ಬೆಂಗಳೂರು: ವನ್ ವೇ, ನೋ ಎಂಟ್ರಿಯಲ್ಲಿ ನುಗ್ಗೋದು ಇಲ್ಲಿ ಕಾಮನ್, 80 ಸಾವಿರಕ್ಕೂ ಹೆಚ್ಚು ಪ್ರಕರಣ

|

Updated on: Sep 21, 2024 | 11:16 AM

ಎಲ್ಲೆಂದರಲ್ಲಿ ವಾಹನ ಚಲಾಯಿಸುವುದು, ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಡ್ರೈವ್ ಮಾಡುವುದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಹಜ. ಆದರೆ, ಈ ವರ್ಷ ವನ್ ವೇ, ನೋ ಎಂಟ್ರಿ ಉಲ್ಲಂಘನೆ ವಿಚಾರದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಬೆಚ್ಚಿಬೀಳಿಸುವಂತಿದೆ. ಸಂಚಾರ ಪೊಲೀಸರು ನೀಡಿದ ವಿವರ ಇಲ್ಲಿದೆ ನೋಡಿ.

ಬೆಂಗಳೂರು: ವನ್ ವೇ, ನೋ ಎಂಟ್ರಿಯಲ್ಲಿ ನುಗ್ಗೋದು ಇಲ್ಲಿ ಕಾಮನ್, 80 ಸಾವಿರಕ್ಕೂ ಹೆಚ್ಚು ಪ್ರಕರಣ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಸೆಪ್ಟೆಂಬರ್ 21: ಏಕಮುಖ (ವನ್ ವೇ) ಮತ್ತು ಪ್ರವೇಶ ರಹಿತ (ನೋ ಎಂಟ್ರಿ) ರಸ್ತೆ ನಿಯಮಗಳನ್ನು ಉಲ್ಲಂಘಿಸಿದ ಹತ್ತಾರು ಸಾವಿರ ಪ್ರಕರಣಗಳು ಈ ವರ್ಷ ಬೆಂಗಳೂರಿನಲ್ಲಿ ದಾಖಲಾಗಿದೆ ಎಂಬುದು ಸಂಚಾರ ಪೊಲೀಸ್ ವಿಭಾಗದ ಅಂಕಿಅಂಶಗಳಿಂದ ತಿಳಿದುಬಂದಿದೆ. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಈ ವರ್ಷ ಸುಮಾರು 80,000 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.

ನಗರದಲ್ಲಿ 354 ರಸ್ತೆಗಳಲ್ಲಿ ವನ್ ವೇ ಸಂಚಾರ ಇದೆ. ಸೆಪ್ಟೆಂಬರ್ 17 ರವರೆಗೆ, ಈ ರಸ್ತೆಗಳಲ್ಲಿ ತಪ್ಪು ದಿಕ್ಕಿನಲ್ಲಿ ಹೋಗುವ ವಾಹನಗಳ ವಿರುದ್ಧ ಪೊಲೀಸರು 40,093 ಪ್ರಕರಣಗಳನ್ನು ಮತ್ತು ನೋ ಎಂಟ್ರಿ ವಲಯಗಳನ್ನು ಪ್ರವೇಶಿಸಿದ್ದಕ್ಕಾಗಿ 79,863 ಪ್ರಕರಣಗಳನ್ನು ದಾಖಲಿಸಿದ್ದಾರೆ. ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಮತ್ತು 500 ರೂ. ದಂಡ ವಿಧಿಸಲಾಗುತ್ತಿದೆ.

ಬೈಕ್, ಆಟೋ ಚಾಲಕರಿಂದಲೇ ನಿಯಮ ಉಲ್ಲಂಘನೆ ಹೆಚ್ಚು

ದ್ವಿಚಕ್ರ ವಾಹನಗಳು ಮತ್ತು ಆಟೋ ರಿಕ್ಷಾಗಳು ಪ್ರಮುಖ ಅಪರಾಧಿಗಳಾಗಿದ್ದು, ಈ ಉಲ್ಲಂಘನೆಗಳನ್ನು ರಸ್ತೆ ಸುರಕ್ಷತೆಗೆ ಗಂಭೀರ ಬೆದರಿಕೆ ಎಂದು ಪೊಲೀಸರು ಪರಿಗಣಿಸುತ್ತಾರೆ. ಟ್ರಾಫಿಕ್ ಕ್ಯಾಮರಾಗಳು ಈ ಉಲ್ಲಂಘನೆಗಳನ್ನು ಸೆರೆಹಿಡಿಯದ ಕಾರಣ, ಪೊಲೀಸ್ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸುವವರನ್ನು ಪತ್ತೆಹಚ್ಚಿ ದಂಡ ವಿಧಿಸುತ್ತಿದ್ದಾರೆ ಎಂದು ಸಂಚಾರ ಪೊಲೀಸ್ ಉಪ ಆಯುಕ್ತ ಎಂಎ ಅನುಚೇತ್ ತಿಳಿಸಿದ್ದಾರೆ.

ಸೂಚನಾ ಫಲಕಗಳಿದ್ದರೂ ಸಹ, ಸಮಯವನ್ನು ಉಳಿಸಲು ಜನರು ಸಾಮಾನ್ಯವಾಗಿ ವನ್ ವೇ ಉಲ್ಲಂಘಿಸಿ ಚಾಲನೆ ಮಾಡುತ್ತಾರೆ. ಯಾವುದೇ ವಿಭಜಕಗಳಿಲ್ಲದಿರುವಲ್ಲಿ, ಅವರು ರಸ್ತೆಯ ಮತ್ತೊಂದು ಲೇನ್​​ನಲ್ಲಿ ಅಪಾಯಕಾರಿಯಾಗಿ ದಾಟುತ್ತಾರೆ, ಜೀವಕ್ಕೆ ಅಪಾಯವನ್ನುಂಟುಮಾಡುತ್ತಾರೆ ಎಂದು ಡಿಸಿಪಿ (ಸಂಚಾರ, ಪೂರ್ವ) ಕುಲದೀಪ್ ಕುಮಾರ್ ಜೈನ್ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಮೋಟಾರು ಬೈಕ್‌ಗಳು, ಸ್ಕೂಟರ್‌ಗಳು ಮತ್ತು ಯುಲು ದ್ವಿಚಕ್ರ ವಾಹನಗಳು ಪೂರ್ವ ವಿಭಾಗದಲ್ಲಿ ಹೆಚ್ಚು ನಿಯಮ ಉಲ್ಲಂಘಿಸಿವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯದಿಂದ ಬೆಂಗಳೂರಲ್ಲಿ ಕಣ್ಮರೆಯಾಗುತ್ತಿವೆ ಹಾಪ್ ಕಾಮ್ಸ್

ಮೋಟಾರು ವಾಹನ ಕಾಯ್ದೆಯಡಿ ಯುಲು ಸವಾರರಿಗೆ ದಂಡ ವಿಧಿಸಲು ಅವಕಾಶ ಇಲ್ಲದಿದ್ದರೂ, ತಪ್ಪಾದ ದಿಕ್ಕಿನಲ್ಲಿ ಚಾಲನೆಗಾಗಿ ಪ್ರತಿದಿನ ಸರಾಸರಿ 150 ಪ್ರಕರಣಗಳನ್ನು ದಾಖಲಿಸುತ್ತದೆ ಎಂದು ಜೈನ್ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ