ಸಚಿವರು ಆರ್​ಎಸ್​ಎಸ್​ ಮುಂದೆ ಮಂಡಿಯೂರಿದ್ದು ಸರಿಯಲ್ಲ; ಸ್ವಪಕ್ಷದ ಸಚಿವರ ವಿರುದ್ಧ ಹರಿಹಾಯ್ದ ಹೆಚ್​.ವಿಶ್ವನಾಥ್

ಸಚಿವರು ಆರ್​ಎಸ್​ಎಸ್​ ಮುಂದೆ ಮಂಡಿಯೂರಿದ್ದು ಸರಿಯಲ್ಲ. ಪಠ್ಯ ಪರಿಷ್ಕರಣೆಗೆ RSS​ ಒಪ್ಪಿದೆ ಎಂದು ಹೇಳಿದ್ದು ಎಷ್ಟು ಸರಿ? ಇದೊಂದು ಸಂವಿಧಾನ ವಿರೋಧಿ ನಡವಳಿಕೆ ಎಂದು ಹೆಚ್​​ ವಿಶ್ವನಾಥ್​ ಹೇಳಿದ್ದಾರೆ.

ಸಚಿವರು ಆರ್​ಎಸ್​ಎಸ್​ ಮುಂದೆ ಮಂಡಿಯೂರಿದ್ದು ಸರಿಯಲ್ಲ; ಸ್ವಪಕ್ಷದ ಸಚಿವರ ವಿರುದ್ಧ ಹರಿಹಾಯ್ದ ಹೆಚ್​.ವಿಶ್ವನಾಥ್
ಹೆಚ್.ವಿಶ್ವನಾಥ್
Updated By: ವಿವೇಕ ಬಿರಾದಾರ

Updated on: Jun 08, 2022 | 4:28 PM

ಬೆಂಗಳೂರು: ಪಠ್ಯಪುಸ್ತಕ ವಿಷಯದಲ್ಲಿ ಮೂರೂ ಪಕ್ಷಗಳಿಂದ ರಾಜಕೀಯ ಮಾಡುತ್ತಿವೆ. 3 ಪಕ್ಷಗಳು ಅವರ ಪಕ್ಷದ ಪ್ರಣಾಳಿಕೆಯಂತೆ ಚರ್ಚೆ ನಡೆಸುತ್ತಾರೆ ಎಂದು ಬೆಂಗಳೂರಿನಲ್ಲಿ (Bengaluru) ಬಿಜೆಪಿ (BJP) ಎಂಎಲ್​ಸಿ  (MLC) ಹೆಚ್​.ವಿಶ್ವನಾಥ್ (H Vishwanath) ಹೇಳಿದ್ದಾರೆ. ಶಿಕ್ಷಣ ಅನ್ನೋದು ಪಕ್ಷಗಳ ಪ್ರಣಾಳಿಕೆ ಅಲ್ಲ. ರೋಹಿತ್ ಚಕ್ರತೀರ್ಥ ಕೊಟ್ಟಿರುವ ಪಠ್ಯಪುಸ್ತಕ ಪಕ್ಕಕ್ಕೆ ಇಡಿ. ಕೋಟ್ಯಂತರ ಹಣ ಖರ್ಚಾಗಿದೆ ಎಂದು ಇಂಥ ಪಾಠ ಹೇರಬೇಕಿಲ್ಲ. ಮಹನೀಯರನ್ನ ಗೇಲಿ ಮಾಡಿರುವ ಪುಸ್ತಕ ಮಕ್ಕಳು ಓದಬೇಕಾ? ಎಂದು  ಪ್ರಶ್ನಿಸಿದ್ದಾರೆ.

ಶಿಕ್ಷಣ ಬಹಳ ಮುಖ್ಯವಾಗಿದೆ. ಪ್ರಾಥಮಿಕ ಶಿಕ್ಷಣ ದೇಶವನ್ನ ಕಟ್ಟುವಂತದ್ದು.  ಯಾವ ನಾಡಿನಲ್ಲಿ, ಯಾವ ದೇಶದಲ್ಲಿ,ಯಾವ ರಾಜ್ಯದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ಹಾಳಗುತ್ತೋ ಆ ದೇಶ, ಆ ರಾಜ್ಯ ಹಾಳಗುತ್ತದೆ. ಎಲ್ಲಾರು ಸೇರಿ ಹಾಳು ಮಾಡುತ್ತಿದ್ದೇವೆ. ಮೂರು ರಾಜಕೀಯ ಪಕ್ಷಗಳು ಅವರ ಪಾರ್ಟಿಯ ಮ್ಯಾನಿಫೆಸ್ಟ್ ತರ ಚರ್ಚೆ ಮಾಡುತ್ತಾರೆ.  ಇದು ಯಾವುದೇ ರಾಜಕೀಯ ಪಕ್ಷಗಳ ಮ್ಯಾನಿಫ್ಯಾಸ್ಟೋ ಅಲ್ಲ, ಈ ನಾಡಿನ ಅಕ್ಷರ ಸಂಸ್ಕೃತಿಯಾಗಿದೆ. ರಾಜಕಾರಿಣಿಗಳು ಸೀಮಾರೇಖೆ ದಾಟಿದ್ದೇವೆ. ಓಯ್ ಗಂಡಸ್ಥನದಾ. ನಪಂಸಕ, ಧಮ್ ಇದ್ಯಾ. ನಾವು ಇಂತವರನ್ನ ಕಟ್ಟಿಕೊಂಡು ಯಾವ ಶಿಕ್ಷಣ ಮಾಡುವುದು ಒಂದು ಅರ್ಥ ಆಗ್ತಿಲ್ಲ ಎಂದು ಬೇಸರ ವ್ಯಕ್ತಪಡಿದ್ದಾರೆ.

ಇದನ್ನು ಓದಿ: ರಾಜ್ಯಸಭೆ ಚುನಾವಣೆ : ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ

ಕರ್ನಾಟಕ ರಾಜ್ಯದ ವಿಭೂತಿ ಪುರುಷರು ಎನಿಸಿಕೊಂಡಿವರು, ಕರ್ನಾಟಕ ಕಟ್ಟಿದ ಪುರುಷರನ್ನ ಗೆಲಿ ಮಾಡಿರುವ ಪುಸ್ತಕ ವನ್ನ ನಮ್ಮ ಮಕ್ಕಳು ಓದಬೇಕಾ? ಅಂಬೇಡ್ಕರ್ ರವರ ಸಂವಿಧಾನ ಬರೆದುಕೊಟ್ಟವರು ಇದನ್ನ ಯಾರ ಗವರ್ನಮೆಂಟ್ ಅಂತಿವೆ. ಬೊಮ್ಮಯಿ ಸರ್ಕಾರ, ಸಿದ್ದರಾಮಯ್ಯ, ಯಡಿಯೂರಪ್ಪ ಮುಖ್ಯಸ್ಥರು ಯಾರು ಎನ್ನುವುದು ಮುಖ್ಯ. ಬೇಕಾದಷ್ಟು ಸಬ್ ಕಮಿಟಿ ಇದೆ. ಎಲ್ಲಾದಕ್ಕೂ ನಾಯಕತ್ವ ವಹಿಸಿದ್ದು ಅಂಬೇಡ್ಕರ್. ವಿಧಾನ ಚೌಕಟ್ಟಿನಲ್ಲಿ ದೇಶ ನಡೆಯುತ್ತಿದೆ. ಸಂವಿಧಾನ ಬರೆದ ಅಂಬೇಡ್ಕರ್ ರವರನ್ನ ಓ ಇದ್ರು ಅವರು ಎಲ್ಲೋ ಇದ್ರು ಅಲ್ಲಿ, ರಾಯರು ಇದ್ರು ಎನ್ನುವುದು ತಪ್ಪು. ಒಟ್ಟಾರೆಯಾಗಿ ಸರ್ಕಾರದ ತಪ್ಪು. ಕಮಿಟಿ ಮಾಡಿದ್ದು ಸುರೆಶ್ ಕುಮಾರ್ ಯಾಕೆ ಸುರೇಶ್ ಕುಮಾರ್ ಮಾತ್ನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ರಾಜ್ಯದಲ್ಲಿ ಎಲ್ಲಾ ರೀತಿಯ ವಿವಾದಗಳು ಬಗೆಹರಿದಿವೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ: ಆರಗ ಜ್ಞಾನೇಂದ್ರ

ಪಠ್ಯ ಪುಸ್ತಕ ಪರಿಷ್ಕರಣೆ ಪ್ರಜಾಪ್ರಭುತ್ವೀಕರಣ ಆಗಬೇಕು. ಪಠ್ಯ ಪುಸ್ತಕ ಕೇಸರೀಕರಣ ಆಗಬಾರದು. ಸಚಿವರು ಆರ್​ಎಸ್​ಎಸ್​ ಮುಂದೆ ಮಂಡಿಯೂರಿದ್ದು ಸರಿಯಲ್ಲ. ಪಠ್ಯ ಪರಿಷ್ಕರಣೆಗೆ RSS​ ಒಪ್ಪಿದೆ ಎಂದು ಹೇಳಿದ್ದು ಎಷ್ಟು ಸರಿ?
ಇದೊಂದು ಸಂವಿಧಾನ ವಿರೋಧಿ ನಡವಳಿಕೆ. ಆರ್​ಎಸ್​ಎಸ್​ ಬಗ್ಗೆ ನನಗೆ ಗೌರವ ಇದೆ. ಹಾಗಂತ ಪಠ್ಯಪುಸ್ತಕ ಕೇಸರೀಕರಣ ಮಾಡುವುದು ಸರಿಯಲ್ಲ. ಒಂದು ಪ್ರಜಾಪ್ರಭುತ್ವದ ಸರ್ಕಾರದ ಸಚಿವರು ಯಾವುದೋ ಸ್ವಾಮೀಜಿ ಮುಂದೆ,ಆರ್ ಎಸ್ ಎಸ್ ಅಥವಾ ಸಂಘ ಪರಿವಾರದ ಮುಂದೆ ಮಂಡಿಯೂರಿ ಕುಳಿತುಕೊಳ್ಳುವುದು ಸಂವಿಧಾನಕ್ಕೆ ವಿರೋಧಿಯದ ನಡವಳಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:28 pm, Wed, 8 June 22