ಸಂಡೇ ಮಂಡೇ ಲಾಯರ್, ನಿಮ್ಮಿಂದ ಕಾನೂನಿನ ಪಾಠ ಅಗತ್ಯವಿಲ್ಲ; ಸಿದ್ದರಾಮಯ್ಯ ವಿರುದ್ಧ ಶಾಸಕ ಬೋಪಯ್ಯ ವಾಗ್ದಾಳಿ
ಬಂದೂಕು ಹಿಡಿದು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ ಅಥವಾ ಭಯೋತ್ಪಾದಕರಾದ ಉದಾಹರಣೆಯಿಲ್ಲ. ಬಡಮಕ್ಕಳ ಕೈಗೆ ಬಂದೂಕು ನೀಡಿ ಕಾಡಿಗೆ ಕಳಿಸಿ ರಕ್ತ ಹರಿಸಿಲ್ಲ ಅಂತನೂ ಟ್ವೀಟ್ನಲ್ಲಿ ಶಾಸಕ ಬೋಪಯ್ಯ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು: ಮತಾಂಧರ ಓಲೈಕೆಯನ್ನ ಬಂಡವಾಳ ಮಾಡಿಕೊಂಡು ಬಂದಿದ್ದೀರಾ. ನಿಮ್ಮಿಂದ ನಾವು ಸಂವಿಧಾನದ ಪಾಠ ಕಲಿಯಬೇಕಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ವಿರಾಜಪೇಟೆ ಶಾಸಕ ಬೋಪಯ್ಯ (Bopaiah) ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಸಂಡೇ ಮಂಡೇ ಲಾಯರ್ ಎಂದು ಟ್ವೀಟ್ ಮಾಡಿರುವ ಬೋಪಾಯ್ಯ, ನಿಮ್ಮಿಂದ ಕಾನೂನಿನ ಪಾಠ ಅಗತ್ಯವಿಲ್ಲ. ಬಡ ರೈತರ ಕೊಟ್ಟಿಗೆಗಳಿಗೆ ನುಗ್ಗಿ ಬೆದರಿಸಿ ಗೋವುಗಳನ್ನು ಕದ್ದಿಲ್ಲ. ತಲವಾರು, ಬಂದೂಕು ಹಿಡಿದು ಬಲವಂತದ ಮತಾಂತರ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂದೂಕು ಹಿಡಿದು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ ಅಥವಾ ಭಯೋತ್ಪಾದಕರಾದ ಉದಾಹರಣೆಯಿಲ್ಲ. ಬಡಮಕ್ಕಳ ಕೈಗೆ ಬಂದೂಕು ನೀಡಿ ಕಾಡಿಗೆ ಕಳಿಸಿ ರಕ್ತ ಹರಿಸಿಲ್ಲ ಅಂತನೂ ಟ್ವೀಟ್ನಲ್ಲಿ ಶಾಸಕ ಬೋಪಯ್ಯ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಏಕವಚನದಲ್ಲಿ ವಾಗ್ದಾಳಿ ನಡೆಸಿದ ಬೋಪಯ್ಯ: ಪೊನ್ನಂಪೇಟೆಯಲ್ಲಿ ತ್ರಿಶೂಲ ದೀಕ್ಷೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬೋಪಯ್ಯ, ತ್ರಿಶೂಲ ಅಭ್ಯಾಸ ಮಾಡಬಾರದೆಂದು ಎಲ್ಲೂ ನಿರ್ಬಂಧವಿಲ್ಲ. ಎಸ್ಡಿಪಿಐ ಸದಸ್ಯರು ಹಾದಿ, ಬೀದಿಯಲ್ಲಿ ಹೋಗುವವರು. ಅವರ ಬಗ್ಗೆ ನಾನು ಹೇಳಿಕೆ ನೀಡುವುದಿಲ್ಲ. ಎಸ್ಡಿಪಿಐ, ಪಿಎಫ್ಐ ದೇಶಕ್ಕೆ ಮಾರಕ, ಅವುಗಳನ್ನ ಬ್ಯಾನ್ ಮಾಡಬೇಕು. ಸಿದ್ದರಾಮಯ್ಯ ಅವರ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಗನ್ ಹಿಡಿಯುವುದು ನಮ್ಮ ಜನ್ಮಸಿದ್ಧ ಹಕ್ಕು. ಇವನ್ಯಾರು ಕೇಳುವುದಕ್ಕೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ದಿನಾ ಬೆಳಗೆದ್ದು ಮುಸ್ಲಿಂರ ಪರ ಏನು ಹೇಳಿಕೆ ಕೊಡಲಿ ಎಂದು ಯೋಚಿಸುವುದೇ ಸಿದ್ದರಾಮಯ್ಯ ದಿನಚರಿ. ಸಂವಿಧಾನದ ಆಶಗಳ ಬಗ್ಗೆ ನಮಗೆ ಪಾಠ ಮಾಡಬೇಡಿ. ಇವರ ಆಡಳಿತದಲ್ಲಿ ಮುಸ್ಲಿಂ ಗೂಂಡಾಗಳ ಕೇಸ್ ಹಿಂಪಡೆದಿದ್ದಾರೆ. ಕೆಜೆ ಹಳ್ಳಿ, ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದಾರೆ. ಪೊನ್ನಂಪೇಟೆ ಶಿಬಿರದಲ್ಲಿ ಏರ್‌ಗನ್ ತರಬೇತಿ ಪಡೆದಿದ್ದಾರೆ. ಅದಕ್ಕೆ ಯಾವುದೇ ಲೈಸೆನ್ಸ್ ಬೇಕಾಗಿಲ್ಲ. ಸ್ವಯಂ ರಕ್ಷಣೆಗೆ ಬಂದೂಕು ತರಬೇತಿ ಅಗತ್ಯವಿದೆ. ಅಲ್ಪಸಂಖ್ಯಾತರ ಓಲೈಕೆಗೆ ಬಾಯಿಗೆ ಬಂದ ಹೇಳಿಕೆ ನೀಡಬೇಡಿ. ವಿರೋಧ ಪಕ್ಷದ ನಾಯಕನಾಗಿ ತೂಕದ ಹೇಳಿಕೆ ನೀಡಲಿ ಎಂದು ಬೋಪಯ್ಯ ಹೇಳಿಕೆ ನೀಡಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:22 am, Tue, 17 May 22