ಶಿಕ್ಷಕರಾಗಿ ಹದಿನೈದು ವರ್ಷಗಳಾದರೂ ವರ್ಗಾವಣೆ ಇಲ್ಲ: ಸ್ವಂತ ಊರಿಗೆ ವರ್ಗಾವಣೆ ಮಾಡಿ, ಇಲ್ಲ ವಿಷ ಕೊಡಿ; ಸರ್ಕಾರಿ ಪ್ರೈಮರಿ ಶಿಕ್ಷಕರಿಂದ ಪ್ರತಿಭಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 19, 2022 | 2:57 PM

ಪ್ರತಿಭಟನೆಯಲ್ಲಿ ಪುರುಷರು, ಮಹಿಳೆಯರು ಸೇರಿದಂತೆ ನೂರಾರು ಸರ್ಕಾರದ ಶಿಕ್ಷಕರು ಭಾಗಿಯಾಗಿದ್ದು, ಸೇವಾವಧಿಯಲ್ಲಿ ಒಮ್ಮೆ ಸ್ವಂತ ಜಿಲ್ಲೆಗೆ ವರ್ಗಾವಣೆ ಬೇಕು ಎಂದು ಪ್ರತಿಭಟನೆ ಮಾಡಲಾಗುತ್ತಿದೆ. 

ಶಿಕ್ಷಕರಾಗಿ ಹದಿನೈದು ವರ್ಷಗಳಾದರೂ ವರ್ಗಾವಣೆ ಇಲ್ಲ: ಸ್ವಂತ ಊರಿಗೆ ವರ್ಗಾವಣೆ ಮಾಡಿ, ಇಲ್ಲ ವಿಷ ಕೊಡಿ; ಸರ್ಕಾರಿ ಪ್ರೈಮರಿ ಶಿಕ್ಷಕರಿಂದ ಪ್ರತಿಭಟನೆ
ಸರ್ಕಾರಿ ಪ್ರೈಮರಿ ಶಿಕ್ಷಕರಿಂದ ಪ್ರತಿಭಟನೆ
Follow us on

ಬೆಂಗಳೂರು: ಶಿಕ್ಷಕರಾಗಿ ಹದಿನೈದು ವರ್ಷಗಳು ಕಳೆದರೂ ವರ್ಗಾವಣೆ (Transfer) ಇಲ್ಲ. ಸ್ವಂತ ಊರಿಗೆ ವರ್ಗಾವಣೆ ಮಾಡಿ, ಇಲ್ಲದಿದ್ದರೆ ವಿಷವನ್ನು ಕೊಡಿ ಎಂದು ಟೀಚರ್ಸ್ ಆಕ್ರೋಶ ಹೊರಹಾಕಿದ್ದು, ಸರ್ಕಾರಿ ಪ್ರೈಮರಿ ಶಿಕ್ಷಕರಿಂದ ನಗರದ ಕಬ್ಬನ್ ಪಾರ್ಕ್​ನ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಹದಿನೈದು ವರ್ಷಗಳಿಂದ ಒಂದೇ ಶಾಲೆಯಲ್ಲಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಫ್ಯಾಮಿಲಿಯಿಂದ ದೂರವಾಗಿ ಖಿನ್ನತೆ ಒಳಗಾಗುತ್ತಿದ್ದಾರೆ. ಹದಿನೈದು ವರ್ಷಗಳಿಂದ ಸ್ವಂತ ಊರು ಫ್ಯಾಮಿಲಿ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹದಿನೈದು ವರ್ಷಗಳಿಂದ ವರ್ಗಾವಣೆ ಇಲ್ಲಿದೆ ಇರುವುದರಿಂದ ಸಂಬಂಧಗಳು ದೂರ ಆಗುತ್ತಿವೆ. ಇದರಿಂದಾಗಿ ಟೀಚರ್ ಫ್ಯಾಮಿಲಿಗಳಲ್ಲಿ ಅನೇಕ ಅಹಿತಕರ ಘಟನೆಗಳು ಆಗಿವೆ. ಪ್ರತಿಭಟನೆಯಲ್ಲಿ ಪುರುಷರು, ಮಹಿಳೆಯರು ಸೇರಿದಂತೆ ನೂರಾರು ಸರ್ಕಾರದ ಶಿಕ್ಷಕರು ಭಾಗಿಯಾಗಿದ್ದು, ಸೇವಾವಧಿಯಲ್ಲಿ ಒಮ್ಮೆ ಸ್ವಂತ ಜಿಲ್ಲೆಗೆ ವರ್ಗಾವಣೆ ಬೇಕು ಎಂದು ಪ್ರತಿಭಟನೆ ಮಾಡಲಾಗುತ್ತಿದೆ.

ಶಿಕ್ಷಣ ಮುಂದುವರಿಸಲು ದಾರಿ ಮಾಡಿಕೊಡಿ; ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳು ಪ್ರತಿಭಟನೆ:

ಯುದ್ಧ ಪೀಡಿತ ಉಕ್ರೇನ್​ನಿಂದ ಭಾರತಕ್ಕೆ ಬಂದ ಅನೇಕ ವಿದ್ಯಾರ್ಥಿಗಳು ದೆಹಲಿಯ ಜಂತರ್​-ಮಂತರ್​​ನಲ್ಲಿ ಒಟ್ಟಿಗೇ ಸೇರಿ, ತಮಗೆ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ನೀಡಬೇಕು. ಅರ್ಧಕ್ಕೆ ನಿಂತ ವೃತ್ತಿಯನ್ನು ಮುಂದುವರಿಸಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.  ಉಕ್ರೇನ್​ನಲ್ಲಿ ಭಾರತದ ಅನೇಕ ವಿದ್ಯಾರ್ಥಿಗಳು ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದರು. ಆದರೆ ಫೆ.24ರಿಂದ ರಷ್ಯಾ ಯುದ್ಧ ಶುರು ಮಾಡಿತು. ಅಲ್ಲಿ ವಸತಿ, ಆಹಾರ, ಶಿಕ್ಷಣಕ್ಕೆಲ್ಲ ಸಮಸ್ಯೆಯಾಯಿತು. ಜೀವ ಉಳಿಸಿಕೊಳ್ಳಲೂ ಕಷ್ಟಪಡುವ ಪರಿಸ್ಥಿತಿ ಈ ವಿದ್ಯಾರ್ಥಿಗಳಿಗೆ ಬಂದೊದಗಿತು.  ಆ ಸಂದರ್ಭದಲ್ಲಿ ಅವರ ಕೈ ಹಿಡಿದಿದ್ದು ಭಾರತದ ಸರ್ಕಾರ. ಆಪರೇಶನ್​ ಗಂಗಾ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ, ಎಲ್ಲ ವಿದ್ಯಾರ್ಥಿಗಳನ್ನೂ ಭಾರತಕ್ಕೆ ಕರೆತಂದಿದೆ. ಅವರು ಭಾರತಕ್ಕೇನೋ ಬಂದಿದ್ದಾರೆ. ಆದರೆ ಅಲ್ಲಿ ಅರ್ಧಕ್ಕೆ ಮೊಟಕುಗೊಂಡ ಶಿಕ್ಷಣ ಮುಂದುವರಿಸುವುದು ಅವರಿಗೆ ಈಗ ಸಮಸ್ಯೆಯಾಗಿದೆ. ಕೆಲವು ರಾಜ್ಯಗಳು ತಾವು ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿ ಹೊರುವುದಾಗಿ ಹೇಳಿಕೊಂಡಿದ್ದರೂ, ಕೇಂದ್ರ ಸರ್ಕಾರ ಮುಂದಾಗಿ ಒಂದು ನಿಯಮ ತರಬೇಕು ಎಂಬುದು ಸದ್ಯ ಕೇಳಿಬರುತ್ತಿರುವ ಬೇಡಿಕೆ.

ಇದನ್ನೂ ಓದಿ:

ಶಿಕ್ಷಣದಲ್ಲಿ ದೊಡ್ಡ ಬದಲಾವಣೆಗಾಗಿ ಗುಜರಾತ್‌ನ ವಿದ್ಯಾ ಸಮೀಕ್ಷಾ ಕೇಂದ್ರವನ್ನು ಅಧ್ಯಯನ ಮಾಡುವಂತೆ ರಾಜ್ಯಗಳಿಗೆ ಮೋದಿ ಸೂಚನೆ

ಪ್ರಶಾಂತ್​ ನೀಲ್​ಗೆ ಅಪ್ಪು ಬಗ್ಗೆ ಇದ್ದ ತಪ್ಪು ಕಲ್ಪನೆ ಬದಲಾಯಿಸಿತ್ತು ಆ ಒಂದು ಸಿನಿಮಾ