ಮಂತ್ರಿ ಒತ್ತುವರಿ ಲೆಕ್ಕಶೋಧ: ಸರ್ವೆ ಅಧಿಕಾರಿಗಳಿಗೆ ತಡೆ!

ಮಂತ್ರಿ ಒತ್ತುವರಿ ಲೆಕ್ಕಶೋಧ: ಸರ್ವೆ ಅಧಿಕಾರಿಗಳಿಗೆ ತಡೆ!

ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್ ಹಾಗೂ ಮಂತ್ರಿ ಅಪಾರ್ಟ್​ಮೆಂಟ್​ ವಿರುದ್ಧ ಸರ್ಕಾರಿ ಜಾಗ ಒತ್ತುವರಿ ಆರೋಪ ಕೇಳಿಬಂದಿದ್ದು, ಒತ್ತುವರಿ ಜಾಗ ಗುರುತಿಸಲು ಸರ್ವೆಗಾಗಿ ಅಧಿಕಾರಿಗಳು ಬಂದಿದ್ದಾರೆ. ಆದ್ರೆ, ಮಂತ್ರಿಮಾಲ್​ ಸುತ್ತಮುತ್ತ ಸರ್ವೆಗಾಗಿ ಆಗಮಿಸಿದ್ದ ಅಧಿಕಾರಿಗಳ ಪ್ರವೇಶಕ್ಕೆ ತಡೆ ನೀಡಲಾಗಿದೆ. ಸರ್ವೆ ಅಧಿಕಾರಿಗಳಿಗೆ ತಡೆ: ಸಿಟಿ ಸರ್ವೆ ಮೇಲ್ವಿಚಾರಕ ರಂಗಯ್ಯ ನೇತೃತ್ವದ ಟೀಂ ಸರ್ವೆ ಕಾರ್ಯಕ್ಕೆ ಆಗಮಿಸಿದ್ದಾರೆ. ಸರ್ವೆಗೂ ಮುನ್ನ ಬಿಬಿಎಂಪಿ ಅಧಿಕಾರಿಗಳು ತಿಳುವಳಿಕೆ ನೋಟಿಸ್ ನೀಡಿದ್ದಾರೆ. ಆದ್ರೆ ಮಂತ್ರಿ ಮಾಲ್ ಆಡಳಿತ ಮಂಡಳಿ ನೋಟಿಸ್ ಸ್ವೀಕರಿಸಿಲ್ಲ. ಸರ್ವೆ ಅಧಿಕಾರಿಗಳಿಗೆ […]

sadhu srinath

|

Feb 28, 2020 | 1:45 PM

ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್ ಹಾಗೂ ಮಂತ್ರಿ ಅಪಾರ್ಟ್​ಮೆಂಟ್​ ವಿರುದ್ಧ ಸರ್ಕಾರಿ ಜಾಗ ಒತ್ತುವರಿ ಆರೋಪ ಕೇಳಿಬಂದಿದ್ದು, ಒತ್ತುವರಿ ಜಾಗ ಗುರುತಿಸಲು ಸರ್ವೆಗಾಗಿ ಅಧಿಕಾರಿಗಳು ಬಂದಿದ್ದಾರೆ. ಆದ್ರೆ, ಮಂತ್ರಿಮಾಲ್​ ಸುತ್ತಮುತ್ತ ಸರ್ವೆಗಾಗಿ ಆಗಮಿಸಿದ್ದ ಅಧಿಕಾರಿಗಳ ಪ್ರವೇಶಕ್ಕೆ ತಡೆ ನೀಡಲಾಗಿದೆ.

ಸರ್ವೆ ಅಧಿಕಾರಿಗಳಿಗೆ ತಡೆ: ಸಿಟಿ ಸರ್ವೆ ಮೇಲ್ವಿಚಾರಕ ರಂಗಯ್ಯ ನೇತೃತ್ವದ ಟೀಂ ಸರ್ವೆ ಕಾರ್ಯಕ್ಕೆ ಆಗಮಿಸಿದ್ದಾರೆ. ಸರ್ವೆಗೂ ಮುನ್ನ ಬಿಬಿಎಂಪಿ ಅಧಿಕಾರಿಗಳು ತಿಳುವಳಿಕೆ ನೋಟಿಸ್ ನೀಡಿದ್ದಾರೆ. ಆದ್ರೆ ಮಂತ್ರಿ ಮಾಲ್ ಆಡಳಿತ ಮಂಡಳಿ ನೋಟಿಸ್ ಸ್ವೀಕರಿಸಿಲ್ಲ. ಸರ್ವೆ ಅಧಿಕಾರಿಗಳಿಗೆ ಗೇಟ್ ಸಹ ತೆಗೆಯದೆ ಮಾಲ್ ಸೆಕ್ಯುರಿಟಿಗಳು ತಡೆ ನೀಡಿದ್ದಾರೆ.

ಅಪಾರ್ಟ್‌ಮೆಂಟ್‌ನಿಂದ ಸರ್ಕಾರಿ ಜಾಗ ಒತ್ತುವರಿ ಆರೋಪ ಹಿನ್ನೆಲೆಯಲ್ಲಿ ಜಾಗ ವಶಕ್ಕೆ ಪಡೆದುಕೊಳ್ಳಲು ಕಳೆದ ತಿಂಗಳು ಪ್ರಾದೇಶಿಕ ಆಯುಕ್ತರು, ಸಕ್ಷಮ ಪ್ರಾಧಿಕಾರ ನ್ಯಾಯಾಲಯ ಬಿಬಿಎಂಪಿಗೆ ಆದೇಶಿಸಿತ್ತು. ಸರ್ಕಾರಿ ಭೂಮಿ ವಾಪಸ್ ಪಡೆಯುವಂತೆ ಬಿಬಿಎಂಪಿಗೆ ಅಂದಿನ ಪ್ರಾದೇಶಿಕ ಆಯುಕ್ತರಾಗಿದ್ದ ಹರ್ಷ ಗುಪ್ತ ಆದೇಶಿಸಿದ್ದರು. ಈ ಬಗ್ಗೆ ಸರ್ವೆ ಮಾಡಿಕೊಡುವಂತೆ ಸರ್ವೆ ಇಲಾಖೆಗೆ ಬಿಬಿಎಂಪಿ ಪತ್ರ ಬರೆದಿತ್ತು.

ಅಲ್ಲದೆ, ಮಂತ್ರಿ ಗ್ರೀನ್ ಅಪಾರ್ಟ್​ಮೆಂಟ್​ನಲ್ಲಿ ಒಟ್ಟು 425 ಕುಟುಂಬಗಳು ವಾಸಮಾಡುತ್ತಿವೆ. ಮಂತ್ರಿ ಗ್ರೂಪ್​ನಿಂದ ಸರ್ಕಾರಿ ಜಾಗ ಒತ್ತುವರಿ ಆಗಿದೆ ಅಂತಾ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ದೂರು ನೀಡಿದ್ದರು. ಹೀಗಾಗಿ ಸರ್ಕಾರಿ ಜಾಗ ಪತ್ತೆಯಾದ್ರೆ ಮಂತ್ರಿ ಮಾಲ್ ತೆರುವು ಖಚಿತವಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada