ಬೆಂಗಳೂರಿನಲ್ಲಿ ಮತ್ತೆ ಸುದ್ದು ಮಾಡಲಿದೆ ಬುಲ್ಡೋಜರ್: ಒತ್ತುವರಿ ತೆರವು ಸಂಬಂಧ ನಾಳೆ ಮಹತ್ವದ ಸಭೆ
ಮುಖ್ಯಮಂತ್ರಿ, ಡಿಸಿಎಂ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಬೆಂಗಳೂರು ಜಿಲ್ಲಾಡಳಿತ, ನಗರದಲ್ಲಿ ನಡೆದಿರುವ ಒತ್ತುವರಿಗಳನ್ನು ತೆರವು ಮಾಡಲು ಮುಂದಾಗಿದ್ದು, ಈ ಸಂಬಂದ ನಾಳೆ (ಜೂನ್ 13) ಮಹತ್ವದ ಸಭೆ ಕರೆಯಲಾಗಿದೆ.

ಬೆಂಗಳೂರು: ಮುಖ್ಯಮಂತ್ರಿ, ಡಿಸಿಎಂ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಬೆಂಗಳೂರು (Bengaluru) ಜಿಲ್ಲಾಡಳಿತ, ನಗರದಲ್ಲಿ ನಡೆದಿರುವ ಒತ್ತುವರಿಗಳನ್ನು ತೆರವು ಮಾಡಲು ಮುಂದಾಗಿದ್ದು, ಈ ಸಂಬಂದ ನಾಳೆ (ಜೂನ್ 13) ಮಹತ್ವದ ಸಭೆ ಕರೆಯಲಾಗಿದೆ. ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿ ದಯಾನಂದ ನೇತೃತ್ವದಲ್ಲಿ ಬಿಬಿಎಂಪಿ ಎಸ್ಡಬ್ಲ್ಯುಡಿ ಇಂಜಿನಿಯರ್ಸ್, ಸರ್ವೆ ಅಧಿಕಾರಿ, ತಹಶೀಲ್ದಾರ್ ಅವರ ಸಭೆ ನಡೆಯಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ದಯಾನಂದ ಅವರು ಟಿವಿ9ಗೆ ಮಾಹಿತಿ ನೀಡಿದ್ದಾರೆ.
ನಾಳೆ ರಾಜಕಾಲುವೆ ಒತ್ತುವರಿ ತೆರುವು ಸಂಬಂಧ ಮಹತ್ವದ ಸಭೆ ನಡೆಯಲಿದ್ದು, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಎಸ್ಡಬ್ಲ್ಯುಡಿ ಇಂಜಿನಿಯರ್ಸ್, ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ, ಸರ್ವೇ ಆಫಿಸರ್ಸ್, ಬೆಂಗಳೂರು ನಗರ ತಹಸೀಲ್ದಾರ್ಸ್ ಸಭೆಯಲ್ಲಿರಲಿದ್ದಾರೆ. ಸರ್ವೇ ಕಾರ್ಯ ಮುಗಿದಿದ್ದು ಸದ್ಯದಲ್ಲೇ ಒತ್ತುವರಿ ಮಾರ್ಕಿಂಗ್ ಕಾರ್ಯ ಶುರುವಾಗಲಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಟಿ ರೌಂಡ್ ಹೊಡೆದಿದ್ದರು. ನಗರದ ವಿವಿಧ ಕಡೆಗಳಲ್ಲಿ ಮುಂಗಾರು ಪೂರ್ವ ಸಿದ್ಧತೆ ಹಾಗೂ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ್ದ ಅವರು, ರಾಜಕಾಲುವೆ, ಒಳಚರಂಡಿಗಳನ್ನು ಪರಿಶೀಲನೆ ನಡೆಸಿದ್ದೇನೆ. ಮಳೆ ನೀರಿನಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ ಎಂದಿದ್ದರು.
ಸುರಿದ ಭಾರೀ ಮಳೆಗೆ ಬೆಂಗಳೂರಿನಲ್ಲಿ ಜಲಪ್ರವಾಹ ಉಂಟಾಗಿತ್ತು. ಆ ಸಂದರ್ಭದಲ್ಲಿದ್ದ ಬಿಜೆಪಿ ಸರ್ಕಾರವು ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಂತೆ ಬಿಬಿಎಂಪಿಗೆ ಸೂಚಿಸಿತ್ತು. ಮಹಾ ಮಳೆಯ ನಂತರ ಸಂಭವಿಸಿದ ಜಲಪ್ರವಾಹವ ಮುಂದೆ ಸಂಭವಿಸಬಾರದು ಎಂಬ ಕಾರಣಕ್ಕೆ ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು ಬಿಬಿಎಂಪಿ ಆರಂಭಿಸಿತ್ತು. ಹಲವೆಡೆ ಬುಲ್ಡೋಜರ್ಗಳನ್ನು ನುಗ್ಗಿಸಿ ಒತ್ತವರಿ ತೆರವು ಮಾಡಿತ್ತು. ಇದೀಗ ಸ್ಥಗಿತಗೊಂಡಿದ್ದ ಒತ್ತುವತಿ ತೆರವು ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ