ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಒಂದು ರೀತಿ ದಸರಾ ಅಂಬಾರಿ ಆನೆ ತರಹ ಎಂದು ಯಶವಂತಪುರ ಕ್ಷೇತ್ರದ ಕಗ್ಗಲಿಪುರದಲ್ಲಿ ಅನರ್ಹ ಶಾಸಕ ಮುನಿರತ್ನ ಜೆಡಿಎಸ್ ಅಭ್ಯರ್ಥಿಯನ್ನು ದಸರಾ ಆನೆಗೆ ಹೋಲಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಒಂದು ರೀತಿ ದಸರಾ ಅಂಬಾರಿ ಆನೆ ತರಹ, ವರ್ಷಕ್ಕೊಮ್ಮೆ ದಸರಾ ಅಂಬಾರಿ ಆನೆ ಹೇಗೆ ಬರುತ್ತೋ ಹಾಗೆ ಚುನಾವಣಾ ಸಮಯದಲ್ಲಿ ಜೆಡಿಎಸ್ ಅಭ್ಯರ್ಥಿ ಬರುತ್ತಾರೆ. ಜವರಾಯಿಗೌಡ ಅವರನ್ನು ಐದು ವರ್ಷಕ್ಕೊಮ್ಮೆ ಕರೆದುಕೊಂಡು ಬರ್ತಾರೆ. ಚಿಹ್ನೆ ಕೊಡೋದು, ರೌಂಡ್ ಹೊಡೆಸೋದು, ಮತ್ತೆ ಕಾಡಿಗೆ ಬಿಡೋದು ಮಾಡ್ತಾರೆ.
ಸೋಮಶೇಖರ್ 5 ವರ್ಷದಲ್ಲಿ 25 ವರ್ಷದಷ್ಟು ಕೆಲ್ಸ:
ಮೆರವಣಿಗೆ ಮಾಡಿದವರಿಗೆಲ್ಲಾ ಜನ ಮತ ಹಾಕಲ್ಲ. ಆದರೆ ಎಸ್.ಟಿ. ಸೋಮಶೇಖರ್ 5 ವರ್ಷದಲ್ಲಿ 25 ವರ್ಷಗಳಷ್ಟು ಕೆಲಸ ಮಾಡಿದ್ದಾರೆ. ಈ ಬಾರಿ ಅವರು ಗೆದ್ದೇ ಗೆಲ್ಲುತ್ತಾರೆ, ಶಾಸಕರೂ ಆಗಿ ಸಚಿವರಾಗುತ್ತಾರೆ ಎಂದು ಹೇಳಿದರು.
Published On - 1:26 pm, Fri, 22 November 19