AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mantri Mall: ತೆರಿಗೆ ಕಟ್ಟಿ ಕಟ್ಟೀ ಅಂದರೂ ಡೋಂಟ್​ ಕೇರ್! ಮಂತ್ರಿ ಮಾಲ್​ಗೆ ಬೀಗ ಜಡಿಯಲು ಮುಂದಾದ ಬಿಬಿಎಂಪಿ

ಮಲ್ಲೇಶ್ವರಕ್ಕೆ ಸ್ವಾಗತ ಕೋರುವಂತೆ ಸಂಪಿಗೆ ರಸ್ತೆಯ ಆರಂಭದಲ್ಲಿರುವ ಮಂತ್ರಿ ಮಾಲ್ (Mantri Square Mall ) ಬರೋಬ್ಬರಿ 20,33,34,828 ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ತೆರಿಗೆ ಕಟ್ಟಿ ಕಟ್ಟೀ ಅಂತಾ ಮಂತ್ರಿ ಮಾಲ್ ಗೆ ಬಿಬಿಎಂಪಿ ನೋಟೀಸ್ ನೀಡುತ್ತಾ ಬಂದಿದೆ.

Mantri Mall: ತೆರಿಗೆ ಕಟ್ಟಿ ಕಟ್ಟೀ ಅಂದರೂ ಡೋಂಟ್​ ಕೇರ್! ಮಂತ್ರಿ ಮಾಲ್​ಗೆ ಬೀಗ ಜಡಿಯಲು ಮುಂದಾದ ಬಿಬಿಎಂಪಿ
ಮಂತ್ರಿ ಮಾಲ್‌
TV9 Web
| Edited By: |

Updated on: Sep 18, 2021 | 10:14 AM

Share

ಬೆಂಗಳೂರು: ಬೆಂಗಳೂರಿನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ವಂಚಕರ ಸಂಖ್ಯೆ ಹೆಚ್ಚಳವಾಗಿದೆ. ಅದರಲ್ಲೂ ಬಿಬಿಎಂಪಿಗೆ ಮಂತ್ರಿ ಮಾಲ್ ದೊಡ್ಡ ತಲೆ ನೋವಾಗಿದೆ. ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಿರುವ ಮಂತ್ರಿ ಮಾಲ್ 2018ರ ಬಳಿಕ ಇದೂವರೆಗೂ ಆಸ್ತಿ ತೆರಿಗೆ ಕಟ್ಟಿಲ್ಲ. ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್ ಮೊದಲ ಸ್ಥಾನದಲ್ಲಿದೆ.

ಮಲ್ಲೇಶ್ವರಕ್ಕೆ ಸ್ವಾಗತ ಕೋರುವಂತೆ ಸಂಪಿಗೆ ರಸ್ತೆಯ ಆರಂಭದಲ್ಲಿರುವ ಮಂತ್ರಿ ಮಾಲ್ (Mantri Square Mall ) ಬರೋಬ್ಬರಿ 20,33,34,828 ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ತೆರಿಗೆ ಕಟ್ಟಿ ಕಟ್ಟೀ ಅಂತಾ ಮಂತ್ರಿ ಮಾಲ್ ಗೆ ಬಿಬಿಎಂಪಿ ನೋಟೀಸ್ ನೀಡುತ್ತಾ ಬಂದಿದೆ. ಬಾಕಿ ತೆರಿಗೆ ಕಟ್ಟದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನೂ ನೀಡಿದೆ. ಆದರೂ ಮಂತ್ರಿ ಮಾಲ್​ ಕಡೆಯಿಂದ ಡೋಂಟ್​ ಕೇರ್.

ಆಸ್ತಿ ತೆರಿಗೆಗೆ ಬಿಬಿಎಂಪಿ ಮುಟ್ಟಗೋಲು ಅಸ್ತ್ರ ಬಿಬಿಎಂಪಿ (BBMP) ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಂತ್ರಿ ಮಾಲ್​ನಿಂದ ಮೊದಲು ಮಾಲ್ ನ ಪೀಠೋಪಕರಣ ನಂತರ, ಮಾಲ್ ಗೆ ಬೀಗ ಜಡಿಯಲು ಬಿಬಿಎಂಪಿ ಇದೀಗ ನಿರ್ಧಾರ ಮಾಡಿದೆ.

Also Read: ಮಂತ್ರಿ ಒತ್ತುವರಿ ಲೆಕ್ಕಶೋಧ: ಸರ್ವೆ ಅಧಿಕಾರಿಗಳಿಗೆ ತಡೆ!

Also Read:

ಬಿಡದಿ: ಈಗಲ್ಟನ್​ ರೆಸಾರ್ಟ್ ಒತ್ತುವರಿ ಮಾಡ್ಕೊಂಡಿದ್ದ 928 ಕೋಟಿ ರೂ. ಮೌಲ್ಯದ 77 ಎಕರೆ ಸರ್ಕಾರಿ ಭೂಮಿ ಜಿಲ್ಲಾಡಳಿತ ವಶಕ್ಕೆ

(BBMP to close down mantri mall in malleshwaram as tax arrears mount huge)

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ