಅಂತಾ ಮನವಿ ಮಾಡಿದ್ದಾರೆ. ಮನೆಯಲ್ಲಿ ಹಣ, ಚಿನ್ನಾಭರಣವಿದೆ. ಹೀಗಾಗಿ ನನ್ನ ಮತ್ತು ನನ್ನ ಆಪ್ತರ ಮುಂದೆ ಸ್ಥಳ ಮಹಜರು ಮಾಡಿ ಅಂತಾ ಶಂಕರ್ ಮನವಿ ಮಾಡಿದ್ದಾರೆ. ಶಂಕರ್ ಮನವಿಯಿಂದ ಮತ್ತಷ್ಟು ಅನುಮಾನ ಹೆಚ್ಚಾಗಿದೆ.

ಇದನ್ನೂ ಓದಿ

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ; ಮೃತದೇಹಗಳೊಟ್ಟಿಗೆ 5 ದಿನ ಕಳೆದ 3 ವರ್ಷದ ಮಗು

ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ 5 ಮಂದಿ ಸಾವು ಪ್ರಕರಣ; ವೃತ್ತಾಂತ ಘನಘೋರ, ಅಸಲಿ ಸತ್ಯಗಳು ಭೀಕರ

(making doubtful that Shankar desires money and gold in Bengaluru)