ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪ್ರಿಯಕರನಿಗೆ ನೀಡಿದ ಆರೋಪ; ಮಗಳ ವಿರುದ್ಧ ದೂರು ನೀಡಿದ ತಾಯಿ

ಮದನ್​ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ದೀಪ್ತಿ ಇದೇ ಶಾಲೆಯಲ್ಲಿ ಡ್ರೈವಿಂಗ್ ಕಲಿಯಲು ಹೋಗಿದ್ದಳು. ಪ್ರಿಯತಮನಿಗಾಗಿ ತಾಯಿಯ 1 ಕೆಜಿ ಬಂಗಾರವನ್ನು ನೀಡಿ, ಅದೇ ಜಾಗದಲ್ಲಿ ರೋಲ್ಡ್ ಗೋಲ್ಡ್ ಚಿನ್ನ ತಂದು ಇರಿಸಿದ್ದಾಳಂತೆ.

ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪ್ರಿಯಕರನಿಗೆ ನೀಡಿದ ಆರೋಪ; ಮಗಳ ವಿರುದ್ಧ ದೂರು ನೀಡಿದ ತಾಯಿ
ಬಂಧಿತ ಆರೋಪಿ ಮದನ್
Updated By: ಗಂಗಾಧರ​ ಬ. ಸಾಬೋಜಿ

Updated on: May 17, 2022 | 9:41 AM

ಬೆಂಗಳೂರು: ತನ್ನ ಮನೆಯಲ್ಲಿದ್ದ ಚಿನ್ನಾಭರಣವನ್ನು (Jewellery) ಕದ್ದು ಪ್ರಿಯಕರನಿಗೆ ನೀಡಿದ್ದಾಳೆ ಎಂದು ಆರೋಪಿಸಿ ತಾಯಿ (Mother) ಮಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ತಾಯಿ ದೂರು ನೀಡಿದ್ದು, ಆರೋಪಿ ಮಗಳಾದ ದೀಪ್ತಿ(24) ಮತ್ತು ಆಕೆಯ ಪ್ರಿಯತಮ ಮದನ್(27)ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಜಕ್ಕೂರು ಲೇಔಟ್ ನಿವಾಸಿಯಾಗಿರುವ ದೀಪ್ತಿ, ವಿವಾಹ ವಿಚ್ಛೇದನ ನಂತರ ತಾಯಿ ಜತೆ ವಾಸವಾಗಿದ್ದಳು. ಡ್ರೈವಿಂಗ್ ಸ್ಕೂಲ್ ಡ್ರೈವರ್ ಮದನ್ನ ಪ್ರೀತಿಸುತ್ತಿದ್ದಾಳಂತೆ.

ಮದನ್​ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ದೀಪ್ತಿ ಇದೇ ಶಾಲೆಯಲ್ಲಿ ಡ್ರೈವಿಂಗ್ ಕಲಿಯಲು ಹೋಗಿದ್ದಳು. ಪ್ರಿಯತಮನಿಗಾಗಿ ತಾಯಿಯ 1 ಕೆಜಿ ಬಂಗಾರವನ್ನು ನೀಡಿ, ಅದೇ ಜಾಗದಲ್ಲಿ ರೋಲ್ಡ್ ಗೋಲ್ಡ್ ಚಿನ್ನ ತಂದು ಇರಿಸಿದ್ದಾಳಂತೆ. ಚಿನ್ನಾಭರಣದಲ್ಲಿ ವ್ಯತ್ಯಾಸ ಕಂಡು ತಾಯಿ ಮಗಳನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಗಳ ಮೇಲೆ ಅನುಮಾನದಿಂದ ತಾಯಿ ಠಾಣೆಗೆ ದೂರು ನೀಡಿದ್ದರು.

ಪೊಲೀಸರ ವಿಚಾರಣೆ ವೇಳೆ ಮಗಳ ಕೈಚಳಕ ಬಯಲಾಗಿತ್ತು. ಕದ್ದ ಚಿನ್ನಾಭರಣ ಅಡಮಾನ ಇಟ್ಟು ಮೋಜು ಮಸ್ತಿ ಮಾಡಿದ್ದರು. ಸದ್ಯ ಅಮೃತಹಳ್ಳಿ ಪೊಲೀಸರು ಕಳುವಾಗಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ಧಾರವಾಡದಲ್ಲಿ ಮದ್ಯದಂಗಡಿಗೆ ಕನ್ನ:
ಧಾರವಾಡ: ವಿದ್ಯಾಗಿರಿ ಬಡಾವಣೆಯಲ್ಲಿನ ಅಂಗಡಿಯೊಂದರಲ್ಲಿ ಶಟರ್ ಮುರಿದು ಒಳನುಗ್ಗಿ ಮದ್ಯ ಕದ್ದಿದ್ದಾರೆ. ಗ್ಯಾನ್ ಬಾ ಎಂಆರ್‌ಪಿ ಲಿಕ್ಕರ್ ಶಾಪ್‌ನಲ್ಲಿ ಕಳ್ಳತನ ನಡೆದಿದೆ. ಈ ಅಂಗಡಿ ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆಯಲ್ಲಿದೆ. ನಿನ್ನೆ ಬೆಳಗಿನ ಜಾವ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂದಾಜು 50 ಸಾವಿರ ರೂ. ಮೌಲ್ಯದ ಮದ್ಯ ಕಳ್ಳತನವಾಗಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:57 am, Tue, 17 May 22