ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ರೌಡಿಗಳ ಅಟ್ಟಹಾಸ; ಲಾಂಗ್​ನಿಂದ ಮನೆ ಬಳಿ ನಿಲ್ಲಿಸಿದ್ದ ಕಾರು, ಇನ್ನಿತರ ವಾಹನಗಳ ಗಾಜು ಪುಡಿ

| Updated By: preethi shettigar

Updated on: Dec 11, 2021 | 12:24 PM

ಮನೆ ಮುಂದೆ ಹಾಗೂ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ಜಖಂ ಆಗಿದೆ. ಆರು ವಾಹನಗಳ ಮೇಲೆ ದುಷ್ಕರ್ಮಿಗಳು ತಮ್ಮ ಅಟ್ಟಹಾಸ ತೋರಿದ್ದು, ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ರೌಡಿಗಳ ಅಟ್ಟಹಾಸ; ಲಾಂಗ್​ನಿಂದ ಮನೆ ಬಳಿ ನಿಲ್ಲಿಸಿದ್ದ ಕಾರು, ಇನ್ನಿತರ ವಾಹನಗಳ ಗಾಜು ಪುಡಿ
ಮನೆ ಮುಂದೆ ಹಾಗೂ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ಜಖಂ
Follow us on

ಬೆಂಗಳೂರು: ಮನೆ ಬಳಿ ನಿಲ್ಲಿಸಿದ್ದ ಕಾರು ಮತ್ತು ಇನ್ನಿತರ ವಾಹನಗಳ ಗಾಜು ಒಡೆದು ರೌಡಿಗಳು ವಿಕೃತಿ ಮೆರೆದ ಘಟನೆ ಬೆಂಗಳೂರು ನಗರದ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ನಡೆದಿದೆ. ದೊಣ್ಣೆ ಹಾಗೂ ಲಾಂಗ್‌ನಿಂದ ಪುಡಿರೌಡಿಗಳು ವಾಹನಗಳ ಗಾಜುಗಳನ್ನು ಒಡೆದಿದ್ದಾರೆ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ (Police station) ಈ ಸಂಬಂಧ ಪ್ರಕರಣ ದಾಖಲಾಗಿದೆ. ಸದ್ಯ ಮನೆ ಮುಂದೆ ಹಾಗೂ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ಜಖಂ ಆಗಿದೆ. ಆರು ವಾಹನಗಳ ಮೇಲೆ ದುಷ್ಕರ್ಮಿಗಳು ತಮ್ಮ ಅಟ್ಟಹಾಸ ತೋರಿದ್ದು, ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು: ಹೆಂಡತಿಯನ್ನು ಚುಡಾಯಿಸಿದ ಆರೋಪ, ವ್ಯಕ್ತಿ ಮೇಲೆ ಹಲ್ಲೆ
ಹೆಂಡತಿಯನ್ನು ಚುಡಾಯಿಸಿದ ಆರೋಪ ಕೇಳಿಬಂದಿದ್ದು, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದೆ. ವಾಸು ಎಂಬುವವರು ಸೆಕ್ಯೂರಿಟಿ ಗಾರ್ಡ್ ಯತೀಶ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯತೀಶ್ ಮತ್ತು ವಾಸು ಇಬ್ಬರು ದೂರು ನೀಡಿದ್ದಾರೆ. ವಾಸು ಹಲ್ಲೆ ಮಾಡಿರುವುದಾಗಿ ಯತೀಶ್ ದೂರು ನೀಡಿದ್ದು, ತನ್ನ ಹೆಂಡತಿಯನ್ನು ಚುಡಾಯಿಸಿದ್ದಾಗಿ ವಾಸು ದೂರು ನೀಡಿದ್ದಾರೆ. ಈ ಪ್ರಕರಣ ಬೆಂಗಳೂರಿನ ಕೆಂಪೇಗೌಡನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮಧ್ಯರಾತ್ರಿ ವೇಳೆ ವಾಟ್ಸಾಪ್​ ಕರೆ ಮಾಡಿ ಅಶ್ಲೀಲ ಸಂದೇಶಗಳ ಮುಖಾಂತರ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ ವಾಸು ಯತೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಯತೀಶ್ ಹಲ್ಲೆ ಬಳಿಕ ನಾಪತ್ತೆಯಾಗಿದ್ದರು. ವ್ಯಕ್ತಿ ಕಾಣೆಯಾದ ಪ್ರಕರಣದ ತನಿಖೆ ಕೈಗೊಂಡಾಗ ಹಲ್ಲೆ ಹಾಗೂ ಕಿರುಕುಳ ಕೇಸ್ ಬಯಲಾಗಿದೆ. ಯತೀಶ್ ಎರಡು ದಿನ ಧರ್ಮಸ್ಥಳ, ಕುಕ್ಕೆ ದೇವಸ್ಥಾನಗಳಿಗೆ ತೆರಳಿದ್ದರು. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು.

ಯತೀಶ್ ಎರಡು ದಿನ ಆದರೂ ಪತ್ತೆಯಾಗದ ಹಿನ್ನೆಲೆ ಯೋಗ ಕೇಂದ್ರದವರು ಕೆಂಪೇಗೌಡ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಯತೀಶ್ ಪತ್ತೆಯಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:
ಚನ್ನರಾಯಪಟ್ಟಣದಲ್ಲೊಂದು ಅಮಾನವೀಯ ಘಟನೆ: ಅನಾರೋಗ್ಯ ಪೀಡಿತ ಮಹಿಳೆ ಮೇಲೆ ಪೂಜೆ ನೆಪದಲ್ಲಿ ಹಲ್ಲೆ, ಸಾವು

ಮಾರಕಾಸ್ತ್ರ ಹಿಡಿದು ಹಲ್ಲೆಗೆ ಸಿದ್ದವಿದ್ದ ದುಷ್ಕರ್ಮಿಗಳು, ಸಿನಿಮೀಯ ರೀತಿಯಲ್ಲಿ ಜೀವ ಉಳಿಸಿಕೊಂಡ ರೌಡಿಶೀಟರ್ ಜೆಸಿಬಿ ನಾರಾಯಣ

Published On - 12:19 pm, Sat, 11 December 21