ಬಡವರಿಗೆ ಕಳಪೆ ಮನೆ ಕಟ್ಟಿಕೊಡಲಾಗುತ್ತಿದೆ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಗಂಭೀರ ಆರೋಪ
ಶ್ರೀನಿವಾಸಪುರದ 5 ಕೊಳಚೆ ಪ್ರದೇಶಗಳಲ್ಲಿ 600 ಮನೆಗಳನ್ನು ಮಂಜೂರು ಮಾಡಲಾಗಿತ್ತು. 31.76 ಕೋಟಿಗಳಿಗೆ ಗುತ್ತಿಗೆ ಪಡೆಯಲಾಗಿತ್ತು. 2018 ಮಾರ್ಚ್ ನಲ್ಲಿ ಕೆಲಸ ಆರಂಭವಾಗಿದ್ದು, 18 ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ, 18 ತಿಂಗಳು ಕಳೆದರೂ ಮನೆಗಳು ನಿರ್ಮಾಣವಾಗಿಲ್ಲ.
ಬೆಂಗಳೂರು: ಬಡವರಿಗೆ ಕಳಪೆ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕೋಲಾರ ಶ್ರೀನಿವಾಸಪುರ ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ. ಶ್ರೀನಿವಾಸಪುರದ 5 ಕೊಳಚೆ ಪ್ರದೇಶಗಳಲ್ಲಿ 600 ಮನೆಗಳನ್ನು ಮಂಜೂರು ಮಾಡಲಾಗಿತ್ತು. 31.76 ಕೋಟಿಗಳಿಗೆ ಗುತ್ತಿಗೆ ಪಡೆಯಲಾಗಿತ್ತು. 2018 ಮಾರ್ಚ್ ನಲ್ಲಿ ಕೆಲಸ ಆರಂಭವಾಗಿದ್ದು, 18 ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ, 18 ತಿಂಗಳು ಕಳೆದರೂ ಮನೆಗಳು ನಿರ್ಮಾಣವಾಗಿಲ್ಲ ಎಂದು ಆರೋಪಿಸಿ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಲಲಿತಾ ಶ್ರೀನಿವಾಸ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಚಂದ್ರೇಗೌಡರು ಎಂಬುವರಿಗೆ ಗುತ್ತಿಗೆ ನೀಡಲಾಗಿತ್ತು. ಬಳಿಕ ರಮೇಶ್ ಕುಮಾರ್ ಅವರ ಹಿಂಬಾಲಕರಾದ ಭಾಸ್ಕರ್ ಎಂಬುವರಿಗೆ ಸಬ್ ಕಾಂಟ್ರಾಕ್ಟ್ ಕೊಡಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಸ್ಲಂ ಬೋರ್ಡ್ ಆಯುಕ್ತರಿಗೆ ಹಾಗೂ ಅಧ್ಯಕ್ಷರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಟ್ಟುತ್ತಿರುವ ಮನೆಗಳು ತುಂಬಾ ಕಳಪೆಯಾಗಿವೆ. ಇದನ್ನ ಪ್ರಶ್ನೆ ಮಾಡಿದವರ ಮೇಲೆಯೇ ದರ್ಪ ಮೆರೆಯುತ್ತಾರೆ. ಪುರಸಭೆ ಅಧ್ಯಕ್ಷೆಯಾಗಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿಸುತ್ತಿರುವ ಮನೆ ಕಳಪೆ ಕಾಮಗಾರಿಯಿಂದ ಕೂಡಿದೆ. ಇದು ಗೊತ್ತಿದ್ದರೂ ಗುತ್ತಿಗೆದಾರರಿಗೆ ಬೆಂಬಲ ನೀಡ್ತಿದ್ದಾರೆ. ಬಡವರಿಗೆ ಕಳಪೆ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಈ ಬಗ್ಗೆ ಮೊದಲು ಡಿಸಿಯವರಿಗೆ ದೂರು ನೀಡಲಾಗಿತ್ತು. ಆದರೆ, 1 ವರ್ಷ ಕಳೆದರೂ ಯಾವುದೇ ಆಕ್ಷನ್ ತಗೊಂಡಿಲ್ಲ. ಮೂರು ದಿನಗಳ ಹಿಂದೆ ರಮೇಶ್ ಕುಮಾರ್ ಸ್ಥಳ ಪರಿಶೀಲನೆಗೆ ಹೋಗಿದ್ದರು. ಈ ವೇಳೆ ರಮೇಶ್ ಕುಮಾರ್ ಧಮ್ಕಿ ಹಾಕಿದ್ದಾರೆ. ಇಷ್ಟು ದಿನ ಕಾನೂನು ಹೋರಾಟ ಮಾಡಲಾಗ್ತಿತ್ತು. ಈಗ ಹೈಕೋರ್ಟ್‌ನಲ್ಲಿ ರಿಟ್ ಹಾಕಲು ತಯಾರಿ ಮಾಡಲಾಗಿದೆ ಎಂದಿದ್ದಾರೆ. ಕಮಿಷನ್ಗಾಗಿ ಈ ರೀತಿ ಪುರಸಭೆ ಅಧ್ಯಕ್ಷರು ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಅಂತಾ ಲಲಿತಾ ಶ್ರೀನಿವಾಸ್ ಆಗ್ರಹಿಸಿದ್ದಾರೆ.
(Allegation of corruption on Ex Speaker Ramesh Kumar on Constructing houses for poor)
ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಯನ್ನು ಬೈಯ್ಯಲು ನಾನು ಶತ್ರುವಾ? ವಾಹನ ನಿಲ್ಲಿಸಲು ನಿಯಮ ಇಲ್ವಾ ಎಂದು ಕೇಳಿದ್ದೆ: ರಮೇಶ್ ಕುಮಾರ್
ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪತ್ರದ ಮೂಲಕ ಅಸಮಾಧಾನ ಹೊರ ಹಾಕಿದ ಪೊಲೀಸ್ ಸಿಬ್ಬಂದಿ