ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ 5 ಮಂದಿ ಸಾವು ಪ್ರಕರಣ; ವೃತ್ತಾಂತ ಘನಘೋರ, ಅಸಲಿ ಸತ್ಯಗಳು ಭೀಕರ

ಸ್ಥಳೀಯ ಪತ್ರಿಕೆ ಸಂಪಾದಕರಾದ ಶಂಕರ್​ರವರ ಪತ್ನಿ, ಮಗ, ಇಬ್ಬರು ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ 5 ಮಂದಿ ಸಾವು ಪ್ರಕರಣ; ವೃತ್ತಾಂತ ಘನಘೋರ, ಅಸಲಿ ಸತ್ಯಗಳು ಭೀಕರ
ಶಂಕರ್ನವರ ಐಶಾರಾಮಿ ಮನೆ, ಸ್ಥಳೀಯ ಪತ್ರಿಕೆ ಸಂಪಾದಕ ಶಂಕರ್
Follow us
TV9 Web
| Updated By: sandhya thejappa

Updated on:Sep 18, 2021 | 10:37 AM

ಬೆಂಗಳೂರು: ನಗರದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಇಂದು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯುತ್ತದೆ. ಮರಣೋತ್ತರ ಪರೀಕ್ಷೆ ಬಳಿಕ ಅಸಲಿ ಸತ್ಯ ಬಯಲಾಗಲಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ೧೦ ಗಂಟೆ ಬಳಿಕ ಮರಣೋತ್ತರ ಪರೀಕ್ಷೆ ಆರಂಭವಾಗಲಿದೆ. ಒಂದೇ ಕುಟುಂಬದ ಸದಸ್ಯರು ಕಳೆದ ಐದಾರು ದಿನಗಳ ಹಿಂದೆ ಅಂದರೆ ಸೋಮವಾರ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಮೃತ ದೇಹಗಳ ಮರಣೋತ್ತರ ಪರೀಕ್ಷೆ ಬಳಿಕ ಹಲವು ವಿಚಾರ ಬಯಲಾಗಲಿದೆ. ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂಬತ್ತು ತಿಂಗಳ ಮಗು ಹಸಿವಿನಿಂದ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಪತ್ರಿಕೆ ಸಂಪಾದಕರಾದ ಶಂಕರ್​ರವರ ಪತ್ನಿ, ಮಗ, ಇಬ್ಬರು ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಓರ್ವ ಮೊಮ್ಮಗ ಸಾವು ಹಸಿವಿನಿಂದ ಸಾವನ್ನಪ್ಪಿರುವ ಸಾಧ್ಯತೆಯಿದೆ. ಆದರೆ ಮನೆಯಲ್ಲಿದ್ದ ಎರಡೂವರೆ ವರ್ಷದ ಮಗು ಪ್ರೇಕ್ಷಾ ಬದುಕುಳಿದಿದೆ. ಮಗು ಬದುಕುಳಿಯಲು ಶಂಕರ್ ಮಗ ಅಂದರೆ ಮಗುವಿನ ಮಾವ ಮಧುಸಾಗರ್ ಕಾರಣವಿರಬಹುದು. ತಾಯಿ ಮತ್ತು ಸೋದರಿಯರು ನೇಣಿಗೆ ಶರಣಾದ 1-2 ದಿನ ಬಳಿಕ ಮಧುಸಾಗರ್ ಆತ್ನಹತ್ಯೆಗೆ ಶರಣಾಗಿರುವ ಅನುಮಾನವಿದ್ದು, ನಾಲ್ವರ ಶವಕ್ಕಿಂತ ಮಧುಸಾಗರ್ ದೇಹ ಕಡಿಮೆ ಕೊಳೆತಿದೆ. ಶವ ಸಾಗಿಸುವಾಗ ಪೊಲೀಸರು ಈ ಅಂಶವನ್ನು ಗಮನಿಸಿದ್ದಾರೆ. ಹೀಗಾಗಿ ಮಧುಸಾಗರ್ 2 ದಿನ ಮಗುವಿಗೆ ಆಹಾರ ತಿನಿಸಿರುವ ಸಾಧ್ಯತೆಯಿದೆ.

ಮನೆ ಕಡೆ ಸುಳಿಯದ ಮನೆ ಕೆಲಸ ಮಾಡುವ ಹುಡುಗಿ ಇನ್ನು ಶಂಕರ್ ಮನೆಗೆ ಹುಡುಗಿಯೊಬ್ಬಳು ಕೆಲಸ ಮಾಡಲು ಬರುತ್ತಿದ್ದಳು. ಗುಲ್ಬರ್ಗ ಮೂಲದ ಹುಡುಗಿ ಮನೆಗೆಲಸ ಮಾಡಿಕೊಂಡಿದ್ದಳು. ಆ ಹುಡುಗಿಯನ್ನು ಶಂಕರ್ ಚೆನ್ನಾಗಿ ನೋಡಿಕೊಳ್ಳುತ್ತಿದ್ದರಂತೆ. ಆದರೆ ಇದು ಶಂಕರ್ ಪತ್ನಿಯ ಕಣ್ಣು ಕೆಂಪಾಗಿಸಿತ್ತು. ಜಗಳ ಮಾಡಿ ಹುಡುಗಿಯನ್ನ ಓಡಿಸಿಬಿಟ್ಟಿದ್ದರು. 4 ತಿಂಗಳ ಹಿಂದೆ ಆಕೆಯನ್ನ ಓಡಿಸಲಾಗಿತ್ತು. ಮೊದಲ ಹುಡುಗಿ ತೆರಳಿದ ಬಳಿಕ ಮತ್ತೊಬ್ಬರು ಕೆಲಸಕ್ಕೆ ಬರುತ್ತಿದ್ದರು. ಆದರೆ ಭಾನುವಾರದಿಂದ ಈಚೆಗೆ ಆಕೆಯೂ ಬರುತ್ತಿರಲಿಲ್ಲ. ಭಾನುವಾರ ಬಂದಿದ್ದು ಬಿಟ್ಟರೆ ಮತ್ತೆ ಈ ಕಡೆ ಸುಳಿಯಲೇ ಇಲ್ಲ. ಇದು ಮತ್ತಷ್ಟು ಅನುಮಾನ ಮೂಡುವಂತೆ ಮಾಡಿದೆ.

ಬದುಕುಳಿದ ಮಗುವಿಗೆ ನಿದ್ರೆ ಮಾತ್ರೆ ತಿನ್ನಿಸಿದ ಅನುಮಾನ ಮನೆಯಲ್ಲಿ ಐವರು ಸಾವನ್ನಪ್ಪಿದ್ದರೂ ಎರಡೂವರೆ ವರ್ಷದ ಮಗು ಪಾವಾಡವಾಗಿ ಬದುಕುಳಿದೆ. ಆದರೆ ಈ ಮಗುವಿಗೂ ನಿದ್ರೆ ಮಾತ್ರೆ ತಿನ್ನಿಸಿರಬಹುದು ಎಂಬ ಅನುಮಾನ ಮೂಡಿದೆ. ಘಟನೆ ನಡೆದು ಆರು ದಿನಗಳಾದರೂ ಮಗು ಬದುಕಿಳಿದಿದೆ. ಮನೆಯಲ್ಲಿ ಯಾರು ಇಲ್ಲದಿದ್ದರೂ, ಊಟ, ತಿಂಡಿಯಿಲ್ಲದಿದ್ದರೂ ಮಗು ಬದುಕುಳಿದಿದೆ. ಬಹುಶಃ ಮಾತ್ರೆಯಿಂದ ಮಲಗಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ.

ಭವ್ಯ ಮನೆ ಈಗ ಸಂಪೂರ್ಣ ಖಾಲಿ ಖಾಲಿ ಶಂಕರ್ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ವಿಬಾಯಕನಗರದಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಕೆಳ ಮಹಡಿಯನ್ನು ಬಾಡಿಗೆಗೆ ನೀಡಲಾಗಿತ್ತು. ಮೊದಲ ಮಹಡಿಯಲ್ಲಿ ಹಾಲ್, ಕಿಚನ್ ಹಾಗೂ ಒಂದು ಕೊಠಡಿ ಇತ್ತು. ಆ ಕೊಠಡಿಯಲ್ಲಿ ಶಂಕರ್ ಮತ್ತು ಅವರ ಪತ್ನಿ ಭಾರತಿ ಇರುತ್ತಿದ್ದರು. ಅದೇ ಕೊಠಡಿಯಲ್ಲಿ ಕಿರಿಯ ಪುತ್ರಿ ಸಿಂಧುರಾಣಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಸಿಂಧುರಾಣಿ ಸತ್ತ ಕೊಠಡಿಯ ಬೆಡ್ ಮೇಲೆ 9 ತಿಂಗಳ ಗಂಡು ಮಗು ಮೃತದೇಹ ಇತ್ತು. ಹಾಲ್​ನಲ್ಲಿದ್ದ ಫ್ಯಾನಿಗೆ ಭಾರತಿ ನೇಣು ಬಿಗಿದುಕೊಂಡಿದ್ದಾರೆ. ಎರಡನೇ ಮಹಡಿಯಲ್ಲಿ ಮೂರು ಕೊಠಡಿಗಳಿದ್ದವು. ಮೂವರು ಮಕ್ಕಳಿಗೆ ಮೂರು ಕೊಠಡಿ ಇತ್ತು. ಎರಡು ಪ್ರತ್ಯೇಕ ಕೊಠಡಿಯಲ್ಲಿ ಹಿರಿಯ ಪುತ್ರಿ ಸಿಂಚನ ಮತ್ತು ಮಗ ಮಧುಸಾಗರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧುಸಾಗರ್ ಕೊಠಡಿಯಲ್ಲೇ ಬದುಕುಳಿದ ಮಗು ಪ್ರೇಕ್ಷಾ ಇತ್ತು.

ದೂರು ದಾಖಲಿಸಿರುವ ಶಂಕರ್; ದೂರಿನಲ್ಲಿರುವ ಅಂಶಗಳು ಟಿವಿ9ಗೆ ಲಭ್ಯ ಬ್ಯಾಡರಹಳ್ಳಿ ಠಾಣೆಯಲ್ಲಿ ಶಂಕರ್ ದೂರು ದಾಖಲಿಸಿದ್ದಾರೆ. ಶಂಕರ್ ನೀಡಿದ ದೂರಿನಲ್ಲಿರುವ ಅಂಶಗಳು ಟಿವಿ9ಗೆ ಲಭ್ಯವಾಗಿದೆ. ‘ನನ್ನ ಎಲ್ಲ ಆಸ್ತಿ, ಹಣವನ್ನು ಪತ್ನಿ, ಮಗನಿಗೆ ನೀಡಿಬಿಟ್ಟಿದ್ದೆ. ನನಗೆ ಹಣ ಬೇಕಾದಾಗ ಅವರನ್ನೇ ಕೇಳಿ ಪಡೆಯಬೇಕಿತ್ತು’ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ 12ರ ಘಟನೆ ಬಗ್ಗೆಯೂ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಪತ್ನಿ, ಮಗನ ಜೊತೆ ಶಂಕರ್ ಭಿನ್ನಾಭಿಪ್ರಾಯ ಹೊಂದಿದ್ದರು. ಪತ್ನಿಯ ಜೊತೆ ಹೆಣ್ಣುಮಕ್ಕಳ ವಿಚಾರವಾಗಿ ಭಿನ್ನಾಭಿಪ್ರಾಯ ಹೊಂದಿದ್ದರು. ಹೆಣ್ಣುಮಕ್ಕಳನ್ನ ಗಂಡನ ಮನೆಗೆ ಕಳಿಸುವಂತೆ ಶಂಕರ್ ಹೇಳುತ್ತಿದ್ದರಂತೆ. ಆದರೆ ಕಳಿಸಲ್ಲ ಅಂತ  ಶಂಕರ್ ಜೊತೆ ಪತ್ನಿ ಭಾರತಿ ಜಗಳವಾಡುತ್ತಿದ್ದರಂತೆ. ಹೆಣ್ಣುಮಕ್ಕಳ ಜೀವನ ಹಾಳು ಮಾಡ್ತಿದ್ದೀಯಾ ಎಂದು ಸಿಟ್ಟಾಗುತ್ತಿದ್ದರಂತೆ. ಹಣದ ವ್ಯವಹಾರಕ್ಕೆ ಸಂಬಂಧಿಸಿ ಮಗನ ಜತೆ ಭಿನ್ನಾಭಿಪ್ರಾಯ ಹೊಂದಿದ್ದರಂತೆ. ಬಾರ್ ತೆರೆಯಲು ಮಗ 20 ಲಕ್ಷ ರೂ. ಕೊಟ್ಟು ಸಿದ್ಧತೆ ಮಾಡಿಕೊಂಡಿದ್ದನಂತೆ. ನೋಂದಣಿ ಮಾಡಿಸಲು ಶಂಕರ್ ಸಹಿ ಬೇಕಾಗಿತ್ತು. ಆದರೆ ಸಹಿ ಮಾಡಲು ಶಂಕರ್ ನಿರಾಕರಿಸಿದ್ದರಂತೆ. ಈ ವಿಚಾರವಾಗಿಯೂ ಸೆ.12ರಂದು ಮನೆಯಲ್ಲಿ ಜಗಳವಾಗಿತ್ತು. ಆಶ್ರಮ ಕಟ್ಟಿಸಲು ಶಂಕರ್ 10 ಲಕ್ಷ ರೂ. ನೀಡುವಂತೆ ಕೇಳಿದ್ದರಂತೆ. ಈ ವೇಳೆ ಶಂಕರ್‌ಗೆ ಹಣ ನೀಡಲು ನಿರಾಕರಿಸಿದ್ದ ಪತ್ನಿ ಮತ್ತು ಮಗ ನಿರಾಕರಿಸಿದ್ದಾರೆ. ಈ ವಿಚಾರವಾಗಿಯೂ ಸೆಪ್ಟೆಂಬರ್ 12ರಂದು ಜಗಳವಾಗಿತ್ತು. ಈ ಎಲ್ಲ ವಿಚಾರಕ್ಕೆ ಜಗಳ ಮಾಡಿಕೊಂಡು ಶಂಕರ್ ಮನೆ ಬಿಟ್ಟು ಹೋಗಿದ್ದರು.

ಸಂಜೆ 4.30‌ಕ್ಕೆ ಶಂಕರ್‌ಗೆ ಮಗ ವಾಟ್ಸಾಪ್ ಮೆಸೇಜ್ ಮಾಡಿದ್ದ. 10 ಲಕ್ಷ ರೂ. ನೀಡುತ್ತೇನೆ ಮನೆಗೆ ಬಾ ಅಪ್ಪಾ ಎಂದು ಮೆಸೇಜ್ ಮಾಡಿದ್ದಾನೆ. ಇದಕ್ಕೆ ಶಂಕರ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸೆಪ್ಟೆಂಬರ್ 16ರಂದು ಶಂಕರ್ ಮನೆಯ ಬಳಿ ಬಂದಿದ್ದಾರೆ.  ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ವಾಪಸ್ ಹೋಗಿದ್ದಾರೆ. ಎಲ್ಲಾದರು ಹೋಗಿರಬಹುದೆಂದು ಸ್ನೇಹಿತನ ಮನೆಗೆ ಹೋಗಿದ್ದಾರೆ. ಆದರೆ ನಿನ್ನೆ ಸಂಜೆ ಮತ್ತೆ ಮನೆ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದ್ದ ಶಂಕರ್​ ಮೂವರು ಮಕ್ಕಳಿಗೆ ಶಂಕರ್ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದ. ​​ ಐಎಎಸ್​​ ಆಗುವ ಕನಸನ್ನು ಇಬ್ಬರು ಹೆಣ್ಣು ಮಕ್ಕಳಾದ ಸಿಂಚನಾ ಮತ್ತು ಸಿಂಧುರಾಣಿ ಕನಸುಕಂಡಿದ್ದರು. ಇಬ್ಬರು ಮಕ್ಕಳನ್ನ ಶಂಕರ್ ಐಎಎಸ್​ ಕೋಚಿಂಗ್‌ಗೆ ಸೇರಿಸಿದ್ದರು. ಕೋಚಿಂಗ್ ಸೆಂಟರ್​ಗೆ ತೆರಳಲು ಮಕ್ಕಳಿಗೆ ಕಾರಿನ ವ್ಯವಸ್ಥೆ ಮಾಡಿದ್ದರು. ಬಿಇ ಮುಗಿಸಿ ಖಾಸಗಿ ಕಂಪನಿಯಲ್ಲಿ ಸಿಂಚನಾ ಕೆಲಸ ಮಾಡಿಕೊಂಡಿದ್ದಳು. ಮಗು ಜನಿಸಿದ ಬಳಿಕ ಸಿಂಚನಾ ಕೆಲಸಕ್ಕೆ ಹೋಗುವುದು ನಿಲ್ಲಿಸಿದ್ದಳು.  2ನೇ ಮಗಳು ಸಿಂಧುರಾಣಿ ಎಂಬಿಎ ಪದವೀಧರೆಯಾಗಿದ್ದಳು. ​​ಮಗ ಮಧುಸಾಗರ್​​​​​​ ಬಿಇ ಪದವೀಧರನಾಗಿದ್ದು, ಮಧು ಬ್ಯಾಂಕ್ ಆಫ್​ ಬರೋಡಾದಲ್ಲಿ ಕೆಲಸ ಮಾಡುತ್ತಿದ್ದ.

ಸಂಪಾದಕ ಶಂಕರ್ ಕುಟುಂಬ

ಇದನ್ನೂ ಓದಿ

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ; ಮೃತದೇಹಗಳೊಟ್ಟಿಗೆ 5 ದಿನ ಕಳೆದ 3 ವರ್ಷದ ಮಗು

‘ಕಾಬೂಲ್​ ಏರ್​ಪೋರ್ಟ್​​ ಮೇಲೆ ನಾವು ಡ್ರೋನ್​ ದಾಳಿ ಮಾಡಿದ್ದು ತಪ್ಪಾಯ್ತು’-ಕ್ಷಮೆ ಕೇಳಿದ ಯುಎಸ್​

(After the post mortem there will be information about the deaths of five members of the same family in Bengaluru)

Published On - 8:51 am, Sat, 18 September 21

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ