HDK ತಂದೆ ಸ್ವಾತಂತ್ರ್ಯ ಸೈನಿಕರೇ, ಅವ್ರಿಗೆ ಸಾವಿರಾರು ಕೋಟಿ ಹೇಗೆ ಬಂತು -ಯತ್ನಾಳ್

HDK ತಂದೆ ಸ್ವಾತಂತ್ರ್ಯ ಸೈನಿಕರೇ, ಅವ್ರಿಗೆ ಸಾವಿರಾರು ಕೋಟಿ ಹೇಗೆ ಬಂತು -ಯತ್ನಾಳ್

ಚಿತ್ರದುರ್ಗ: ಹೆಚ್​.ಎಸ್​.ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಯತ್ನಾಳ್ ಹುಟ್ಟಿದ್ದರೋ ಇಲ್ಲವೋ ಎಂಬ ಕುಮಾರಸ್ವಾಮಿ ಪ್ರಶ್ನೆಗೆ ಶಾಸಕ ಬಸನಗೌಡ ಯತ್ನಾಳ್ ಮರುಪ್ರಶ್ನೆ ಹಾಕಿದ್ದಾರೆ. ಆ ಸಮಯದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹುಟ್ಟಿದ್ರಾ? ಯಾರು ಕೂಳಿಗೆ ಇಲ್ಲವೋ ಅವರು ಸೇನೆಗೆ ಸೇರ್ತಾರೆ ಎಂದು ಹೇಳಿದ್ದರು. ಈ ರೀತಿ ಹೇಳುವ ಕುಮಾರಸ್ವಾಮಿಗೆ ನಾಚಿಕೆ ಆಗಬೇಕು ಎಂದು ಯತ್ನಾಳ್​ ಕಿಡಿಕಾರಿದರು. ನೀವು ಏಕೆ ರಾಜಕಾರಣಕ್ಕೆ ಸೇರಿದ್ರಿ? ನಿಮ್ಮದೇನಿತ್ತು ಮೂಲ? ನಿಮ್ಮ ತಂದೆಯವರು ವರ್ಕ್ ಇನ್ಸ್​ಪೆಕ್ಟರ್ ಇದ್ರು, ನಿಮಗೆ ಸಾವಿರಾರು ಕೋಟಿ ಹೇಗೆ ಬಂತು? […]

sadhu srinath

|

Feb 28, 2020 | 2:29 PM

ಚಿತ್ರದುರ್ಗ: ಹೆಚ್​.ಎಸ್​.ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಯತ್ನಾಳ್ ಹುಟ್ಟಿದ್ದರೋ ಇಲ್ಲವೋ ಎಂಬ ಕುಮಾರಸ್ವಾಮಿ ಪ್ರಶ್ನೆಗೆ ಶಾಸಕ ಬಸನಗೌಡ ಯತ್ನಾಳ್ ಮರುಪ್ರಶ್ನೆ ಹಾಕಿದ್ದಾರೆ. ಆ ಸಮಯದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹುಟ್ಟಿದ್ರಾ? ಯಾರು ಕೂಳಿಗೆ ಇಲ್ಲವೋ ಅವರು ಸೇನೆಗೆ ಸೇರ್ತಾರೆ ಎಂದು ಹೇಳಿದ್ದರು. ಈ ರೀತಿ ಹೇಳುವ ಕುಮಾರಸ್ವಾಮಿಗೆ ನಾಚಿಕೆ ಆಗಬೇಕು ಎಂದು ಯತ್ನಾಳ್​ ಕಿಡಿಕಾರಿದರು.

ನೀವು ಏಕೆ ರಾಜಕಾರಣಕ್ಕೆ ಸೇರಿದ್ರಿ? ನಿಮ್ಮದೇನಿತ್ತು ಮೂಲ? ನಿಮ್ಮ ತಂದೆಯವರು ವರ್ಕ್ ಇನ್ಸ್​ಪೆಕ್ಟರ್ ಇದ್ರು, ನಿಮಗೆ ಸಾವಿರಾರು ಕೋಟಿ ಹೇಗೆ ಬಂತು? ನನ್ನ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಎಲ್ಲಿದೆ? ನಿಮ್ಮ ತಂದೆಯವರೇನಾದ್ರು ಸ್ವಾತಂತ್ರ್ಯ ಸೈನಿಕರೇ? ಎಲ್ಲಾ ರಾಜಕಾರಣಿಗಳು ಅನ್ನಿಸಿಕೊಂಡು ಅಡ್ಜಸ್ಟ್​ಮೆಂಟ್​ ಇರಬಹುದು. ಆದ್ರೆ ಯತ್ನಾಳ್ ಜೊತೆ ಯಾರಿಗೂ ಅಡ್ಜಸ್ಟ್​ಮೆಂಟ್​ ಆಗಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರೇನು ಪಾಕಿಸ್ತಾನಕ್ಕೆ ಜೈ ಅಂದಿದ್ದಾರಾ? ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ್ದಾರೆ, ಅದರಲ್ಲೇನಿದೆ ತಪ್ಪು. ಅವರೇನು ಪಾಕಿಸ್ತಾನಕ್ಕೆ ಜೈ ಅಂದಿದ್ದಾರಾ? ನಮ್ಮ ದೇಶದ ಒಂದು ಭಾಗಕ್ಕೆ‌ ಜೈ ಅಂದಿದ್ದಾರೆ ಅಷ್ಟೆ. ಹುಬ್ಬಳ್ಳಿ, ಬೆಂಗಳೂರಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕುವಾಗ ಕನ್ನಡಪರ ಹೋರಾಟಗಾರರು ಎಲ್ಲಿ ಹೋಗಿದ್ರಿ ಎಂದು ಪ್ರಶ್ನಿಸಿದರು.

ಸತ್ಯಹರಿಶ್ಚಂದ್ರನ 19ನೇ ಸಂತತಿಯವರಂತೆ ಮಾತಾಡ್ತಾರೆ:ಯತ್ನಾಳ್ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರ ಇತಿಹಾಸ, ಎಷ್ಟು ಭೂ ಕಬಳಿಕೆ ಮಾಡಿದ್ದಾರೆ ಎಂದು ಎಲ್ಲವೂ ಗೊತ್ತಿದೆ. ಅವರು ಸಾಚಾ, ಸತ್ಯಹರಿಶ್ಚಂದ್ರನ 19ನೇ ಸಂತತಿಯವರಂತೆ ಮಾತನಾಡ್ತಾರೆ ಎಂದು ಯತ್ನಾಳ್ ತಿರುಗೇಟು ನೀಡಿದ್ದಾರೆ. ಗೋಡ್ಸೆ ಸಂತತಿಯ ಯತ್ನಾಳ್ ಸದನದಲ್ಲಿರಲು ನಾಲಾಯಕ್ ಎಂದು ರಮೇಶ್ ಕುಮಾರ್ ಹೇಳಿದ್ದರು.

ನನ್ನ ಮೇಲೆ ನೀರಾವರಿ ಹೋರಾಟದ 23 ಕೇಸುಗಳಿವೆ. ಆದ್ರೆ ಭೂ ಕಬಳಿಕೆ, ಅತ್ಯಾಚಾರ, ನಕಲಿ ನೋಟ್ ಮಾಡಿರುವ ಕೇಸ್​ಗಳಿಲ್ಲ. ಸಾವರ್ಕರ್ ಅಷ್ಟು ದೊರೆಸ್ವಾಮಿ ಲಾಠಿ ಏಟು ತಿಂದಿದ್ದಾರಾ? ಇವರು ಯಾವ ವಯಸ್ಸಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರಬಹುದು ಎಂದು ಮರು ವಾಗ್ದಾಳಿ ನಡೆಸಿದರು.

Follow us on

Related Stories

Most Read Stories

Click on your DTH Provider to Add TV9 Kannada