8 ವರ್ಷಗಳ ಹಿಂದೆ ನೈಲ್ ಕಟ್ಟರ್​​ ನುಂಗಿದ್ದ ವ್ಯಕ್ತಿ; ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಬೆಂಗಳೂರು ವೈದ್ಯರು

| Updated By: ಗಣಪತಿ ಶರ್ಮ

Updated on: Aug 19, 2023 | 7:04 PM

ಎಂಟು ವರ್ಷಗಳ ಹಿಂದೆ 40 ವರ್ಷದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ನೈಲ್ ಕಟ್ಟರ್ ನುಂಗಿದ್ದರು. ಇತ್ತೀಚಿನವರೆಗೂ, ಅವರಿಗೆ ಅದು ಗೊತ್ತಾಗಿರಲಿಲ್ಲ. ಆ ವಿಚಾರ ಮರೆತೇ ಹೋಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆ ವ್ಯಕ್ತಿಯು ಸ್ಥಳೀಯ ಕ್ಲಿನಿಕ್‌ಗೆ ಹೋಗಿ ವೈದ್ಯರ ಬಳಿ ಸಮಸ್ಯೆ ತೋಡಿಕೊಂಡಿದ್ದಾರೆ.

8 ವರ್ಷಗಳ ಹಿಂದೆ ನೈಲ್ ಕಟ್ಟರ್​​ ನುಂಗಿದ್ದ ವ್ಯಕ್ತಿ;  ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಬೆಂಗಳೂರು ವೈದ್ಯರು
ಸ್ಕ್ಯಾನಿಂಗ್ ವರದಿಯಲ್ಲಿ ವ್ಯಕ್ತಿಯ ಹೊಟ್ಟೆಯಲ್ಲಿ ನೈಲ್ ಕಟ್ಟರ್ ಪತ್ತೆಯಾಗಿರುವುದು
Follow us on

ಬೆಂಗಳೂರು: ಎಂಟು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಕುಡಿದ ಮತ್ತಿನಲ್ಲಿ ನುಂಗಿದ್ದ ನೈಲ್ ಕಟ್ಟರ್ (Nail Cutter) ಅನ್ನು ಬೆಂಗಳೂರಿನ ವೈದ್ಯರು ಲ್ಯಾಪ್ರೋಸ್ಕೋಪಿ (Laparoscopy) ಮೂಲಕ ಯಶಸ್ವಿಯಾಗಿ ಹೊಟ್ಟೆಯಿಂದ ಹೊರತೆಗೆದಿದ್ದಾರೆ. ಮಣಿಪಾಲ್ ಆಸ್ಪತ್ರೆ(Manipal Hospital) ವೈದ್ಯರ ತಂಡ ಶುಕ್ರವಾರ ಲ್ಯಾಪ್ರೋಸ್ಕೋಪಿ ನಡೆಸಿ ನೈಲ್ ಕಟ್ಟರ್ ಅನ್ನು ಹೊರತೆಗೆದಿದೆ.

ಎಂಟು ವರ್ಷಗಳ ಹಿಂದೆ 40 ವರ್ಷದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ನೈಲ್ ಕಟ್ಟರ್ ನುಂಗಿದ್ದರು. ಇತ್ತೀಚಿನವರೆಗೂ, ಅವರಿಗೆ ಅದು ಗೊತ್ತಾಗಿರಲಿಲ್ಲ. ಆ ವಿಚಾರ ಮರೆತೇ ಹೋಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆ ವ್ಯಕ್ತಿಯು ಸ್ಥಳೀಯ ಕ್ಲಿನಿಕ್‌ಗೆ ಹೋಗಿ ವೈದ್ಯರ ಬಳಿ ಸಮಸ್ಯೆ ತೋಡಿಕೊಂಡಿದ್ದಾರೆ. ಬಳಿಕ ವೈದ್ಯರು ಸ್ಕ್ಯಾನ್ ಮಾಡಲು ಶಿಫಾರಸು ಮಾಡಿದ್ದಾರೆ. ಹಾಗೆ ಸ್ಕ್ಯಾನಿಂಗ್ ಮಾಡಿಸಿದಾಗ ಹೊಟ್ಟೆಯಲ್ಲಿ ನೈಲ್ ಕಟ್ಟರ್ ಇರುವುದು ಗೊತ್ತಾಗಿದೆ.

ಬಳಿಕ ವ್ಯಕ್ತಿಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಲ್ಯಾಪ್ರೋಸ್ಕೋಪಿ ಮೂಲಕ ನೈಲ್ ಕಟ್ಟರ್ ಅನ್ನು ಹೊರತೆಗೆದಿದ್ದಾರೆ. ಡಾ ಲೋಹಿತ್ ಯು ನೇತೃತ್ವದ ವೈದ್ಯರ ತಂಡವು ಹೊಟ್ಟೆಯಿಂದ ವಸ್ತುವನ್ನು ಯಶಸ್ವಿಯಾಗಿ ಹೊರತೆಗೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜನಾಂಗೀಯ ನಿಂದನೆ; ‘ಚೀನೀ’ ಎಂದು ನಿಂದಿಸಿ ಸಿಕ್ಕಿಂ ಯುವಕನ ಮೇಲೆ ಹಲ್ಲೆ

ಸರ್ಜಾಪುರ ನಿವಾಸಿಯಾಗಿರುವ ರೋಗಿಯು ಸದ್ಯ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Sat, 19 August 23