ಬೆಂಗಳೂರು: ಇಂಧನ ಬೆಲೆ, ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಕೆ.ಸಿ.ನಾರಾಯಣಗೌಡ ಮಾತನಾಡಿದ್ದು, ನಿಜವಾದ ಗ್ಯಾಸ್ ಬಳಕೆದಾರರು ಯಾರೂ ಬೀದಿಗೆ ಬಂದಿಲ್ಲ. ಬೀದಿಗೆ ಬಂದಿರುವವರು ರಾಜಕಾರಣಿಗಳು. ಬೆಲೆ ಏರಿಕೆ ಆಗುತ್ತಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಆದರೆ ಇಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಒಂದು ಡ್ರಾಮಾ ನಡೆಯುತ್ತಿದೆ. ಸಮಸ್ಯೆ ಯಾರಿಗೂ ಆಗಿಲ್ಲ, ಇದು ರಾಜಕಾರಣದ ಪಿತೂರಿ. ಕಾಂಗ್ರೆಸ್ ಸರ್ಕಾರ ಇರುವಾಗ ಬೆಲೆ ಏರಿಕೆ ಆಗಿರಲಿಲ್ವಾ? ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.
ಹೆಣ್ಮಕ್ಕಳಿಗೆ ತೊಂದರೆ ಆಗಬಾರದೆಂದು ಮನೆ ಮನೆಗೆ ಉಚಿತ ಗ್ಯಾಸ್ ಸೌಲಭ್ಯ ಕೊಟ್ಟವರು ಯಾರು? ಇಂಧನ ಬೆಲೆ ಫ್ಲೆಕ್ಸಿಬಲ್ ಇರುತ್ತದೆ. ಬೆಲೆ ಏರಿಕೆ ಸಮಸ್ಯೆ ಬಗೆಹರಿಸಲು ಪ್ರಧಾನಿ ಸನ್ನದ್ಧವಾಗುತ್ತಿದ್ದಾರೆ. ಕಾಂಗ್ರೆಸ್‌ನವರಿಂದ ನಾವು ಹೇಳಿಸಿಕೊಳ್ಳಬೇಕಾಗಿಲ್ಲ. ಇಂಧನ ಬೆಲೆ ಹೆಚ್ಚಳ ಅಂತ ಪ್ರತಿಭಟನೆ ಮಾಡಿಸುತ್ತಿರುವುದು ರಾಜಕಾರಣ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ.
ಬೆಲೆ ಏರಿಕೆ ತಾತ್ಕಾಲಿಕ, ಅದು ಕಡಿಮೆ ಆಗುತ್ತದೆ. ಆದರೆ ಶಾಸಕರದ್ದು, ಸಚಿವರದ್ದು ವೇತನ ಹೆಚ್ಚಳ ಆಗಿಲ್ಲ. ನಾವೂ ಕೂಡ ಕೇಳಿಲ್ಲ. ಶಾಸಕರಿಗೂ ಡೀಸೆಲ್, ಪೆಟ್ರೋಲ್ ಖರ್ಚು ಇರುತ್ತದೆ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಇದನ್ನೂ ಓದಿ:
ಪ್ರತಿ ಶಾಲೆಯಲ್ಲೂ ಕನಿಷ್ಠ ಒಂದು ಗುಂಟೆಯಾದರೂ ಆಟದ ಮೈದಾನ ಇರಬೇಕು: ಕ್ರೀಡಾ ಸಚಿವ ನಾರಾಯಣಗೌಡ
LPG ಸಿಲಿಂಡರ್ಗೆ 50 ರೂಪಾಯಿ ಹೆಚ್ಚಳವಾಯ್ತು; ವಿಮಾನ ಇಂಧನ ಬೆಲೆಯೂ ಏರಿಕೆ
Published On - 1:31 pm, Fri, 3 September 21