ವಂದೇಮಾತರಂ ಹೇಳುವಂತೆ ವಿಕ್ರಮ್‌ ಹೆಗ್ಡೆಗೆ ಒತ್ತಾಯ: ವಿಡಿಯೋ ಮಾಡಿದ್ದು ಇವರೇ

ಬೆಂಗಳೂರು: ನಗರದ ಫ್ರೀಡಂ ಪಾರ್ಕ್​ನಲ್ಲಿ ಪಾಕ್‌ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪದಲ್ಲಿ ಬಂಧನಕ್ಕೀಡಾಗಿರುವ ಅಮೂಲ್ಯಾ ಕುರಿತು ಮತ್ತೊಂದು ‘ವಿಡಿಯೋ ಸಾಕ್ಷ್ಯ’ ಲಭ್ಯವಾಗಿದೆ. ಮಂಗಳೂರು ಏರ್‌ಪೋರ್ಟ್‌ನಲ್ಲಿ ವಂದೇಮಾತರಂ ಹೇಳುವಂತೆ ಪೋಸ್ಟ್‌ ಕಾರ್ಡ್‌ ಸಂಪಾದಕ ವಿಕ್ರಮ್‌ ಹೆಗ್ಡೆಗೆ ಒತ್ತಾಯಿಸುವ ವಿಡಿಯೋ ಮಾಡಿದ್ದು ಇದೇ ಅಮೂಲ್ಯಾ ಎಂದು ತಿಳಿದುಬಂದಿದೆ. ಅರ್ನಾಬ್ ಗೋಸ್ವಾಮಿಗೆ ಫ್ಲೈಟ್​ನಲ್ಲಿ ಕುನಾಲ್ ಎಂಬಾತ ಪ್ರಶ್ನೆ ಕೇಳಿ ವಿಡಿಯೋ ಮಾಡಿದ್ದ. ಕುನಾಲ್ ಮಾಡಿದ್ದ ವಿಡಿಯೋ ಬಹಳ ವೈರಲ್ ಅಗಿತ್ತು. ಈ ವಿಡಿಯೋ ನೋಡಿದ ಅಮೂಲ್ಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ […]

ವಂದೇಮಾತರಂ ಹೇಳುವಂತೆ ವಿಕ್ರಮ್‌ ಹೆಗ್ಡೆಗೆ ಒತ್ತಾಯ: ವಿಡಿಯೋ ಮಾಡಿದ್ದು ಇವರೇ
Follow us
ಸಾಧು ಶ್ರೀನಾಥ್​
|

Updated on:Feb 28, 2020 | 1:54 PM

ಬೆಂಗಳೂರು: ನಗರದ ಫ್ರೀಡಂ ಪಾರ್ಕ್​ನಲ್ಲಿ ಪಾಕ್‌ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪದಲ್ಲಿ ಬಂಧನಕ್ಕೀಡಾಗಿರುವ ಅಮೂಲ್ಯಾ ಕುರಿತು ಮತ್ತೊಂದು ‘ವಿಡಿಯೋ ಸಾಕ್ಷ್ಯ’ ಲಭ್ಯವಾಗಿದೆ.

ಮಂಗಳೂರು ಏರ್‌ಪೋರ್ಟ್‌ನಲ್ಲಿ ವಂದೇಮಾತರಂ ಹೇಳುವಂತೆ ಪೋಸ್ಟ್‌ ಕಾರ್ಡ್‌ ಸಂಪಾದಕ ವಿಕ್ರಮ್‌ ಹೆಗ್ಡೆಗೆ ಒತ್ತಾಯಿಸುವ ವಿಡಿಯೋ ಮಾಡಿದ್ದು ಇದೇ ಅಮೂಲ್ಯಾ ಎಂದು ತಿಳಿದುಬಂದಿದೆ. ಅರ್ನಾಬ್ ಗೋಸ್ವಾಮಿಗೆ ಫ್ಲೈಟ್​ನಲ್ಲಿ ಕುನಾಲ್ ಎಂಬಾತ ಪ್ರಶ್ನೆ ಕೇಳಿ ವಿಡಿಯೋ ಮಾಡಿದ್ದ. ಕುನಾಲ್ ಮಾಡಿದ್ದ ವಿಡಿಯೋ ಬಹಳ ವೈರಲ್ ಅಗಿತ್ತು. ಈ ವಿಡಿಯೋ ನೋಡಿದ ಅಮೂಲ್ಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಳು. ವೈರಲ್ ಕ್ರೇಜ್​ನಿಂದ ಇದೇ ದಾರಿ ಹಿಡಿದ ಅಮೂಲ್ಯಾ ಬಂಧನಕ್ಕೂ 15 ದಿನ ಮುಂಜೆ ಮಂಗಳೂರು ಏರ್‌ಪೋರ್ಟ್‌ನಲ್ಲಿ ವಿಡಿಯೋ ಮಾಡಿ ಬಿಟ್ಟಿದ್ದಾಳೆ ಎನ್ನಲಾಗಿದೆ.

ವೈರಲ್ ಕ್ರೇಜ್​ನಿಂದ ಪ್ರಭಾವಿತರಾಗಿದ್ದ ಅಮೂಲ್ಯಾ & ಗ್ಯಾಂಗ್: ವೈರಲ್ ಆಗಬೇಕು ಎಂಬ ಹುಚ್ಚಿನಲ್ಲಿದ ಅಮೂಲ್ಯಾ ಮತ್ತು ಸ್ನೇಹಿತರು ಮಂಗಳೂರು ಏರ್‌ಪೋರ್ಟ್‌ನಲ್ಲಿ ಸಿಕ್ಕ ವಿಕ್ರಮ್ ಹೆಗ್ಡೆಗೆ ವಂದೇಮಾತರಂ ಹೇಳುವಂತೆ ಒತ್ತಾಯಿಸಿದ್ದರು. ನಜ್ಮಾ ನಜೀರ್, ಕವಿತಾ ರೆಡ್ಡಿ ಮತ್ತು ಅಮೂಲ್ಯಾ ಸೇರಿಕೊಂಡು ಚಿತ್ರಿಸಿರುವ ವಿಡಿಯೋ ಇದಾಗಿತ್ತು.

ರಾಷ್ಟ್ರದಲ್ಲಿರುವ ಮೀಸಲಾತಿ ಮತ್ತು ಪೌರತ್ವ ವಿಚಾರವಾಗಿ ಪ್ರಶ್ನಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ನಂತರ ಈ ವಿಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅರ್ನಾಬ್ ಗೋಸ್ವಾಮಿಗೆ ಮಾಡಿದ್ದ ವಿಡಿಯೋ ನೋಡಿಯೇ ಅಮೂಲ್ಯ & ಗ್ಯಾಂಗ್ ಹೀಗೆ ಮಾಡಿದ್ರು ಎನ್ನುವ ಅಂಶ ಬಯಲಾಗಿದೆ.

Published On - 12:27 pm, Fri, 28 February 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ