AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಬ್ಬಂದಿ ಆತ್ಮಹತ್ಯೆ ಪ್ರಕರಣ: ಓಲಾ ಎಲೆಕ್ಟ್ರಿಕ್ ಕಂಪನಿ ಸಿಇಒ, ಅಧಿಕಾರಿಗಳ ವಿರುದ್ಧ FIR

ಓಲಾ ಕಂಪನಿ ಸಿಬ್ಬಂದಿ ಅನಾಮಾನಸ್ಪದ ಸಾವು ಪ್ರಕರಣ ಸಂಬಂಧ ಓಲಾ ಎಲೆಕ್ಟ್ರಿಕ್ ಕಂಪನಿ ಸಿಇಒ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಸಿಬ್ಬಂದಿ ಆತ್ಮಹತ್ಯೆ ವಿಚಾರವಾಗಿ ಆರಂಭದಲ್ಲಿ ಪೊಲೀಸರು ಯಡಿಆರ್​ ದಾಖಲಿಸಿಕೊಂಡಿದ್ದರು. ಆದರೆ ಆ ಬಳಿಕ ಮನೆಯಲ್ಲಿ ಡೆತ್​ ನೋಟ್​ ಪತ್ತೆಯಾಗಿದ್ದು, ಅಧಿಕಾರಿಗಳ ಕಿರುಕುಳದ ವಿಷಯವನ್ನು ಸಿಬ್ಬಂದಿ ಅದರಲ್ಲಿ ಉಲ್ಲೇಖಿಸಿದ್ದರು. ಈ ಬಗ್ಗೆ ಕುಟುಂಬಸ್ಥರು ನೀಡಿದ್ದ ದೂರಿನ ಅನ್ವಯ ಕೇಸ್​ ದಾಖಲು ಮಾಡಲಾಗಿದೆ.

ಸಿಬ್ಬಂದಿ ಆತ್ಮಹತ್ಯೆ ಪ್ರಕರಣ: ಓಲಾ ಎಲೆಕ್ಟ್ರಿಕ್ ಕಂಪನಿ ಸಿಇಒ, ಅಧಿಕಾರಿಗಳ ವಿರುದ್ಧ FIR
ಓಲಾ ಎಲೆಕ್ಟ್ರಿಕ್ ಕಂಪನಿ ಸಿಇಒಗೆ ಶಾಕ್​ ಕೊಟ್ಟ ಖಾಕಿ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Oct 20, 2025 | 12:32 PM

Share

ಬೆಂಗಳೂರು, ಅಕ್ಟೋಬರ್​ 20: ಬೆಂಗಳೂರಲ್ಲಿ ಓಲಾ ಕಂಪನಿ ಸಿಬ್ಬಂದಿ ಅನಾಮಾನಸ್ಪದ ಸಾವು ಪ್ರಕರಣ ಸಂಬಂಧ ಓಲಾ (Ola) ಎಲೆಕ್ಟ್ರಿಕ್ ಕಂಪನಿ ಸಿಇಒ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಸಿಇಒ ಭವೇಶ್, ಹಿರಿಯ ಅಧಿಕಾರಿ ಸುಬ್ರತ್ ಕುಮಾರ್ ದಾಸ್, ಭವೀಶ್ ವಿರುದ್ಧ ಕೇಸ್ ದಾಖಲಾಗಿದೆ. ಕಂಪನಿಯ ಹೋಮೋಲೋಗೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆ.ಅರವಿಂದ್, ಸೆಪ್ಟೆಂಬರ್​ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಸಂಬಂಧ ಸಹಜವಾಗಿ ಪೊಲೀಸರು ಯುಡಿಆರ್​ ದಾಖಲಿಸಿಕೊಂಡಿದ್ದರು. ಆದರೆ ಅರವಿಂದ್ ಸಾವಿನ ಎರಡು ದಿನಗಳ ನಂತರ ಅವರ ಖಾತೆಗೆ ಕಂಪನಿಯಿಂದ 17 ಲಕ್ಷ 46 ಸಾವಿರ ಹಣ ಜಮೆ ಆಗಿತ್ತು. ಈ ಬಗ್ಗೆ ಅನುಮಾನದಿಂದ ಕಂಪನಿಯವರನ್ನು ಕುಟುಂಬ ಪ್ರಶ್ನಿಸಿದ್ದು, ಆ ವೇಳೆ ಕಂಪನಿಯ ಹೆಚ್​​ಆರ್ ಸೇರಿದಂತೆ ಕೆಲ ಸಿಬ್ಬಂದಿಯಿಂದ ಅಸ್ಪಷ್ಟ ಮಾಹಿತಿ ಸಿಕ್ಕಿತ್ತು. ಹೀಗಾಗಿ ಕುಟುಂಬಸ್ಥರು ಮನೆಯಲ್ಲಿ ಪರಿಶೀಲಿಸಿದಾಗ ಡೆತ್​ ನೋಟ್​ ಪತ್ತೆಯಾಗಿತ್ತು.

ಶಾಕ್​ ಕೊಟ್ಟ ಪೊಲೀಸರು

ಪತ್ತೆಯಾಗಿದ್ದ 28 ಪುಟಗಳ ಡೆತ್​ ನೋಟ್​

ಆತ್ಮಹತ್ಯೆ ವಿಚಾರವಾಗಿ ಅರವಿಂದ್​ ಬರೆದಿದ್ದ 28 ಪುಟಗಳ ಡೆತ್​ ನೋಟ್​ ನಲ್ಲಿ ಕೆಲಸದ ವಿಚಾರವಾಗಿ ಸುಬ್ರತ್ ಕುಮಾರ್, ಸಿಇಒ ಭವೀಶ್ ಅಗರ್ವಾಲ್ ಇಬ್ಬರೂ ನನಗೆ ತೀವ್ರ ಒತ್ತಡ ನೀಡುತ್ತಿದ್ದಾರೆ. ಭತ್ಯೆ ಮತ್ತು ವೇತನ ನೀಡದೆ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು. ಡೆತ್ ನೋಟ್ ಆಧಾರದಲ್ಲಿ ಅರವಿಂದ್ ಕುಟುಂಬಸ್ಥರು ದೂರು ನೀಡಿದ್ದು, ಈ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರ ಅನ್ವಯ ಸುಬ್ರತ್ ಕುಮಾರ್ ದಾಸ್, ಭವೀಶ್ ಅಗರ್ವಾಲ್, ಓಲಾ ಎಲೆಕ್ಟ್ರಿಕ್ ಕಂಪನಿಯನ್ನ ಆರೋಪಿಗಳನ್ನಾಗಿ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?