ಬೆಂಗಳೂರು: ಕಳೆದ 1 ವಾರದಿಂದ ಕರ್ನಾಟಕದಲ್ಲಿ ಕೊರೋನಾ ಸೋಂಕು (coronavirus) ಹೆಚ್ಚಳವಾಗಿದೆ. ಇದರಿಂದ ಜನರಲ್ಲಿ ಆತಂಕ ಶುರುವಾಗಿದೆ. ಇನ್ನು ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Dr K Sudhakar), ಹೆಚ್3ಎನ್2 ಬಗ್ಗೆ ನಿಗಾವಹಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಈ ಸಂಬಂಧ ನಾಳೆ (ಮಾ.06) ಅಧಿಕಾರಿಗಳು, ತಜ್ಞರ ಜತೆ ಸಭೆ ನಡೆಸಲಾಗುತ್ತೆ. ರೋಗ ಲಕ್ಷಣದಿಂದಾಗಿ ಕೆಮ್ಮು ಉಂಟಾಗಿರುವ ಮಾಹಿತಿ ಇದೆ. ಸೋಂಕು ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಂದು(ಮಾರ್ಚ್ 05) ವಿಧಾನಸೌಧ ಆವರಣದಲ್ಲಿ ಸುಧಾಕರ್ ಸೈಕಲ್ ಜಾಥಾಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಹೆಚ್3ಎನ್2 ಬಗ್ಗೆ ನಿಗಾವಹಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದ್ದು, ಈ ಸಂಬಂಧ ನಾಳೆ ಅಧಿಕಾರಿಗಳು, ತಜ್ಞರ ಜತೆ ಸಭೆ ನಡೆಸಲಾಗುತ್ತೆ. ರಾಜ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ ಚರ್ಚಿಸಿ ನಾಳಿನ ಸಭೆಯ ಎಲ್ಲಾ ಮಾಹಿತಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕೊರೋನಾ ಪ್ರಕರಣಗಳಲ್ಲಿ ದಿನದಿಂದ ದಿನ ಏರಿಕೆ ಕಂಡುಬರುತ್ತಿದೆ. ನಿನ್ನೆ(ಮಾರ್ಚ್ 04) ರಾಜ್ಯದಲ್ಲಿ 95 ಹಾಗೂ ಬೆಂಗಳೂರಿನಲ್ಲಿ 79 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. 100 ದಿನಗಳ ನಂತರ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಕೊನಾರೋನಾ ಪ್ರಕರಣ ಹೆಚ್ಚಳವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಒಟ್ಟು 391 ಸಕ್ರಿಯ ಪ್ರಕರಣಗಳು ಇದ್ದು, ವಾರದಲ್ಲಿ ಕೋವಿಡ್ ಖಚತ ಪ್ರಕರಣ ಶೇಕಡವಾರು ಪ್ರಮಾಣ 2.44ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
Published On - 10:04 am, Sun, 5 March 23