ಸಂಕಷ್ಟ ಪರಿಹಾರ ನೆಪದಲ್ಲಿ ₹27 ಕೋಟಿ ಪಂಗನಾಮ: ಸ್ವಾಮೀಜಿಗಾಗಿ CCB ತಲಾಶ್

ಸಂಕಷ್ಟ ಪರಿಹಾರ ನೆಪದಲ್ಲಿ ₹27 ಕೋಟಿ ಪಂಗನಾಮ: ಸ್ವಾಮೀಜಿಗಾಗಿ CCB ತಲಾಶ್

ಕೋಲಾರ: ಸಂಕಷ್ಟ ಪರಿಹಾರ ನೆಪದಲ್ಲಿ ಬಂಗಾರಪೇಟೆ ಹೊರವಲಯದ ಬೆಳ್ಳಿಪೇಟೆ ಸೊಲ್ಲಾಪುರ ದೇವಿ ದೇವಸ್ಥಾನದ ಸ್ವಾಮೀಜಿ ಮಹಿಳೆಯೊಬ್ಬರಿಗೆ ಬರೋಬ್ಬರಿ 27 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ಬೆಂಗಳೂರು ಮೂಲದ‌ ಗೀತಾ ಎಂಬುವರಿಗೆ ವಂಚಿಸಿ ಕಾವಿಧಾರಿ ಎಸ್ಕೇಪ್ ಆಗಿದ್ದಾನೆ. ಮೆಕಾನಿಕ್ ಕೆಲಸ‌ ಮಾಡಿಕೊಂಡಿದ್ದ ವಂಚಕ ತಾನು ಸ್ವಾಮೀಜಿ ಎಂದು ಹಲವರಿಗೆ ನಂಬಿಸಿದ್ದಾನೆ. ಆರೋಪಿ ನಾಗರಾಜ್ ದೇವಾಲಯದಲ್ಲೇ ಎಣ್ಣೆ ಹೊಡೆದು‌ ಬಿಂದಸ್ ಜೀವನ ಮಾಡುತ್ತಿದ್ದ. ದೇವರ ಹೆಸರಿನಲ್ಲಿ ‌ಜನರಿಗೆ ವಂಚಿಸಿ ಬೆಳ್ಳಿಪೇಟೆಯಲ್ಲಿ‌ ಬಂಗಲೆ ನಿರ್ಮಾಣ ಮಾಡಿಕೊಂಡಿದ್ದ. ಸದ್ಯ ದೂರು ದಾಖಲಾದ ಮೇಲೆ‌ […]

sadhu srinath

|

Feb 28, 2020 | 12:29 PM

ಕೋಲಾರ: ಸಂಕಷ್ಟ ಪರಿಹಾರ ನೆಪದಲ್ಲಿ ಬಂಗಾರಪೇಟೆ ಹೊರವಲಯದ ಬೆಳ್ಳಿಪೇಟೆ ಸೊಲ್ಲಾಪುರ ದೇವಿ ದೇವಸ್ಥಾನದ ಸ್ವಾಮೀಜಿ ಮಹಿಳೆಯೊಬ್ಬರಿಗೆ ಬರೋಬ್ಬರಿ 27 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ಬೆಂಗಳೂರು ಮೂಲದ‌ ಗೀತಾ ಎಂಬುವರಿಗೆ ವಂಚಿಸಿ ಕಾವಿಧಾರಿ ಎಸ್ಕೇಪ್ ಆಗಿದ್ದಾನೆ.

ಮೆಕಾನಿಕ್ ಕೆಲಸ‌ ಮಾಡಿಕೊಂಡಿದ್ದ ವಂಚಕ ತಾನು ಸ್ವಾಮೀಜಿ ಎಂದು ಹಲವರಿಗೆ ನಂಬಿಸಿದ್ದಾನೆ. ಆರೋಪಿ ನಾಗರಾಜ್ ದೇವಾಲಯದಲ್ಲೇ ಎಣ್ಣೆ ಹೊಡೆದು‌ ಬಿಂದಸ್ ಜೀವನ ಮಾಡುತ್ತಿದ್ದ. ದೇವರ ಹೆಸರಿನಲ್ಲಿ ‌ಜನರಿಗೆ ವಂಚಿಸಿ ಬೆಳ್ಳಿಪೇಟೆಯಲ್ಲಿ‌ ಬಂಗಲೆ ನಿರ್ಮಾಣ ಮಾಡಿಕೊಂಡಿದ್ದ. ಸದ್ಯ ದೂರು ದಾಖಲಾದ ಮೇಲೆ‌ ಕಳ್ಳ ಸ್ವಾಮೀಜಿ ನಾಗರಾಜ್ ಮತ್ತು ಕುಟುಂಬಸ್ಥರು ತಲೆಮರೆಸಿಕೊಂಡಿದ್ದಾರೆ.

ಸ್ವಾಮೀಜಿ ಮನೆಯಲ್ಲಿ ಸಿಸಿಬಿ ಅಧಿಕಾರಿಗಳ ಶೋಧ: ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳು ತಡರಾತ್ರಿ ಮನೆಗೆ ಭೇಟಿ ನೀಡಿದ್ರು. ಸರ್ಚಿಂಗ್ ವಾರಂಟ್‌ ಮೂಲಕ ಎಂಟ್ರಿಕೊಟ್ಟಿದ್ದ ಸಿಸಿಬಿ ಮನೆಯಲ್ಲಿ ಸಂಪೂರ್ಣವಾಗಿ ಶೋಧ ನಡೆಸಿದ್ದಾರೆ. ಆಗ ಮನೆಯಲ್ಲಿ ನಮ್ಮ ತಂದೆ ಇರಲಿಲ್ಲ. ಮನೆಯಲ್ಲಿ ಎರಡು ಲಕ್ಷ ರೂಪಾಯಿ ಹಣ ಇತ್ತು. ಹಣ ಸೇರಿದಂತೆ ಚಿನ್ನಾಭರವಣವನ್ನ ಅಧಿಕಾರಿಗಳು ಜಪ್ತಿ ಮಾಡಿದ್ರು. ನಮ್ಮ ತಂದೆಯ ಮಾರ್ಯದೆ ಕಳೆಯಲು ಹೀಗೆ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಮಗ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada