ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​​​ನ್ಯೂಸ್​​: ಪಿಂಕ್ ಲೈನ್ 2026ರ ವೇಳೆಗೆ ಕಾರ್ಯಾರಂಭ? ಇಲ್ಲಿದೆ ನೋಡಿ ನಿಲ್ದಾಣಗಳ ಪಟ್ಟಿ

ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ 2026ರ ಮೇ ತಿಂಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಕಲೇನಾ ಅಗ್ರಹಾರದಿಂದ ನಾಗವಾರದವರೆಗಿನ 21 ಕಿಮೀ ಉದ್ದದ ಈ ಮಾರ್ಗ ನಗರದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಇದು ಎತ್ತರದ ಮತ್ತು ಭೂಗತ ಮಾರ್ಗಗಳನ್ನು ಹೊಂದಿದ್ದು, ಜಯದೇವ, ಎಂಜಿ ರಸ್ತೆ ಸೇರಿದಂತೆ ಹಲವು ಇಂಟರ್‌ಚೇಂಜ್ ನಿಲ್ದಾಣಗಳ ಮೂಲಕ ಪ್ರಯಾಣಿಕರಿಗೆ ಸುಲಭ ಸಂಚಾರ ಒದಗಿಸಲಿದೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​​​ನ್ಯೂಸ್​​: ಪಿಂಕ್ ಲೈನ್ 2026ರ ವೇಳೆಗೆ ಕಾರ್ಯಾರಂಭ? ಇಲ್ಲಿದೆ ನೋಡಿ ನಿಲ್ದಾಣಗಳ ಪಟ್ಟಿ
ಸಾಂದರ್ಭಿಕ ಚಿತ್ರ

Updated on: Oct 20, 2025 | 12:24 PM

ಬೆಂಗಳೂರು, ಅ.20: ಬೆಂಗಳೂರು ಮೆಟ್ರೋ (Bengaluru Metro) ಪ್ರಯಾಣಿಕರಿಗೆ ಒಂದು ಸಿಹಿಸುದ್ದಿ, ಕಲೇನಾ ಅಗ್ರಹಾರ ಮತ್ತು ನಾಗವಾರವನ್ನು ಸಂಪರ್ಕಿಸುವ ಬಹುನಿರೀಕ್ಷಿತ ನಮ್ಮ ಮೆಟ್ರೋದ 21 ಕಿಮೀ ಪಿಂಕ್ ಲೈನ್, (Pink Line Ready) ಮೇ 2026 ರ ವೇಳೆಗೆ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ನಡೆಯುತ್ತಿರುವ ನಿರ್ಮಾಣ ಕಾರ್ಯವು ಮುಂದಿನ ವರ್ಷ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ನಗರದ ಇತರ ಮೆಟ್ರೋ ಮಾರ್ಗಗಳ ಅಭಿವೃದ್ಧಿಯಲ್ಲಿ ಹಲವಾರು ವಿಳಂಬ ಕಂಡುಬಂದಿದ್ದು, ಇದು ಬೆಂಗಳೂರಿನ ಪ್ರಯಾಣಿಕರನ್ನು ನಿರಾಶೆ ಮಾಡಿತ್ತು. ಬೆಂಗಳೂರು ಮಿರರ್ ವರದಿಯ ಪ್ರಕಾರ, ಎಲೆಕ್ಟ್ರಾನಿಕ್ಸ್ ಸಿಟಿಗೆ ಹಳದಿ ಬಣ್ಣದ ಮಾರ್ಗವು ಎರಡು ವರ್ಷಗಳಿಗೂ ಹೆಚ್ಚು ವಿಳಂಬವಾಗಿತು. ಇನ್ನು ಹಸಿರು ಬಣ್ಣ ಮಾರ್ಗ ನಿರ್ಮಾಣಕ್ಕೆ ಐದು ವರ್ಷ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ. ಆದರೆ ಪಿಂಕ್ ಲೈನ್​​ನ ಕಾರ್ಯಗಳು ವೇಗವಾಗಿ ನಡೆಯುತ್ತಿದೆ.

ಪಿಂಕ್ ಲೈನ್ ಕಲೇನಾ ಅಗ್ರಹಾರ ಮತ್ತು ತಾವರೆಕೆರೆ (ಸ್ವಾಗತ್ ಕ್ರಾಸ್ ರಸ್ತೆ) ನಡುವಿನ 2.5 ಕಿಮೀ ಎತ್ತರದ ಮತ್ತು 13.76 ಕಿಮೀ ಭೂಗತ ಮಾರ್ಗವನ್ನು ಒಳಗೊಂಡಿದೆ, ಇದು ನಗರದ ಅತ್ಯಂತ ಸಂಕೀರ್ಣ ಮೆಟ್ರೋ ಯೋಜನೆಗಳಲ್ಲಿ ಒಂದಾಗಿದೆ.

ಎತ್ತರದ ಪಿಂಕ್ ಲೈನ್ ಮಾರ್ಗಗಳು:

ಕಲೆನ ಅಗ್ರಹಾರ

ಹುಳಿಮಾವು

ಐಐಎಂ-ಬೆಂಗಳೂರು

ಜೆ.ಪಿ. ನಗರ 4ನೇ ಹಂತ

ಜಯದೇವ

ತಾವರೆಕೆರೆ

ಇನ್ನು ಭೂಗತ ಮಾರ್ಗಗಳು ಬೆಂಗಳೂರಿನ ಅತಿ ಉದ್ದದ ಸುರಂಗವಾಗಿದ್ದು, ಇದು ಡಿಸೆಂಬರ್ 2026ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಪಿಂಕ್ ಲೈನ್ ಹಲವಾರು ಪ್ರಮುಖ ಕಾರಿಡಾರ್‌ಗಳೊಂದಿಗೆ ಸಂಪರ್ಕ ಸಾಧಿಸಲಿದ್ದು, ಪ್ರಯಾಣಿಕರಿಗೆ ಸುಲಭವಾಗಿ ಮಾರ್ಗಗಳನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಪ್ರಮುಖವಾಗಿ ಈ ಮಾರ್ಗದಲ್ಲಿ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಜಯದೇವ (ಯೆಲ್ಲೋ ಲೈನ್), ಎಂಜಿ ರಸ್ತೆ (ಪರ್ಪಲ್ ಲೈನ್), ಡೈರಿ ಸರ್ಕಲ್ (ರೆಡ್ ಲೈನ್), ನಾಗವಾರ (ಬ್ಲೂ ಲೈನ್), ಮತ್ತು ಜೆಪಿ ನಗರ 4 ನೇ ಹಂತ (ಆರೆಂಜ್ ಲೈನ್) ಸೇರಿವೆ.ಇದು ನಗರದ ಮಧ್ಯ ಮತ್ತು ದಕ್ಷಿಣ ಪ್ರದೇಶಗಳ ನಡುವಿನ ಪ್ರಯಾಣವನ್ನು ಗಮನಾರ್ಹವಾಗಿ ಸುಗಮಗೊಳಿಸಲಿದೆ.

ಇದನ್ನು ಓದಿ: ಬೆಂಗಳೂರು ಪಬ್ ಎಡವಟ್ಟು: ಕಾಕ್ ಟೇಲ್ ಬೆಂಕಿಯಿಂದ ಸುಟ್ಟುಹೋಯಿತು ಮಹಿಳೆಯ ಮುಖ, ₹1 ಲಕ್ಷ ಪರಿಹಾರಕ್ಕೆ ಆದೇಶ

ಈ ಮಾರ್ಗದ ಕಾರ್ಯಾಚರಣೆಗಾಗಿ ನಾಲ್ಕು ರೈಲು ಸೆಟ್‌ಗಳನ್ನು ನಿಯೋಜಿಸಲಾಗುವುದು. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಗಾಗಿ ಸರಬರಾಜು ಒಪ್ಪಂದದ ಅಡಿಯಲ್ಲಿ 318 ಮೆಟ್ರೋ ಬೋಗಿಗಳನ್ನು ಉತ್ಪಾದಿಸುತ್ತಿರುವ ಬಿಇಎಂಎಲ್ ಈ ರೈಲುಗಳನ್ನು ಪೂರೈಸಲಿದೆ. ಇವುಗಳಲ್ಲಿ 96 ಬೋಗಿಗಳನ್ನು (16 ರೈಲು ಸೆಟ್‌ಗಳಿಗೆ ಸಮ) ಪಿಂಕ್ ಲೈನ್‌ಗಾಗಿ ಮೀಸಲಿಡಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ